Headlines

ನಿಮ್ಮ ಮನೆಗೂ ತಟ್ಟಿತು ಇರಾನ್‌ ಯುದ್ಧದ ಬಿಸಿ ! ಅಡುಗೆ ಸಿಲಿಂಡರ್‌ ದರ ಭಾರೀ ದುಬಾರಿ | Heat Of Iran War Reaches Your Home Too Lpg Cylinder Prices Soar

ನಿಮ್ಮ ಮನೆಗೂ ತಟ್ಟಿತು ಇರಾನ್‌ ಯುದ್ಧದ ಬಿಸಿ ! ಅಡುಗೆ ಸಿಲಿಂಡರ್‌ ದರ ಭಾರೀ ದುಬಾರಿ | Heat Of Iran War Reaches Your Home Too Lpg Cylinder Prices Soar



ನಿಮ್ಮ ಮನೆಗೂ ತಟ್ಟಿತು ಇರಾನ್‌ ಯುದ್ಧದ ಬಿಸಿ ! ಅಡುಗೆ ಸಿಲಿಂಡರ್‌ ದರ ಭಾರೀ ದುಬಾರಿ | Heat Of Iran War Reaches Your Home Too Lpg Cylinder Prices Soar

ಮಧ್ಯಪ್ರಾಚ್ಯ ಬಿಕ್ಕಟ್ಟು ಇದೀಗ ನೇರವಾಗಿ ಕೋಟ್ಯಂತರ ಭಾರತೀಯ ಕುಟುಂಬಗಳ ಅಡುಗೆ ಮನೆಗೇ ಪ್ರವೇಶಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 60 ರು. ಮತ್ತು ವಾಣಿಜ್ಯ ಸಿಲಿಂಡರ್‌ ಬೆಲೆ 115 ರು.ನಷ್ಟು ಹೆಚ್ಚಳ

ನವದೆಹಲಿ: ಮಧ್ಯಪ್ರಾಚ್ಯ ಬಿಕ್ಕಟ್ಟು ಇದೀಗ ನೇರವಾಗಿ ಕೋಟ್ಯಂತರ ಭಾರತೀಯ ಕುಟುಂಬಗಳ ಅಡುಗೆ ಮನೆಗೇ ಪ್ರವೇಶಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಅನಿಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು 60 ರು. ಮತ್ತು ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು 115 ರು.ನಷ್ಟು ಹೆಚ್ಚಳ ಮಾಡಿದೆ. ಬೆಲೆ ಏರಿಕೆ ಶುಕ್ರವಾರದಿಂದಲೇ ಜಾರಿಗೆ ಬಂದಿದೆ.

ಈ ದರ ಏರಿಕೆ ಬಳಿಕ, ಈಗಾಗಲೇ ಸಬ್ಸಿಡಿರಹಿತವಾಗಿರುವ 14.2 ಕೆ.ಜಿ. ತೂಕದ ಗೃಹ ಬಳಕೆಯ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 915 ರು.ಗೆ, ದೆಹಲಿಯಲ್ಲಿ 913 ರು.ಗೆ ತಲುಪಿದೆ. ಕಳೆದ ಏಪ್ರಿಲ್‌ನಲ್ಲಿ ಕೂಡ ಎಲ್‌ಪಿಜಿ ಬೆಲೆಯಲ್ಲಿ 50 ರು. ಏರಿಕೆ ಮಾಡಲಾಗಿತ್ತು.

ಆದರೆ ಉಜ್ವಲಾ ಯೋಜನೆಯಡಿ ದೇಶದ 10 ಕೋಟಿ ಬಡವರಿಗೆ ವಿತರಿಸುವ ಗೃಹ ಬಳಕೆಯ ಎಲ್‌ಪಿಜಿ ದರವೂ 60 ರು. ಏರಿಕೆಯಾಗಲಿದೆ. ಅವರಿಗೆ 300 ರು. ಸಬ್ಸಿಡಿ ಇರುವುದರಿಂದ 615 ರು.ಗೆ ಸಿಲಿಂಡರ್‌ ಸಿಗಲಿದೆ. ಈ ಯೋಜನೆಯಡಿ ವಾರ್ಷಿಕ 12 ಸಿಲಿಂಡರ್‌ ಖರೀದಿಸಬಹುದಾಗಿದೆ.

ಇನ್ನು ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ 19 ಕೆ.ಜಿ. ತೂಕದ ಸಿಲಿಂಡರ್‌ ಬೆಲೆಯಲ್ಲಿ 114.5 ರು. ಹೆಚ್ಚಳ ಮಾಡಲಾಗಿದೆ. ಹೆಚ್ಚಳದ ಬಳಿಕ ಸಿಲಿಂಡರ್‌ ಬೆಲೆ ಬೆಂಗಳೂರಿನಲ್ಲಿ 1958 ರು.ಗೆ ತಲುಪಿದೆ.

ಪೆಟ್ರೋಲ್‌ ಏರಿಕೆ ಇಲ್ಲ:

ಈ ನಡುವೆ ಸರ್ಕಾರ ಶೀಘ್ರವೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನೂ ಏರಿಸಲಿದೆ ಎಂಬ ವದಂತಿಗಳು ಹಬ್ಬಿದ್ದು, ಸರ್ಕಾರ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ. ಅಂಥ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಖಚಿತಪಡಿಸಿವೆ.

ಗೃಹ ಬಳಕೆ ಹಾಲಿ ದರ – ಪರಿಷ್ಕೃತ ದರ

₹855

₹915

ವಾಣಿಜ್ಯ ಬಳಕೆ ಹಾಲಿ ದರ – ಪರಿಷ್ಕೃತ ದರ

1843 – 1958

₹110 11 ತಿಂಗಳಲ್ಲಿ ಗೃಹ ಬಳಕೆ

ಸಿಲಿಂಡರ್‌ ದರ ಹೆಚ್ಚಳ ಪ್ರಧಾನಿ ಮೋದಿ ಹುದ್ದೆ ತ್ಯಜಿಸಲಿ

ಸಿಲಿಂಡರ್ ಬೆಲೆ ಏರಿಕೆ ಅನಿವಾರ್ಯವಾಗಿರಲಿಲ್ಲ. ಶರಣಾಗತಿಯೇ ವಿದೇಶಾಂಗ ನೀತಿ, ರಾಜತಾಂತ್ರಿಕತೆ ಎಂಬುದು ಪ್ರದರ್ಶನದ ವಸ್ತು ಎಂದು ತಿಳಿದಿರುವುದರ ಫಲವೇ ಈ ದರ ಏರಿಕೆ. ಜಾಗತಿಕ ಮಟ್ಟದಲ್ಲಿ ದೇಶದ ಮಾನ ಕಳೆಯುತ್ತಿರುವ ಮೋದಿ ಜನರ ಕ್ಷಮೆಯಾಚಿಸಿ, ರಾಜೀನಾಮೆ ನೀಡಲಿ.

ಸಿದ್ದರಾಮಯ್ಯ, ಮುಖ್ಯಮಂತ್ರಿ



Source link

Leave a Reply

Your email address will not be published. Required fields are marked *