
ಕೆವಿಎನ್ (ಕೆವಿಎನ್) ನಿರ್ಮಾಣ ಸಂಸ್ಥೆ ಇಕ್ಕಟ್ಟಿಗೆ ಸಿಲುಕಿದೆ. ಕೆವಿಎನ್ ನಿರ್ಮಾಣ ಮಾಡಿರುವ ಎರಡು ದೊಡ್ಡ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆಯಾಗಿದೆ. ಕೆವಿಎನ್ ಮತ್ತು ಯಶ್ ಅವರ ಮಾನ್ ಸ್ಟರ್ ಮೈಂಡ್ಸ್ ಒಟ್ಟಿಗೆ ನಿರ್ಮಾಣ ಮಾಡಿರುವ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಿಂದ ಜೂನ್ 4ಕ್ಕೆ ಬಿಡುಗಡೆಯಾಗಿದೆ. ಅದಕ್ಕೆ ಮುಂಚೆಯೇ ಕೆವಿಎನ್ ಅವರೇ ನಿರ್ಮಿಸಿರುವ ದಳಪತಿ ವಿಜಯ್ ನಟನೆಯ ‘ಜನ ನಾಯಕನ್’ ಸಿನಿಮಾ ರಾಜಕೀಯ ಕಾರಣಗಳಿಂದಾಗಿ ಬಿಡುಗಡೆ ಆಗದೆ ಡಬ್ಬದಲ್ಲೇ ಕುಳಿತಿದೆ. ಆದರೆ ಇದೀಗ ಮಾರ್ಚ್ 9ಕ್ಕೆ ‘ಜನ ನಾಯಕ’ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.
ಜನವರಿ 23ಕ್ಕೆ ಬಿಡುಗಡೆ ಆಗಬೇಕಿದ್ದ ‘ಜನ ನಾಯಕನ್’ ಸಿನಿಮಾಕ್ಕೆ ಸೆನ್ಸಾರ್ ಸಮಸ್ಯೆ ಎದುರಾಗಿತ್ತು. ಸಿನಿಮಾವನ್ನು ಸೆನ್ಸಾರ್ ನವರು ರಿವಿಷನ್ ಕಮಿಟಿಗೆ ಕಳಿಸಲು ಮುಂದಾಗಿದ್ದರು. ಅದರ ವಿರುದ್ಧ ಕೆವಿಎನ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಅಲ್ಲಿಯೂ ಸಹ ನ್ಯಾಯ ವಿಳಂಬ ಆದ ಕಾರಣಕ್ಕೆ ಸಿನಿಮಾವನ್ನು ಸೆನ್ಸಾರ್ ನ ರಿವಿಷನ್ ಸಮಿತಿಗೆ ಕಳಿಸಲು ಕೆವಿಎನ್ ಒಪ್ಪಿಕೊಂಡಿದ್ದರು. ಅದರಂತೆ ಮಾರ್ಚ್ 09ರಂದು ರಿವಿಷನ್ ಸಮಿತಿಯವರು ‘ಜನ ನಾಯಕನ್’ ಸಿನಿಮಾವನ್ನು ವೀಕ್ಷಿಸಲಿದ್ದಾರೆ, ಸೆನ್ಸಾರ್ ಪ್ರಮಾಣ ಪತ್ರ ನೀಡಲಿದ್ದಾರೆ.
ಮಾರ್ಚ್ 09 ರಂದು ಎರಡು ಗಂಟೆಗೆ ಸೆನ್ಸಾರ್ ನಲ್ಲಿ ‘ಜನ ನಾಯಕ’ ಸಿನಿಮಾ ಪ್ರದರ್ಶನ ಆಗಲಿದೆ, ಸಿನಿಮಾ ನೋಡಿದ ಸೆನ್ಸಾರ್ ಸದಸ್ಯರ ಸಿನಿಮಾದ ಯಾವ ದೃಶ್ಯಗಳಿಗೆ ಕತ್ತರಿ ಹಾಕಲಿದ್ದಾರೆ. ಸಿನಿಮಾಕ್ಕೆ ಯಾವ ಪ್ರಮಾಣ ಪತ್ರ ನೀಡಲಿದ್ದಾರೆ ಎಂಬುದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಒಂದೊಮ್ಮೆ ಸೆನ್ಸಾರ್ ಪ್ರಮಾಣ ಪತ್ರ ಲಭ್ಯವಾಗಲಿದ್ದು ವಾರಗಳಲ್ಲಿಯೇ ‘ಜನ ನಾಯಕನ್’ ಸಿನಿಮಾವನ್ನು ಕೆವಿಎನ್. ಆದರೆ ಸೆನ್ಸಾರ್ ನವರು ಮಾರ್ಚ್ 09 ರಂದು ಇನ್ನೇನು ಕಿರಿಕ್ ಮಾಡುತ್ತಾರೋ ಎಂಬ ಭಯವೂ ಕೆವಿಎನ್ ಗೆ ಇದೆ.
ಇದನ್ನೂ ಓದಿ:’ಜನ ನಾಯಕ’ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಲಾಕ್?
‘ಜನ ನಾಯಕನ್’ ಸಿನಿಮಾವು ತೆಲುಗಿನ ‘ಭಗವಂತ್ ಕೇಸರಿ’ ಸಿನಿಮಾದ ರಿಮೇಕ್ ಆಗಿದೆ. ಆದರೆ ದಳಪತಿ ವಿಜಯ್ ಅವರು ತಮ್ಮ ರಾಜಕೀಯ ಪಕ್ಷದ ಅಜೆಂಡವನ್ನು ಸಹ ಈ ಸಿನಿಮಾದಲ್ಲಿ ಸೇರಿಸಿದ್ದಾರೆ. ವಿಪಕ್ಷಗಳನ್ನು ಟೀಕೆ ಮಾಡುವ ಸಂಭಾಷಣೆಗಳು, ತಮ್ಮ ಪಕ್ಷವನ್ನು ಕೊಂಡಾಡುವ ಸಂಭಾಷಣೆ, ದೃಶ್ಯಗಳು ‘ಜನ ನಾಯಕ’ ಸಿನಿಮಾದಲ್ಲಿರುವ ಕಾರಣ ಸಿನಿಮಾ ಬಿಡುಗಡೆ ಆಗದಂತೆ ಇತರ ರಾಜಕೀಯ ಪಕ್ಷಗಳು ಪ್ರಭಾವ ಬೀರಿವೆ.
‘ಜನ ನಾಯಕನ್’ ಸಿನಿಮಾವನ್ನು ಎಚ್ ವಿನೋದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ. ಮಲಯಾಳಂ ನಟಿ ಮಮಿತಾ ಬಿಜು ಸಹ ಸಿನಿಮಾನಲ್ಲಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ