ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 8ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 8ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3 ರ ಮಾರ್ಚ್ 8 ರ ದಿನಭವಿಷ್ಯ

 

 

ಬೆಳಿಗ್ಗೆ ಸ್ನಾನದ ನಂತರ ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಸೂರ್ಯನಿಗೆ ಅರ್ಪಿಸಿ (ಅರ್ಘ್ಯ ನೀಡುವುದು). ಇದರಿಂದ ಮನಸ್ಸಿನ ಗೊಂದಲಗಳು ನಿವಾರಣೆಯಾಗಿ, ದಿನವಿಡೀ ಚೈತನ್ಯ ಇರುತ್ತದೆ.

 

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಲ್ಯಾಪ್ ಟಾಪ್- ಮೊಬೈಲ್ ಫೋನ್ ಇಂಥವುಗಳನ್ನು ಚಾರ್ಜ್ ಹಾಕುವಾಗ ಸಹ ಮುಂಜಾಗ್ರತೆಯನ್ನು ವಹಿಸಿ. ಈ ಹಿಂದೆ ನಿಮಗೆ ಕೆಲವು ಹುದ್ದೆ- ಸ್ಥಾನಮಾನ ಸಿಗದ ರೀತಿಯಲ್ಲಿ ನೋಡಿಕೊಂಡಿರುವ ವ್ಯಕ್ತಿಗಳು ಯಾರು ಹಾಗೂ ನಿಮಗೆ ಅಡ್ಡಗಾಲು ಹಾಕುವುದಕ್ಕೆ ಏನೆಲ್ಲ ಮಾಡಿದರು ಎಂಬ ಬಗ್ಗೆ ವಿಶ್ವಾಸಾರ್ಹವಾದ ಮೂಲಗಳಿಂದ ಮಾಹಿತಿ ದೊರೆಯಲಿದೆ. ವಾಹನಗಳ ಕಲಿಕೆ ಆರಂಭಿಸಬೇಕು ಅಂದುಕೊಂಡವರು ಅಥವಾ ಈಗ ಡ್ರೈವಿಂಗ್ ಕ್ಲಾಸ್ ಮೊದಲಾದವರು ಹೆಚ್ಚು ಏಕಾಗ್ರತೆಯಿಂದ ತೊಡಗಿಸಿಕೊಳ್ಳುತ್ತಾರೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಒಂದು ವೇಳೆ ನೀವೇನಾದರೂ ಲೆಕ್ಕಪತ್ರದ ಕಾರ್ಯ ನಿರ್ವಹಿಸುವವರಾದಲ್ಲಿ ವರ್ಷಗಳಿಂದ ಗಮನಕ್ಕೆ ಬಾರದೆ ಉಳಿದುಹೋದ ಹಣಕಾಸಿನ ಅವ್ಯವಹಾರವೊಂದು ನಿಮ್ಮ ಗಮನಕ್ಕೆ ಬರಲಿದೆ. ಇದನ್ನು ಮೇಲಧಿಕಾರಿಗಳಿಗೆ ತಿಳಿಸಬಾರದು ಎಂದು ನಿಮ್ಮ ಜೊತೆಗೆ ಕೆಲಸ ಮಾಡುವವರು ಕೇಳಿಕೊಳ್ಳಲಿದ್ದಾರೆ. ಇಲಿಕಲ್ ವಸ್ತುಗಳನ್ನು ಬಳಸುವಾಗ ಬಹಳ ಎಚ್ಚರಿಕೆ ವಹಿಸಬೇಕು. ವಿದ್ಯುತ್ ಶಾಕ್, ಶಾರ್ಟ್ ಸರ್ಕೀಟ್ ಇಂಥದ್ದೇನಾದರೂ ಈ ದಿನ ಸಂಭವಿಸುವ ಸಾಧ್ಯತೆ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ನಿಮ್ಮಲ್ಲಿ ಕೆಲವು ಪುಸ್ತಕ ಬರೆಯುವುದಕ್ಕೆ ಅಂತಲೇ ಕೆಲವು ಸ್ಥಳಗಳಿಗೆ ಪ್ರವಾಸ ತೆರಳಿದೆ. ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಮ್ಮ ನಿರ್ಧಾರಕ್ಕೆ ಸಂಗಾತಿಯ ಬೆಂಬಲ ಇರುತ್ತದೆ. ಪ್ರೀತಿಯಲ್ಲಿ ಇರುವವರು ತಮ್ಮ ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾವ ಮಾಡುವ ಬಗ್ಗೆ ನಿರ್ಧರಿಸಲಾಗಿದೆ.

ಲೇಖನ- ಸ್ವಾತಿ ಎನ್.ಕೆ.

 

 



Source link

Leave a Reply

Your email address will not be published. Required fields are marked *