
ಪಾಟ್ನಾ, ಮಾರ್ಚ್ 8: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಗ, 50 ವರ್ಷದ ನಿಶಾಂತ್ ಕುಮಾರ್ (ನಿಶಾಂತ್ ಕುಮಾರ್) ರಾಜಕೀಯ ಪ್ರಯಾಣ ಆರಂಭಿಸಿದ್ದಾರೆ. ಇಂದು ಭಾನುವಾರ ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರಿಸಲಾಗಿದೆ. ನಿತೀಶ್ ಕುಮಾರ್ ಅವರು ಬಳಿಕ ರಾಜ್ಯ ರಾಜಕಾರಣ ತೊರೆದು ರಾಜ್ಯಕ್ಕೆ ಅಣಿಯಾಗಿರುವ ಹೊತ್ತಲ್ಲಿ ಅವರ ಪುತ್ರನ ರಾಜಕೀಯ ಪ್ರವೇಶವಾಗಿದೆ.
‘ಸಕ್ರಿಯ ಸದಸ್ಯನಾಗಿ ಪಕ್ಷವನ್ನು ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ತಂದೆ ರಾಜ್ಯಸಭೆಗೆ ನಿರ್ಧರಿಸಿದ್ದಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಅದನ್ನು ಗೌರವಿಸುತ್ತೇನೆ. ಅವರ ಮಾರ್ಗದರ್ಶನದಲ್ಲಿ ನಾವು ಕೆಲಸ ಮಾಡುತ್ತೇವೆ. ಪಕ್ಷ ಹಾಗೂ ಜನರ ವಿಶ್ವಾಸವನ್ನು ಉಳಿಸಿಕೊಳ್ಳಲು ಮತ್ತು ಸಂಘಟನೆಯನ್ನು ಬಲಪಡಿಸಲು ಯತ್ನಿಸುತ್ತೇನೆ’ ಎಂದು 50 ವರ್ಷದ ನಿಶಾಂತ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಡಾರ್ಜಿಲಿಂಗ್‌ನಲ್ಲಿ ರಾಷ್ಟ್ರಪತಿ ಮುರ್ಮು ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ, ವರದಿ ಕೇಳಿದ ಗೃಹ ಕಾರ್ಯದರ್ಶಿ
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರಂತೆ ನಿತೀಶ್ ಕುಮಾರ್ ಪುತ್ರನೂ ಕೂಡ ಚುನಾವಣಾ ರಾಜಕೀಯದಿಂದ ದೂರವೇ ಇದ್ದವರು. ಸಿದ್ದರಾಮಯ್ಯರಂತೆ ನಿತೀಶ್ ಕುಮಾರ್ ಕೂಡ ವಂಶ ಪಾರಂಪರ್ಯ ರಾಜಕೀಯವನ್ನು ಕಟುವಾಗಿ ವಿರೋಧಿಸುತ್ತಾ ಬಂದವರು. ಆದರೆ, ತಮ್ಮ ರಾಜಕೀಯ ಕೊನೆಯ ದಿನಗಳಲ್ಲಿ ಅವರ ಮಕ್ಕಳು ರಾಜಕೀಯ ಪ್ರವೇಶ ಮಾಡಿದ್ದಾರೆ.
ಡಿಸಿಎಂ ಆಗುತ್ತಾರಾ ನಿಶಾಂತ್?
ಎಂಜಿನಿಯರಿಂಗ್ ಓದಿರುವ ನಿಶಾಂತ್ ಕುಮಾರ್ ಅವರು ನೇರ ರಾಜಕಾರಣಕ್ಕೆ ಹೊಸಬರಾದರೂ ಅಪ್ಪನ ರಾಜಕೀಯ ಮಾರ್ಗದರ್ಶನ ಇದ್ದೇ ಇರುತ್ತದೆ. ಸುದ್ದಿಗಳ ಪ್ರಕಾರ ನಿಶಾಂತ್ ಕುಮಾರ್ ಅವರಿಗೆ ಡಿಸಿಎಂ ಸ್ಥಾನ ನೀಡಬಹುದು. ಬಿಜೆಪಿ-ಜೆಡಿಯು ಮೈತ್ರಿಕೂಟದ ಈ ಸರ್ಕಾರದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಆಗಬಹುದು. ಇದೇನಾದರೂ ನಿಜವಾಗಿ ಬಿಹಾರದಲ್ಲಿ ಬಿಜೆಪಿ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿದಂತಾಗುತ್ತದೆ.
ಇದನ್ನೂ ಓದಿ: ಇರಾನ್ ಯುದ್ಧ: ಬೆಂಬಲಕ್ಕೆ ಬ್ರಿಟನ್ ಹಿಂದೇಟು; ಇದನ್ನು ಮರೆಯಲ್ಲ ಎಂದ ಟ್ರಂಪ್
ನಿತೀಶ್ ಕುಮಾರ್ ಅವರ ಪೂರ್ಣ ರಾಜಕಾರಣ…
ನಿತೀಶ್ ಕುಮಾರ್ ಎರಡು ಕಾಲ ಬಿಹಾರ ಮುಖ್ಯಮಂತ್ರಿಯಾಗಿದ್ದಾರೆ. ಬಿಹಾರದ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಸಂಸತ್ತಿನಲ್ಲಿ ಲೋಕಸಭಾ ಸದಸ್ಯ. ರಾಜ್ಯಸಭೆಯೊಂದು ಮಾತ್ರ ಬಾಕಿ ಇದೆ. ಈಗ ಆ ಮನೆಯ ಸದಸ್ಯನಾಗಹೊರಟಿದ್ದಾರೆ. ಈ ರೀತಿ ನಾಲ್ಕು ಮನೆಗಳ ಸದಸ್ಯರಾದ ಕೆಲವೇ ಬಿಹಾರ ರಾಜಕಾರಣಗಳ ಸಾಲಿಗೆ ನಿತೀಶ್ ನಿಲ್ಲಲಿದ್ದಾರೆ. ಆರ್ಜೆಡಿಯ ಲಾಲೂ ಪ್ರಸಾದ್ ಯಾದವ್ ಮತ್ತು ಬಿಜೆಪಿಯ ಸುಶೀಲ್ ಮೋದಿ ಅವರು ಈ ದಾಖಲೆಯನ್ನು ಹೊಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ