Crisis ದುಬೈ ದಾಳಿ, ಪೆಹಲ್ಗಾಂ ಆ್ಯಟಾಕ್, ಸಂಕಷ್ಟದಲ್ಲಿ 2 ದೇಶ ಮಾಡಿದ್ದೇನು, ಖಾನ್ ಸರ್ ಮಾತು ವೈರಲ್ | Khan Sir Viral Talk How Dubai And India Govt Tackle Crisis During Attack

Crisis ದುಬೈ ದಾಳಿ, ಪೆಹಲ್ಗಾಂ ಆ್ಯಟಾಕ್, ಸಂಕಷ್ಟದಲ್ಲಿ 2 ದೇಶ ಮಾಡಿದ್ದೇನು, ಖಾನ್ ಸರ್ ಮಾತು ವೈರಲ್ | Khan Sir Viral Talk How Dubai And India Govt Tackle Crisis During Attack



Crisis ದುಬೈ ದಾಳಿ, ಪೆಹಲ್ಗಾಂ ಆ್ಯಟಾಕ್, ಸಂಕಷ್ಟದಲ್ಲಿ 2 ದೇಶ ಮಾಡಿದ್ದೇನು, ಖಾನ್ ಸರ್ ಮಾತು ವೈರಲ್ | Khan Sir Viral Talk How Dubai And India Govt Tackle Crisis During Attack

ದುಬೈ ದಾಳಿ, ಪೆಹಲ್ಗಾಂ ಆ್ಯಟಾಕ್, ಸಂಕಷ್ಟದಲ್ಲಿ 2 ದೇಶ ಮಾಡಿದ್ದೇನು, ಖಾನ್ ಸರ್ ಮಾತು ವೈರಲ್, ಎರಡೂ ಕೂಡ ಯುದ್ಧದ ಸನ್ನಿವೇಶವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತ ಕೆಲ ವಿಚಾರಗಳನ್ನು ದುಬೈನಿಂದ ಕಲಿಯಬೇಕಿದೆ ಎಂದಿದ್ದಾರೆ.

ನವದೆಹಲಿ (ಮಾ.08) ಇರಾನ್ ಹಾಗೂ ಇಸ್ರೇಲ್ ಯುದ್ಧದಲ್ಲಿ ಗಲ್ಫ್ ರಾಷ್ಟ್ರಗಳು ಬಡವಾಗಿದೆ. ಅಮೆರಿಕ ಗುರಿಯಾಗಿಸಿ ಮಾಡುತ್ತಿರುವ ದಾಳಿಯಲ್ಲಿ ಕೆಲ ಮಿಸೈಲ್ ಡ್ರೋನ್‌ಗಳು ದುಬೈ ಸೇರಿದಂತೆ ಗಲ್ಫ್ ರಾಷ್ಟ್ರಗಳ ಮೇಲೆ ಬೀಳುತ್ತಿದೆ. ಇದರಿಂದ ಗಲ್ಫ್‌ನಲ್ಲಿ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆ ತಿಳಿಗೊಳಿಸಲು ಅರಬ್ ರಾಷ್ಟ್ರಗಳು ಪ್ರಯತ್ನಿಸುತ್ತಿದ್ದರೂ ಇರಾನ್ ಕೆರಳಿ ಕೆಂಡವಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ದುಬೈ ಮಾಡುತ್ತಿರುವ ತುರ್ತು ಕೆಲಸಗಳನ್ನು ಭಾರತ ಕಲಿಯಬೇಕು ಎಂದು ಖಾನ್ ಸರ್ ಹೇಳಿದ್ದಾರೆ. ಪ್ರಮುಖವಾಗಿ ಪೆಹಲ್ಗಾಂ ದಾಳಿ ಬಳಿಕ ಭಾರತ ಯಾವ ವಿಚಾರದಲ್ಲಿ ಅತ್ಯಂತ ಕಳಪೆಯಾಗಿತ್ತು ಅನ್ನೋದನ್ನು ಖಾನ್ ಸರ್ ಹೇಳಿದ್ದಾರೆ.

ಆನ್‌ಲೈನ್ ಎಜುಕೇಟರ್ ಖಾನ್ ಸರ್ ಇದೀಗ ಎರಡು ದೇಶಗಳು ಸಂಕಷ್ಟ ಸಂದರ್ಭವನ್ನು ಮುಂದಿಟ್ಟು ಭಾರತ ಎಡವಿದ್ದೆಲ್ಲಿ, ಏನು ಮಾಡಬೇಕಿತ್ತು ಅನ್ನೋದನ್ನು ವಿವರಿಸಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಇಷ್ಟೇ ಅಲ್ಲ ಈ ವಿಚಾರತದಲ್ಲಿ ಭಾರತ ಎಡವಿರುವುದು ಹಾಗೂ ಪದೇ ಪದೇ ಎಡವುತ್ತಿರುವುದು ನಿಜ ಎಂದು ಒಮ್ಮತದ ಅಭಿಪ್ರಾಯಗಳು ವ್ಯಕ್ತವಾಗಿದೆ.

ದುಬೈ ಮೇಲಿನ ದಾಳಿ ಬಳಿಕ ಅಲ್ಲಿನ ಸರ್ಕಾರ ಮಾಡಿದ್ದೇನು?

ಖಾನ್ ಸರ್ ತಮ್ಮ ವಿಡಿಯೋದಲ್ಲಿ ದುಬೈ ಮೇಲೆ ಇರಾನ್ ನಡೆಸಿದ ದಾಳಿ ಕುರಿತು ವಿವರಿಸಿದ್ದಾರೆ. ದುಬೈನಲ್ಲಿ ದಾಳಿಯಾಗುತ್ತಿರುವ ಕಾರಣ ವಿಮಾನ ಸೇವೆಗಳು ಸ್ಥಗಿತಗೊಂಡಿದೆ. ಹೀಗಾಗಿ ಹಲವು ಪ್ರವಾಸಿಗರು ಹೊಟೆಲ್‌ನಲ್ಲೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ದುಬೈ ಸರ್ಕಾರ ಯುದ್ಧ ಕಾರಣದಿಂದ ಹೊಟೆಲ್‌ನಲ್ಲಿ ಅನಿವಾರ್ಯವಾಗಿ ಉಳಿದುಕೊಳ್ಳುತ್ತಿರುವ ಪ್ರವಾಸಿಗರು, ಸೇರಿದಂತೆ ಇತರರ ಖರ್ಚು ವೆಚ್ಚಗಳನ್ನು ದುಬೈ ಸರ್ಕಾರ ನೋಡಿಕೊಳ್ಳುತ್ತಿದೆ. ಹೊಟೆಲ್ ಬಿಲ್‌ಗಳನ್ನು ಸರ್ಕಾರ ನೀಡಲಿದೆ ಎಂದಿದೆ. ಇದು ದುಬೈ ಸರ್ಕಾರ ಸಂಕಷ್ಟದ ಸಂದರ್ಭದಲ್ಲಿ ಕೈಗೊಂಡ ನಿರ್ಧಾರ. ಯುದ್ಧ ನಿಲ್ಲಿಸುವುದು, ಮುಂದುವರಿಸುವುದು ದುಬೈ ಕೈನಲ್ಲಿ ಇಲ್ಲ. ಆದರೆ ಜನರನ್ನು ಮತ್ತಷ್ಟು ಸಮಸ್ಯೆಗೆ ತಳ್ಳುವುದುನ್ನು ದುಬೈ ಸರ್ಕಾರ ತಪ್ಪಿಸಿದೆ ಎಂದು ಖಾನ್ ಸರ್ ಹೇಳಿದ್ದಾರೆ

ಭಾರತದ ಪೆಹಲ್ಗಾಂ ಸಂದರ್ಭದಲ್ಲಿ ಎಡವಿದ್ದೆಲ್ಲಿ?

ಭಾರತದಲ್ಲಿ ನಡೆದ ಪೆಹಲ್ಗಾಂ ಉಗ್ರ ದಾಳಿ ಪ್ರತಿಯೊಬ್ಬರ ಭಾರತೀಯನ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ಭಾರತ ಆಪರೇಶನ್ ಸಿಂದೂರ್ ಮೂಲಕ ತಕ್ಕ ಉತ್ತರ ನೀಡಿತ್ತು. ತಿರುಗೇಟು ವಿಚಾರದಲ್ಲಿ , ಭಾರತದ ಬಗ್ಗೆ ಭಯ ಭಕ್ತಿ ಮೂಡುವಂತೆ ಮಾಡುವಲ್ಲಿ ಭಾರತ ಸರ್ಕಾರ ಯಶಸ್ವಿಯಾಗಿದೆ. ಆದರೆ ಕೆಲ ವಿಚಾರದಲ್ಲಿ ಭಾರತ, ದುಬೈ ಸೇರಿದಂತೆ ಇತರ ದೇಶದಿಂದ ಕಲಿಯಬೇಕಿದೆ ಎಂದು ಖಾನ್ ಸರ್ ಹೇಳಿದ್ದಾರೆ. ಪೆಹಲ್ಗಾಂ ದಾಳಿಯಾದ ಮರು ಕ್ಷಣದಲ್ಲೇ ಕಾಶ್ಮೀರ ಪ್ರವಾಸದಲ್ಲಿದ್ದ ಲಕ್ಷಾಂತರ ಭಾರತೀಯರು ತಕ್ಷಣವೇ ತಮ್ಮ ತಮ್ಮ ಮನೆಗೆ ಮರಳಲು ಧಾವಂತ ಮಾಡಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ವಿಮಾನಯಾನ ಸಂಸ್ಥೆಗಳು ವಿಮಾನ ಟಿಕೆಟ್ ದರವನ್ನು ದುಪ್ಪಟ್ಟು ಮಾಡಿತ್ತು. 5 ರಿಂದ 10 ಸಾವಿರ ಟಿಕೆಟ್ ಬೆಲೆ 15 ರಿಂದ 20 ಸಾವಿರ ರೂಪಾಯಿಗೆ ಏರಿಕೆಯಾಗಿತ್ತು. ಭಾರತ ಹೊಟೆಲ್, ಇತರ ಖರ್ಚು ವೆಚ್ಚಗಳನ್ನು ಉಚಿತವಾಗಿ ನೀಡಬೇಕಿಲ್ಲ. ಆದರೆ ಸಂಕಷ್ಟ ಸಂದರ್ಭದಲ್ಲಿ ಭಾರತ ವಿಮಾನಯಾನ ದರ ನಿಯಂತ್ರಿಸಲು ಸಾಧ್ಯವಾಗಿಲ್ಲ. ಪೆಹಲ್ಗಾಂ ಮಾತ್ರವಲ್ಲ, ತುರ್ತು ಸಂದರ್ಭ ಸೃಷ್ಟಿಯಾದಾಗ ಭಾರತದಲ್ಲಿ ವಿಮಾನ ಪ್ರಯಾಣ ದರ ಡಬಲ್ ಆಗುತ್ತದೆ. ದುಬೈನಲ್ಲಿ ಈ ಸಮಸ್ಯೆನ್ನು ಸರ್ಕಾರ ಮುತುವರ್ಜಿ ವಹಿಸಿ ನಿಯಂತ್ರಣ ಮಾಡಿದೆ. ಆದರೆ ಭಾರತದಲ್ಲಿ ಈ ವಸೂಲಿ ದಂಧೆಯನ್ನು ಸರ್ಕಾರಕ್ಕೆ ನಿಯಂತ್ರಣ ಮಾಡಲು ಸಾಧ್ಯವಾಗಲಿಲ್ಲ ಎಂದು ಖಾನ್ ಸರ್ ಹೇಳಿದ್ದಾರೆ.

ಖಾನ್ ಸರ್ ಮಾತಿಗೆ ಎಲ್ಲರೂ ಸಮ್ಮತಿ ಸೂಚಿಸಿದ್ದಾರೆ. ಭಾರತದಲ್ಲಿ ತುರ್ತು ಸಂದರ್ಭಗಳನ್ನೂ ಹಣ ಮಾಡಲು ಬಳಿಸಿಕೊಳ್ಳುವ ಖಾಸಗಿ ಸಂಸ್ಥೆಗಳಿಗೆ ಮೂಗುದಾರ ಹಾಕುವುದು ಸರ್ಕಾರದ ಜವಾಬ್ದಾರಿ. ಉಚಿತವಾಗಿ ಏನೂ ಕೊಡುವುದು ಬೇಡ, ಆದರೆ ಬೆಲೆ ನಿರ್ವಹಣೆ ಸರಿಯಾಗಿ ಮಾಡಿದರೆ ಸಾಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *