‘ಸಿಎಂ, ಸಿಎಂ’ ಎಂದು ಕೂಗಿದ ಅಭಿಮಾನಿಗಳು, ಜೂ ಎನ್​​ಟಿಆರ್ ಪ್ರತಿಕ್ರಿಯೆ ಏನು?

‘ಸಿಎಂ, ಸಿಎಂ’ ಎಂದು ಕೂಗಿದ ಅಭಿಮಾನಿಗಳು, ಜೂ ಎನ್​​ಟಿಆರ್ ಪ್ರತಿಕ್ರಿಯೆ ಏನು?


'ಸಿಎಂ, ಸಿಎಂ' ಎಂದು ಕೂಗಿದ ಅಭಿಮಾನಿಗಳು, ಜೂ ಎನ್ ಟಿಆರ್ ಪ್ರತಿಕ್ರಿಯೆ ಏನು?

ಜೂ ಎನ್ ಟಿಆರ್ (Jr NTR), ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ. ‘ಆರ್ ಆರ್ ಆರ್’ ಸಿನಿಮಾದ ಬಳಿಕವಂತೂ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಜೂ ಎನ್ ಟಿಆರ್ ಅವರ ನಂದಮೂರಿ ಕುಟುಂಬ ಹಲವು ವರ್ಷಗಳಿಂದ ತೆಲುಗು ಚಿತ್ರರಂಗ ಮತ್ತು ರಾಜಕೀಯದ ಮೇಲೆ ಪ್ರಭಾವ ಬೀರುತ್ತಿದೆ. ಜೂ ಎನ್ ಟಿಆರ್ ಸಹ ಕೆಲವು ವರ್ಷಗಳ ಹಿಂದಿನವರೆಗೂ ಸಹ ರಾಜಕೀಯದಲ್ಲಿ ಸಕ್ರಿಯವಾಗಿದೆ. ತಮ್ಮ ಕುಟುಂಬದ ಪಕ್ಷವಾದ ಟಿಡಿಪಿ (ತೆಲುಗು ದೇಶಂ ಪಾರ್ಟಿ)ಯ ತಾರಾ ಪ್ರಚಾರಕ ಆಗಿದ್ದರು. ಆದರೆ ಇತ್ತೀಚೆಗೆ ಅವರ ಕುಟುಂಬದಿಂದ ತುಸು ದೂರ ಇರಿಸಲಾಗಿದೆ. ಟಿಡಿಪಿಯಿಂದಲೂ ಜೂ ಎನ್ ಟಿಆರ್ ದೂರ ಸರಿದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಮ್ಮ ನಾಯಕ ಸಿಎಂ ಆಗಲಿ ಮತ್ತು ಆಗೇ ಆಗುತ್ತಾರೆ ಎಂಬ ಭರವಸೆಯಲ್ಲಿದ್ದಾರೆ, ಅದನ್ನು ವ್ಯಕ್ತಪಡಿಸಿದ್ದಾರೆ.

ನಟ ಜೂ ಎನ್ ಟಿಆರ್ ಅವರು ಇಂದು (ಮಾರ್ಚ್ 08) ಬೆಂಗಳೂರಿಗೆ ಬಂದಿದ್ದರು. ಸ್ಥಳೀಯ ಕಿಮ್ಸ್ ಆಸ್ಪತ್ರೆಯ ಹೊಸ ಘಟಕದ ಉದ್ಘಾಟನೆಗೆ ಎನ್ ಟಿಆರ್ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಜೂ ಎನ್ ಟಿಆರ್ ಅವರನ್ನು ನೋಡಲು ನೂರಾರು ಮಂದಿ ಅಭಿಮಾನಿಗಳು ಧಾವಿಸಿದ್ದರು. ಬಳಿಕ ಕಿಮ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೂ ಎನ್ ಟಿಆರ್ ಅವರಿಗೆ ’25 ವರ್ಷಗಳ ಬಳಿಕ ನೀವು ಎಲ್ಲಿ ನೋಡಲು ಬಯಸುತ್ತೀರಿ’ ಎಂದು ಕೇಳಿದರು. ಜೂ ಎನ್ ಟಿಆರ್ ಸಹಜವಾಗಿಯೇ ತಮ್ಮ ಹಾಸ್ಯಮಯ ಶೈಲಿಯಲ್ಲಿ ನನಗೆ 67 ವರ್ಷ ವಯಸ್ಸಾಗಲಿದೆ ಎಂದಷ್ಟೇ ಹೇಳಿದರು.

ಆದರೆ ಅಭಿಮಾನಿಗಳು ಸುಮ್ಮನಿರಲಿಲ್ಲ, ‘ಸಿಎಂ’ ಎಂದು ಸಿಎಂ ಕೂಗಲು ಆರಂಭಿಸಿದರು. ಜೂ ಎನ್ ಟಿಆರ್ ಅವರು ಅಭಿಮಾನಿಗಳ ಕೂಗಾಟ ಗಮನಿಸಿದರೂ ಅವರಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅಭಿಮಾನಿಗಳ ಕೂಗು ಕೇಳಿದರೂ ಸಹ ಸುಮ್ಮನೆ ಜೂ ಎನ್ ಟಿಆರ್. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಜೂ ಎನ್ ಟಿಆರ್ ಹಳೆ ಸಿನಿಮಾ ಸೀಕ್ವೆಲ್ ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ?

ಟಿಡಿಪಿ ಪಕ್ಷದ ಸ್ಟಾರ್ ಪ್ರಚಾರಕ ಆಗಿದ್ದರು ಜೂ ಎನ್ ಟಿಆರ್. ಆದರೆ ಇತ್ತೀಚೆಗೆ ಚಂದ್ರಬಾಬು ನಾಯ್ಡು ಮತ್ತು ಜೂ ಎನ್ ಟಿಆರ್ ಅವರ ಚಿಕ್ಕಪ್ಪ ಆಗಿರುವ ನಂದಮೂರಿ ಬಾಲಕೃಷ್ಣ ಅವರು ಜೂ ಎನ್ ಟಿಆರ್ ಪಕ್ಷದಿಂದ ಮತ್ತು ನಂದಮೂರಿ ಕುಟುಂಬದಿಂದ ದೂರ ಇರಿಸಿದ್ದಾರೆ. ಚಂದ್ರಬಾಬು ನಾಯ್ಡುಗೆ ಪುತ್ರ, ಬಾಲಕೃಷ್ಣಗೆ ಅಳಿಯ (ಮಗಳ ಗಂಡ) ಆಗಿರುವ ನಾರಾ ಲೋಕೇಶ್ ಅವರನ್ನು ರಾಜಕೀಯದಲ್ಲಿ ಬೆಳೆಸಿದ ಜೂ.ಎನ್ ಟಿಆರ್ ಅವರನ್ನು ಪಕ್ಕಕ್ಕೆ ಸರಿಸಲಾಗಿದೆ. ಜೂ ಎನ್ ಟಿಆರ್, ಪಕ್ಷಕ್ಕೆ ಬಂದರೆ ಅವರ ಜನಪ್ರಿಯತೆ ಮುಂದೆ ನಾರಾ ಲೋಕೇಶ್ ಮಂಕಾಗುವುದು ಖಾತ್ರಿ. ಆದ್ದರಿಂದ ಜೂ ಎನ್ ಟಿಆರ್ ಅವರ ಸಹೋದರ ಕಲ್ಯಾಣ್ ರಾಮ್ ಅವರನ್ನೂ ಸಹ ಪಕ್ಷದಿಂದ ದೂರ ಇರಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *