
ಬೆಂಗಳೂರು, ಮಾರ್ಚ್ 08: ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಭರದಿಂದ ನಡೆದಿದ್ದು, ವಾರ್ಡ್ ವಾರು ಅಂತಿಮ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ. ಒಟ್ಟು 369 ವಾರ್ಡ್‌ಗಳಿಗೆ ನಗರಾಭಿವೃದ್ದಿ ಇಲಾಖೆ ಮೀಸಲಾತಿ ಅಂತಿಮಗೊಳಿಸಿದ್ದು, ಈ ಮೇಲಕ್ಕೆ 176 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿವೆ. ಸಾರ್ವಜನಿಕರಿಂದ ಕರಡು ಪಟ್ಟಿಗೆ ಸಾರ್ವಜನಿಕರಿಂದ ಸೂಚಿಸಿದ ಸಲಹೆ ಮತ್ತು ಸೂಚನೆಗಳ ಜೊತೆಗೆ ಸರ್ಕಾರದ ಜೊತೆಗೆ ಕೆಲವು ವಿಚಾರಗಳನ್ನು ಚರ್ಚಿಸಿ, ಸೂಕ್ತವಾದವುಗಳನ್ನು ಆಯ್ಕೆಮಾಡಲು ಈ ಅಂತಿಮ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
ಮೀಸಲಾತಿ ವಿವರ
ಬೆಂಗಳೂರು ನಗರ ಕೇಂದ್ರ ಪಾಲಿಕೆ
- ಒಟ್ಟು ವಾರ್ಡ್ಗಳ ಸಂಖ್ಯೆ – 63
- SC – 11 (5 ಮಹಿಳೆಯರು)
- ಎಸ್ಟಿ – 1
- ಹಿಂದುಳಿದ ವರ್ಗ(ಎ) – 15 (ಮಹಿಳೆ 7)
- ಹಿಂದುಳಿದ ವರ್ಗ(B) – 4 (ಮಹಿಳೆ 2)
- ಸಾಮಾನ್ಯ – 32 (ಮಹಿಳೆ 16)
- ಮಹಿಳೆಯರಿಗೆ ಒಟ್ಟು 30 ವಾರ್ಡ್‌ಗಳು ಮೀಸಲು
ಇದನ್ನೂ ಓದಿ: ಮೈತ್ರಿ ಪಕ್ಷಗಳ ನಡುವೆ ಲಯ ತಪ್ಪಿದ ತಾಳ ಮೇಳ; ನಾಯಕರ ನಡುವೆ ಇಲ್ವಂತೆ ಸಮನ್ವಯತೆ!
ಬೆಂಗಳೂರು ಪೂರ್ವ ನಗರ ಪಾಲಿಕೆ
- ಒಟ್ಟು ವಾರ್ಡ್ಗಳ ಸಂಖ್ಯೆ – 50
- SC – 7 (ಮಹಿಳೆ 3)
- ಎಸ್ಟಿ – 1
- ಹಿಂದುಳಿದ ವರ್ಗ (A) – 14 (ಮಹಿಳೆ 7)
- ಹಿಂದುಳಿದ ವರ್ಗ (B) – 3 (ಮಹಿಳೆ 1)
- ಸಾಮಾನ್ಯ – 25 (ಮಹಿಳೆ 12)
- ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್‌ಗಳು – 23
ಬೆಂಗಳೂರು ಪಶ್ಚಿಮ ನಗರ ಪಾಲಿಕೆ
- ಒಟ್ಟು ವಾರ್ಡ್ಗಳ ಸಂಖ್ಯೆ – 112
- SC – 9 (ಮಹಿಳೆ 4)
- ST – 2 (ಮಹಿಳೆ 1)
- ಹಿಂದುಳಿದ ವರ್ಗ (A) – 30 (ಮಹಿಳೆ 15)
- ಹಿಂದುಳಿದ ವರ್ಗ (B) – 7 (ಮಹಿಳೆ 3)
- ಸಾಮಾನ್ಯ – 64 (ಮಹಿಳೆ 32)
- ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್‌ಗಳು – 55
ಬೆಂಗಳೂರು ಉತ್ತರ ನಗರ ಪಾಲಿಕೆ
- ಒಟ್ಟು ವಾರ್ಡ್ಗಳ ಸಂಖ್ಯೆ – 72
- SC – 9 (ಮಹಿಳೆ 4)
- ST – 2 (ಮಹಿಳೆ 1)
- ಹಿಂದುಳಿದ ವರ್ಗ (A) – 19(ಮಹಿಳೆ 9)
- ಹಿಂದುಳಿದ ವರ್ಗ (B) – 5(ಮಹಿಳೆ 2)
- ಸಾಮಾನ್ಯ – 37 (ಮಹಿಳೆ 18)
- ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್‌ಗಳು – 34
ಬೆಂಗಳೂರು ದಕ್ಷಿಣ ನಗರ ಪಾಲಿಕೆ
- ಒಟ್ಟು ವಾರ್ಡ್ಗಳ ಸಂಖ್ಯೆ – 72
- SC – 7 (ಮಹಿಳೆ 3)
- ಎಸ್ಟಿ – 1
- ಹಿಂದುಳಿದ ವರ್ಗ (A) – 19 ( =ಮಹಿಳೆ 9)
- ಹಿಂದುಳಿದ ವರ್ಗ (B) – 5 (ಮಹಿಳೆ 2)
- ಸಾಮಾನ್ಯ – 40 (ಮಹಿಳೆ 20)
- ಮಹಿಳೆಯರಿಗೆ ಮೀಸಲಿಟ್ಟ ವಾರ್ಡ್‌ಗಳು- 34
ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.