
ಮೈಸೂರು, (ಮಾರ್ಚ್ 07): ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದ ಪಿಳ್ಳಹಳ್ಳಿ ಗ್ರಾಮದಲ್ಲಿ ನಡೆದಿದ್ದ ಆದಿಶಕ್ತ್ಯ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನ ಮಹೋತ್ಸವ ಹಾಗೂ ಕುಂಭಕಳದ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ (ಸಿಎಂ ಸಿದ್ದರಾಮಯ್ಯ) ಭಾಗವಹಿಸಿದ್ದು, ಇದೇ ವೇಳೆ ತಂಬಿಟ್ಟು, ಕೊಬ್ಬರಿ ಮಿಠಾಯಿ ಬಗ್ಗೆ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಚಾಮುಂಡೇಶ್ವರಿ, ವರುಣ ಕ್ಷೇತ್ರದ ಜನರಿಗೆ ಕೃತಜ್ಞತೆಯಿಂದ ಇರುವೆ. ವಿಶೇಷವಾಗಿ ಪಿಳ್ಳಹಳ್ಳಿ ಜನ ಯಾವತ್ತು ಕೈಬಿಟ್ಟಿಲ್ಲ. ದೇವಸ್ಥಾನದ ಒಳಗೆ ಇರುತ್ತಾನೆ ಅನ್ನೋದು ನಂಬಿಕೆ ಅಷ್ಟೇ. ಪೂಜೆ ಮಾಡುವುದರಿಂದ ಒಳ್ಳೆಯದು ಆಗುತ್ತೆ ಅನ್ನೋ ನಂಬಿಕೆ ಇದೆ. ನಾನು ಅದಕ್ಕೆ ವಿರೋಧವಾಗಿಲ್ಲ. ನಮ್ಮೂರಲ್ಲೂ ದಂಡಿನ ಮಾರಮ್ಮನ ದೇವಸ್ಥಾನ ಇದೆ. ನಾನು ಚಿಕ್ಕವನಿದ್ದಾಗ ತಂಬಿಟ್ಟು ಆರತಿ ತೆಗೆದುಕೊಂಡು ಹೋಗಿದ್ದೆ. ಆಗ ತಂಬಿಟ್ಟು, ಕೊಬ್ಬರಿ ಮಿಠಾಯಿ ತಿನ್ನುವುದೇ ಮಜಾ ಎಂದು ಅಂದಿನ ನೆನಪುಗಳನ್ನು ನೆನಪಿಸಿಕೊಂಡರು.