ಇರಾನ್ ದಾಳಿಯ ಭೀತಿಯಿಂದಾಗಿ, ಸ್ನಾನ ಮಾಡಲು ಸುರಕ್ಷಿತ ಸಮಯವನ್ನು ತಿಳಿಸಲು ಇಸ್ರೇಲ್ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಇದೇ ವೇಳೆ, ಇರಾನ್ ನಕಲಿ ಹೆಲಿಕಾಪ್ಟರ್ಗಳನ್ನು ಬಳಸಿ ಇಸ್ರೇಲ್ನ ದುಬಾರಿ ಕ್ಷಿಪಣಿಗಳನ್ನು ವ್ಯರ್ಥವಾಗುವಂತೆ ಮಾಡುವ ಮೂಲಕ ತಿರುಗೇಟು ನೀಡುತ್ತಿದೆ.
ಜೆರುಸಲೇಂ: ಇಸ್ರೇಲ್ನಲ್ಲಿ ಯಾವುದೇ ಕ್ಷಣಕ್ಕೆ ಇರಾನ್ ದಾಳಿ ಮಾಡುವ ಸಂಭವವಿರುವುದರಿಂದ, ಈಗ ಸ್ನಾನ ಮಾಡಬಹುದೇ, ಬೇಡವೇ ಅಥವಾ ಎಷ್ಟು ಹೊತ್ತಿಗೆ ಸ್ನಾನ ಮಾಡುವುದು ಸೂಕ್ತ ಎಂಬುದನ್ನು ತಿಳಿಸಲು ಹೊಸ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ದಾಳಿಯಾದರೆ ಸುರಕ್ಷಿತ ಕೊಠಡಿಗೆ ಅಥವಾ ಬಾಂಬ್ ತಡೆ ಕೇಂದ್ರಗಳಿಗೆ ತಲುಪಲು ಕನಿಷ್ಠ 30-90 ಸೆಕೆಂಡ್ಗಳು ಬೇಕು. ಸ್ನಾನ ಮಾಡುತ್ತಿರುವಾಗ ದಾಳಿಯಾಗಿಬಿಟ್ಟರೆ, ಒದ್ದೆ ಮೈಯಲ್ಲಿ ಅಥವಾ ಬೆತ್ತಲೆಯಾಗಿ ಓಡಿಬರಲು ಸಾಧ್ಯವಿಲ್ಲ. ಹೀಗಾಗಿಯೇ ಹೊಸ ಆ್ಯಪ್ ಅನ್ನು ರೂಪಿಸಲಾಗಿದೆ. ಇದಕ್ಕೆ ‘ಸ್ನಾನ ಮಾಡಬಹುದೇ’ ಎಂದು ಪ್ರಶ್ನಿಸಿದರೆ, ಡೇಟಾ ಮೂಲಕ ದಾಳಿಯ ಸಂಭಾವ್ಯತೆಯನ್ನು ಪರಿಶೀಲಿಸಿ ಉತ್ತರ ನೀಡುತ್ತದೆ. ನೂತನ ತಂತ್ರಜ್ಞಾನಗಳ ಮೂಲಕ ಸುದ್ದಿಗಾಗುವ ಇಸ್ರಲ್ನ ಈ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಟೆಹ್ರಾನ್: ತನ್ನ ಗುಪ್ತಚರ ತಂತ್ರಗಳ ಮೂಲಕ ಇರಾನ್ ಅನ್ನು ಇಸ್ರೇಲ್ ತನ್ನ ಬಲೆಗೆ ಬೀಳಿಸಿಕೊಂಡ ರೀತಿಯಲ್ಲೇ ಇರಾನ್ ಕೂಡಾ ಇಸ್ರೇಲ್ ಅನ್ನು ಏಮಾರಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ನಕಲಿ ಚಿತ್ರ ಇಲ್ಲವೇ ಕಾಪ್ಟರ್ ಮಾದರಿಗಳನ್ನು ರಸ್ತೆ ಮೇಲೆ ನಿಲ್ಲಿಸಿ ಅದನ್ನು ವಾಸ್ತವ ಯುದ್ಧ ಕಾಪ್ಟರ್ ಎಂದು ಬಿಬಿಸಿ ಅದರ ಮೇಲೆ ಇಸ್ರೇಲ್ ಡ್ರೋನ್ ದಾಳಿ ಮಾಡುವಂತೆ ಇರಾನ್ ಬಲೆ ಬೀಸಿದೆ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಯುದ್ಧಕ್ಕೆ ಧುಮುಕಲು ರೆಡಿ ಎಂದ ಪಾಕಿಸ್ತಾನ: ಇರಾನ್ ಸಂಘರ್ಷದ ನಡುವೆ ಆಪ್ತ ದೇಶ ಸೌದಿಗೆ ಪಾಕ್ ನೆರವಿನ ಅಭಯ

ಇತ್ತೀಚೆಗೆ ಇರಾನ್ ಮೇಲೆ ಇಸ್ರೇಲ್ ನಡೆಸಿದ ಕೆಲ ದಾಳಿಯ ಚಿತ್ರಗಳು ಇಂಥದ್ದೊಂದು ಸಂದೇಹಕ್ಕೆ ಕಾರಣವಾಗಿದೆ. ಹೀಗೆ ನಕಲಿ ಕಾಪ್ಟರ್ ಅಥವಾ ಚಿತ್ರಗಳನ್ನು ಇರಾನ್ ಕೆಲವೇ ಸಾವಿರ ರು. ವೆಚ್ಚ ಮಾಡಿ ನಿರ್ಮಿಸಿದ್ದರೆ, ಅದರ ಧ್ವಂಸಕ್ಕೆ ಇಸ್ರೇಲ್ ಕೋಟ್ಯಂತರ ಮೌಲ್ಯದ ಡ್ರೋನ್, ಕ್ಷಿಪಣಿ ಕಳೆದುಕೊಳ್ಳುತ್ತಿದೆ. ಇದರಿಂದ ಇಸ್ರೇಲ್ಗೆ ಆರ್ಥಿಕವಾಗಿ ಭಾರೀ ನಷ್ಟವಾಗುತ್ತಿದೆ ಎಂದು ವರದಿಗಳು ಹೇಳಿವೆ.

ಇದನ್ನೂಓದಿ: ಅಮೆರಿಕದ ₹28000 ಕೋಟಿ ಥಾಡ್ ಕ್ಷಿಪಣಿ ವ್ಯವಸ್ಥೆ ನಾಶ

Source link
ಯುದ್ಧಗ್ರಸ್ತ ಇಸ್ರೇಲ್ನಲ್ಲಿ ಸ್ನಾನಕ್ಕೆ ಸೂಕ್ತ ಸಮಯ ಸೂಚಿಸುವ ಆ್ಯಪ್ ಸಿದ್ಧ; ಇರಾನ್ನ ಮಾಸ್ಟರ್ಪ್ಲಾನ್