
T20 ವಿಶ್ವಕಪ್ 2026: ಟಿ20 ಫೈನಲ್‌ಗೆ ಮುನ್ನ ಭಾರತ ತಂಡ ಅಹಮದಾಬಾದ್‌ನಲ್ಲಿರುವ ಹೋಟೆಲ್ ಅನ್ನು ಬದಲಾಯಿಸಲಾಗಿದೆ. ಇದರ ಬೆನ್ನಲ್ಲೇ ಇದು ಕಾಕತಾಳೀಯವೋ ಅಥವಾ ಮೂಢನಂಬಿಕೆಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಏಕೆಂದರೆ ಈ ಹಿಂದಿನ ಪಂದ್ಯಗಳ ವೇಳೆ ಭಾರತ ತಂಡ ಐಟಿಸಿ ನರ್ಮದಾ (ITC ನರ್ಮದಾ) ಹೋಟೆಲ್‌ನಲ್ಲಿ ಉಳಿದುಕೊಂಡಿತ್ತು. ಈ ವೇಳೆ ಸೌತ್ ಆಫ್ರಿಕಾ ವಿರುದ್ಧ ಸೋಲನುಭವಿಸಿದ್ದರು.
ಇದಕ್ಕೂ ಮುನ್ನ 023ರ ಏಕದಿನ ಇದೇ2 ಫೈನಲ್ ಪಂದ್ಯದ ವೇಳೆಯೂ ಹೋಟೆಲ್‌ನಲ್ಲಿ ತಂಗಿದ್ದರು. ಆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೃದಯವಿದ್ರಾವಕ ಸೋಲನ್ನು ಅನುಭವಿಸಿತ್ತು. ಹೀಗಾಗಿಯೇ ಟೀಮ್ ಇದೀಗ ಇಂಡಿಯಾ ಫೈನಲ್ ಪಂದ್ಯಕ್ಕೂ ಮುನ್ನ ಹೋಟೆಲ್ ಬದಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಅದರಂತೆ ಇದೀಗ ಟೀಮ್ ಇಂಡಿಯಾ ಆಟಗಾರರು ತಾಜ್ ಸ್ಕೈಲೈನ್ (ತಾಜ್ ಸ್ಕೈಲೈನ್) ಹೋಟೆಲ್‌ನಲ್ಲಿ ತಂಗಿದ್ದಾರೆ. ಅತ್ತ ನ್ಯೂಝಿಲೆಂಡ್ ತಂಡವು ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ಉಳಿದುಕೊಂಡಿದೆ.
ಈ ಹೋಟೆಲ್ ಬದಲಾವಣೆಗೆ ಐಸಿಸಿ ಶಿಷ್ಟಾಚಾರದ ಕಾರಣ ಎಂಬ ಮಾತು ಕೇಳಿ ಬಂದಿದೆ. ಏಕೆಂದರೆ ಫೈನಲ್ ತಲುಪಿದ ಮೊದಲ ತಂಡಕ್ಕೆ (ನ್ಯೂಝಿಲೆಂಡ್) ಐಟಿಸಿ ನರ್ಮದಾ ಹೋಟೆಲ್ ಹಂಚಿಕೆಯಾಗಿತ್ತು. ಹೀಗಾಗಿ ಭಾರತ ತಂಡ ಬೇರೆ ಹೋಟೆಲ್‌ಗೆ ಹೋಗಬೇಕೆಂದು ಹೇಳಲಾಗಿದೆ.
ಇದಾಗ್ಯೂ ಟೀಮ್ ಇಂಡಿಯಾ ಸಿಬ್ಬಂದಿ ವರ್ಗದಲ್ಲಿರುವ ವ್ಯಕ್ತಿಯೋರ್ವರು ಅಪಶಕುನಗಳ ಬಗ್ಗೆ ಹೆಚ್ಚಿನ ನಂಬಿಕೆಯುಳ್ಳವರು. ಅವರ ಸಲಹೆ ಈ ಬದಲಾವಣೆಯನ್ನು ಮಾಡಲಾಗಿದೆ. ಈ ಹಿಂದೆ ಕೂಡ ಅವರು ಇಂತಹ ಸಲಹೆಗಳನ್ನು ನೀಡಿದ್ದರು.
ಇದಕ್ಕೆ ತಾಜಾ ಉದಾಹರಣೆ, ಟೀಮ್ ಇಂಡಿಯಾ ಚಂದ್ರಗ್ರಹಣದ ವೇಳೆ ಅಭ್ಯಾಸ ನಡೆಸದೇ ಇರುವುದು. ಭಾರತೀಯ ಆಟಗಾರರು ಚಂದ್ರಗ್ರಹಣದ ದಿನದಂದು ತಡವಾಗಿ ಅಭ್ಯಾಸಕ್ಕೆ ಹಾಜರಾಗಿದ್ದರು.
ಅಭ್ಯಾಸದ ಮೂಲದಂತೆ ಸಂಜೆ 6:00 ಗಂಟೆಗೆ ಪ್ರಾರಂಭವಾಗಬೇಕಿದ್ದ ತರಬೇತಿಯು, ಗ್ರಹಣದ ಸಂಜೆ 7:20ಕ್ಕೆ ಪ್ರಾರಂಭವಾಯಿತು. ಹಿಂದೂ ಸಂಪ್ರದಾಯದಲ್ಲಿ, ಗ್ರಹಣದ ಸಮಯದಲ್ಲಿ ಯಾವುದಾದರೂ ಪ್ರಮುಖ ಕಾರ್ಯದಲ್ಲಿ ನಿರತರಾಗುವುದು ಒಳಿತಲ್ಲ ಎಂದು ನಂಬುವುದಿಲ್ಲ. ಈ ಸಲಹೆಯನ್ನು ಕೂಡ ಇದೇ ಸಿಬ್ಬಂದಿ ನೀಡಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: ಏನಾದ್ರು ಹೊಸ ಡೈಲಾಗ್ ಹೇಳ್ರಪ್ಪಾ… ಸೂರ್ಯಕುಮಾರ್ ಯಾದವ್ ತಿರುಗೇಟು
ಇದೀಗ ಅದೇ ಸಿಬ್ಬಂದಿ ಹೋಟೆಲ್ ಬದಲಾವಣೆಗೆ ಬ್ಯಾಡ್ ಲಕ್ ಹೋಗಲಾಡಿಸಲು ಸಲಹೆ ಇದೆ. ಈ ಸಲಹೆಯಂತೆ ಟೀಮ್ ಇಂಡಿಯಾ ಹೋಟೆಲ್ ಬದಲಿಸಿದ್ದು, ಈ ಮೂಲಕ ಲಕ್ ಅನ್ನು ಕೂಡ ಬದಲಾಯಿಸುವ ವಿಶ್ವಾಸವಿದೆ.