ಅಮೆರಿಕದ ₹28000 ಕೋಟಿ ಥಾಡ್‌ ಕ್ಷಿಪಣಿ ವ್ಯವಸ್ಥೆ ನಾಶ- ಜೋರ್ಡಾನ್‌ನಲ್ಲಿದ್ದ ರಾಡಾರ್‌ ವ್ಯವಸ್ಥೆಗೆ ಇರಾನ್‌ ಪೆಟ್ಟು | Thaad Worth Rs 28000 Crore Of The United States Destroyed

ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷ 8ನೇ ದಿನವೂ ತೀವ್ರಗತಿಯಲ್ಲಿ ಸಾಗುತ್ತಿದ್ದು, ಶನಿವಾರ ಇರಾನ್ ಜೋರ್ಡಾನ್‌ನ ಮುವಫ್ಫಕ್ ಸಲ್ತಿ ವಾಯುನೆಲೆಯಲ್ಲಿ ಅಮೆರಿಕದ ಮಹತ್ವದ ಎಎನ್‌/ಟಿಪಿವೈ-2 ರಾಡಾರ್‌ ವ್ಯವಸ್ಥೆಯನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.

ಅಮ್ಮಾನ್‌: ಅಮೆರಿಕ-ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಸಂಘರ್ಷ 8ನೇ ದಿನವೂ ತೀವ್ರಗತಿಯಲ್ಲಿ ಸಾಗುತ್ತಿದ್ದು, ಶನಿವಾರ ಇರಾನ್ ಜೋರ್ಡಾನ್‌ನ ಮುವಫ್ಫಕ್ ಸಲ್ತಿ ವಾಯುನೆಲೆಯಲ್ಲಿ ಅಮೆರಿಕದ ಮಹತ್ವದ ಎಎನ್‌/ಟಿಪಿವೈ-2 ರಾಡಾರ್‌ ವ್ಯವಸ್ಥೆಯನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.

ಸ್ವತಃ ಅಮೆರಿಕ ಅಧಿಕಾರಿಗಳೇ ದೃಢಪಡಿಸಿದ್ದಾರೆ

ಈ ಹಾನಿಯನ್ನು ಸ್ವತಃ ಅಮೆರಿಕ ಅಧಿಕಾರಿಗಳೇ ದೃಢಪಡಿಸಿದ್ದಾರೆ. ಥಾಡ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಒಳಪಟ್ಟ ಈ ರಾಡಾರ್‌ 27.5 ಸಾವಿರ ಕೋಟಿ ರು. ಬೆಲೆ ಹೊಂದಿದೆ. ಇದು ಬಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿ, ಇಂಟರ್‌ಸೆಪ್ಟರ್ ಕ್ಷಿಪಣಿಗಳನ್ನು ಮಾರ್ಗದರ್ಶನ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿತ್ತು. ಇದು ಧ್ವಂಸವಾಗಿರುವುದರಿಂದ, ಪಿಎಸಿ-3 ಕ್ಷಿಪಣಿಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಆದರೆ ಈ ಕ್ಷಿಪಣಿಗಳು ಸೀಮಿತ ಸಂಖ್ಯೆಯಲ್ಲಿವೆ. ಹೀಗಾಗಿ ಕೊಲ್ಲಿ ಪ್ರದೇಶದಲ್ಲಿ ಅಮೆರಿಕದ ವಾಯು ರಕ್ಷಣಾ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.

ಕತಾರ್‌ನಲ್ಲಿದ್ದ ಎನ್‌/ಎಫ್‌ಪಿಎಸ್‌ -132 ರಾಡಾರ್‌ ವ್ಯವಸ್ಥೆ ಧ್ವಂಸ

4 ದಿನಗಳ ಹಿಂದೆ ಕತಾರ್‌ನಲ್ಲಿದ್ದ ಎನ್‌/ಎಫ್‌ಪಿಎಸ್‌ -132 ರಾಡಾರ್‌ ವ್ಯವಸ್ಥೆಯನ್ನೂ ಇರಾನ್‌ ಕ್ಷಿಪಣಿಗಳು ಧ್ವಂಸಗೊಳಿಸಿದ್ಚದವು. ಇದರಿಂದ ಅಮೆರಿಕ ದಾಳಿ ಮತ್ತು ದಾಳಿ ತಡೆಗೆ ಭಾರೀ ಹೊಡೆತ ಬಿದ್ದಿತ್ತು. ಇದರಿಂದ ಅಂದಾಜು 10000 ಕೋಟಿ ರು.ನಷ್ಟವಾಗಿತ್ತು ಎನ್ನಲಾಗಿದೆ.

Source link

Leave a Reply

Your email address will not be published. Required fields are marked *