
ದಾವಣಗೆರೆ, (ಮಾರ್ಚ್ 07): ಖಾಸಗಿ ಆಸ್ಪತ್ರೆ ನರ್ಸ್, ಕಷ್ಟ ಅಂತ ಹೇಳಿಕೊಂಡು ಉದ್ಯಮಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದು, ಬಳಿಕ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಹೌದು..ದಾವಣಗೆರೆಯ (ದಾವಣಗೆರೆ) ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣ (ಹನಿಟ್ರ್ಯಾಪ್ ಪ್ರಕರಣ) ವಿದ್ಯಾನಗರ ಉದ್ಯಮಿಗಳಿಗೆ ಭೇದಿಸಿದ್ದು, ಹನಿಟ್ರ್ಯಾಪ್ ಮಾಡಿದ್ದ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನಿಟ್ರ್ಯಾಪ್ ಸೂತ್ರದಾರಿ ನರ್ಸ್ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬುವರು ಬಂಧಿತ ಅರೋಪಿಗಳು.
ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಹೋಗಿ ಉದ್ಯಮಿ ಪ್ರಭು ಎಂಬವರನ್ನು ಬುಟ್ಟಿಗೆ ಹಾಕಿಸಿಕೊಂಡ ನರ್ಸ್, ತನ್ನ ತಂಡದೊಂದಿಗೆ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿದ್ದಳು. ಇದೀಗ ನಾಲ್ವರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಇದನ್ನೂ ಓದಿ: ದಂಪತಿ ಕೈ, ಕಾಲು ಕಟ್ಟಿ ಸಿನಿಮಾ ಮಾದರಿ ದರೋಡೆ: 4 ತಿಂಗಳ ಬಳಿಕ ಖಾಕಿ ಬಲೆಗೆ ಬಿದ್ದ ಖತರ್ನಾಕ್ ಗ್ಯಾಂಗ್
ಘಟನೆ ಹಿನ್ನೆಲೆ
ಮೊದಲು ಉದ್ಯಮಿ ಪ್ರಭು ಎಂಬವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಷ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಸಹಾಯ ಮಾಡುವಂತೆ ಕೇಳಿಸಿಕೊಂಡಳು. ಪರಿಚಯ ಮಾಡಿಕೊಂಡ ಸುಷ್ಮಿಯಾ, ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭು ಅವರನ್ನ ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಸರ್ವೀಸ್ ಅಪಾರ್ಟ್ಮೆಂಟ್ ಗೆ ಕರೆಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಇಬ್ಬರ ಭೇಟಿ ನಡೆಯುತ್ತಿದೆ.
ಆದರೆ, ಕಳೆದ ಒಂದು ವಾರದ ಹಿಂದೆ ಸುಶ್ಮೀತಾ ಜೊತೆ ಆಕೆಯ ಸ್ನೇಹಿತೆ ಕೂಡ ಸರ್ವೀಸ್ ಅಪಾರ್ಟ್ಮೆಂಟ್ ಗೆ ಬಂದಿದ್ದಳು. ಸಂಜನಾಳನ್ನು ಪ್ರತ್ಯೇಕ ರೂಂನಲ್ಲಿ ಇರಿಸಿ ಸುಷ್ಮಿತಾ ಹಾಗೂ ಪ್ರಭು ಒಬ್ಬ ರೂಮ್ ನಲ್ಲಿ ಇದ್ದರು.ಈ ಸಂದರ್ಭದಲ್ಲಿ ಸಂಜನಾ, ರಾಹುಲ್, ಬೆಕ್ಕಿನಕಣ್ಣು ಕೃಷ್ಣ ಮೂರು ಜನ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡು ಪ್ರಭು ಸುಷ್ಮಿತಾ ಇದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ನಿಮ್ಮ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ಯಾವ ವಿಡಿಯೋ ಆಚೆ ಬರಬಾರದು ಅಂದ್ರೆ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಸಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಬಳಿಕ ಆರೋಪಿಗಳಾದ ಚನ್ನಬಸಪ್ಪ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್ ಸೇರಿ ಪ್ರಭುಗಳಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ಪ್ರಭು, ಕೊನೆಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಪ್ರಕರಣ ದಾಖಲಿಸಿಕೊಂಡ, ಹಣ ಕೊಡುವದಾಗಿ ಪ್ರಭು ಅವರಿಂದ ಹೇಳಿಸಿ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಕರೆಯಿಸಿಕೊಂಡು ಲಾಕ್ ಮಾಡಿದ್ದಾರೆ.