Headlines

Basavaraj Horatti on education: ಶಿಕ್ಷಕರಿಗೆ ಬೋಧನೆ ಬಿಟ್ಟು ಬೇರೆ ಕೆಲಸ ನೀಡಬಾರದು -ಬಸವರಾಜ ಹೊರಟ್ಟಿ | Speaker Basavaraj Horatti Says To Improve Quality Of Education Teachers Must Not Be Assigned Non Teaching Tasks

Teachers’ role in education quality ಗದಗದಲ್ಲಿ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡಿದ ಬಸವರಾಜ ಹೊರಟ್ಟಿ, ಶಿಕ್ಷಕರಿಗೆ ಬೋಧನೆ ಬಿಟ್ಟು ಬೇರೆ ಕೆಲಸ ನೀಡಬಾರದು ಎಂದರು. ಶೇ.100 ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಡೆದ ಶಾಲೆಗಳ ಸನ್ಮಾನದ ಕುರಿತು ತಿಳಿಯಿರಿ.

ಗದಗ (ಮಾ.8): ಶಿಕ್ಷಣದ ಗುಣಮಟ್ಟ ಹೆಚ್ಚಳವಾಗಬೇಕಾದರೆ ಶಿಕ್ಷಕರಿಗೆ ಇಲಾಖೆ ಅಥವಾ ಸರ್ಕಾರ ಬೋಧನೆ ಬಿಟ್ಟರೆ ಯಾವುದೇ ಅನ್ಯ ಕೆಲಸಗಳನ್ನು ನೀಡಬಾರದು ಎಂದು ವಿಪ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಜಿಲ್ಲಾ ಘಟಕ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಎಸ್‌ಎಸ್‌ಎಲ್‌ಸಿ ಶೇ. 100 ಫಲಿತಾಂಶ ಪಡೆದ ಶಾಲಾ ಮುಖ್ಯಸ್ಥರಿಗೆ ಸನ್ಮಾನ, ಫಲಿತಾಂಶ ಸುಧಾರಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ಸಮಾಜದ ಶಿಲ್ಪಿಗಳು, ಆಧುನಿಕ ಸಮಾಜದ ವ್ಯವಸ್ಥೆಗೆ ತಕ್ಕಂತೆ ಮಕ್ಕಳಲ್ಲಿ ಜ್ಞಾನ ತುಂಬುವ ಕಾರ್ಯ ಮಾಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ ಯುವ ಮುಖಂಡ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಜ್ಞಾನವನ್ನು ಮಕ್ಕಳಿಗೆ ನೀಡಿ ಗುಣಾತ್ಮಕ ಫಲಿತಾಂಶ ಪಡೆಯುವಂತೆ ಪ್ರೇರಣಾದಾಯಕ ಕಲಿಕೆಯನ್ನು ಎಲ್ಲ ಗುರುಬಳಗ ಮಾಡುವುದರಿಂದ ಯಾವುದೇ ಸ್ಪರ್ಧೆಯಲ್ಲಿ ಮಕ್ಕಳು ಉತ್ತಮ ಫಲಿತಾಂಶ ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ, ಬೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿದರು. ಪ್ರತಿಶತ 100 ಫಲಿತಾಂಶ ಪಡೆದ 76 ಶಾಲಾ ಮುಖ್ಯಶಿಕ್ಷಕರಿಗೆ ಸರ್ಕಾರದಿಂದ ನೀಡಿದ ಪ್ರಶಸ್ತಿ ಫಲಕ ಹಾಗೂ ತಲಾ ₹25,000 ಚೆಕ್‌ಗಳನ್ನು ನೀಡಿ ಗೌರವಿಸಲಾಯಿತು.

ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ, ಎಂ.ಕೆ. ಲಮಾಣಿ, ಎ.ಎಸ್. ಪಾಟೀಲ, ಈಶ್ವರ ನಾಯಕ, ಜಿ.ಆರ್. ಭಟ್, ಉಮೇಶ ಹಿರೇಮಠ, ರವಿ ದಂಡಿನ, ಡಾ. ಬಿ.ಜಿ. ಜವಳಿ, ಎಸ್.ಎಸ್. ಪಟ್ಟಣಶೆಟ್ಟರ, ಡಾ. ಶರಣು ಗೋಗೇರಿ, ಡಾ. ಬಸವರಾಜ ಬಳ್ಳಾರಿ, ವಿ.ವಿ. ನಡುವಿನಮನಿ, ಎಂ.ಎಚ್. ಕಂಬಳಿ, ಎ.ಎನ್. ಕಂಬೋಗಿ, ಶ್ರೀನಿವಾಸ ಹುಯಿಲಗೋಳ, ಬಿ.ಎಫ್. ಪೂಜಾರ, ರವೀಂದ್ರ ಶೆಟ್ಟೆಪ್ಪನವರ, ಗಂಗಾಧರ ಅಣ್ಣಿಗೇರಿ, ಎಚ್.ಬಿ. ರಡ್ಡೇರ, ಕನವಳ್ಳಿ, ಬಿ.ಡಿ. ಯರಗೊಪ್ಪ, ಬೂದಪ್ಪ ಅಂಗಡಿ, ನವೀನ ಬಸವರಡ್ಡಿ, ಡಿ.ಎನ್. ಮರಡ್ಡಿ, ಎಲ್.ಎಸ್. ಅರಳಿಹಳ್ಳಿ, ಎಚ್.ಟಿ. ಬಿಜ್ಜೂರ, ಬಿ.ಕೆ. ನಿಂಬನಗೌಡರ, ಆರ್.ವಿ. ಗೊಂಡಬಾಳ, ಝಡ್.ಎಂ. ಖಾಜಿ, ಬಿ.ಸಿ. ಗುಳೇದ ಹಾಗೂ ಜಿಲ್ಲಾ ಸಮಸ್ತ ಪ್ರೌಢಶಾಲಾ ಶಿಕ್ಷಕ ಬಳಗ ಇದ್ದರು.

Source link

Leave a Reply

Your email address will not be published. Required fields are marked *