
ಕಳೆದ ಕೆಲ ವಾರಗಳಿಂದ ನಡೆಯುತ್ತಿರುವ 2026 ಟಿ20 ಇಂದು (ಮಾರ್ಚ್ 08) ಮುಕ್ತಾಯ ಕಾರ್ಯಕ್ರಮ. ಇಂದು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 2026 ಅಂತಿಮ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ. ಈ ಪಂದ್ಯಕ್ಕಾಗಿ ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ. ಪಂದ್ಯ ಜಿದ್ದಾಜಿದ್ದಿನದ್ದಾಗಿರಲಿದೆ ಅನುಮಾನವಿಲ್ಲ, ಆದರೆ ಪಂದ್ಯಕ್ಕೂ ಮುಂಚೆ ಭರಪೂರ ಮನೋರಂಜನೆ ಪ್ರದರ್ಶನಕ್ಕೆ ಲಭ್ಯವಾಗಲಿದೆ. ಕೆಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಾಯಕರು ಫೈನಲ್ ಪಂದ್ಯದ ಮುಂಚೆ ಮನರಂಜನಾ ಕಾರ್ಯಕ್ರಮ ನಡೆಸಲಿದ್ದಾರೆ.
ಇಂದಿನ ಸಮಾರೋಪ ಸಮಾರಂಭದಲ್ಲಿ ಪ್ರಮುಖ ಆಕರ್ಷಣೆಯಾಗಿರುವುದು ಅಂತರಾಷ್ಟ್ರೀಯ ಪಾಪ್ ಲೋಕದ ದಿಗ್ಗಜ, ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಮಾರ್ಟಿನ್. ಇವರ ಜನಪ್ರಿಯ ಹಾಡುಗಳಾದ ‘ಲೋಕಾ’ ಮತ್ತು ಫುಟ್‌ಬಾಲ್ ಹಾಡು ‘ದಿ ಕಪ್ ಆಫ್ ಲೈಫ್’ ಅಹಮದಾಬಾದ್ ಮೈದಾನದಲ್ಲಿ ಅನುರಣಿಸಲಿವೆ. ಈ ವಿಶ್ವ ಜನಪ್ರಿಯ ಗಾಯಕ ರಿಕ್ಕಿ ಪಾರ್ಟಿನ್ ಹಾಡಲಿದ್ದಾರೆ.
ಖ್ಯಾತ ಗಾಯಕಿಯರಲ್ಲಿ ಒಬ್ಬರಾಗಿರುವ ಪಾಲ್ಗುಣಿ ಪಾಠಕ್ ಅವರು ಸಹ ಇಂದಿನ ಪಂದ್ಯಕ್ಕೂ ಭಾರತದ ಮುಂಚೆಯೇ ಹಾಡುಗಳನ್ನು ಹಾಡಲಿದ್ದಾರೆ. ಫಾಲ್ಗುಣಿ ಪಾಠಕ್ ಸ್ಥಳೀಯ ಗಾಯಕಿ ಸಹ ಆಗಿದ್ದು, ಹಿಂದಿ ಹಾಡುಗಳ ಜೊತೆಗೆ ಗುಜರಾತಿ ಸೊಗಡಿನ ಹಾಡುಗಳನ್ನು ಸಹ ಹಾಡಲಿದ್ದಾರೆ. ‘ಮೈನೆ ಪಾಯಲ್ ಹೈ ಛಂಕಾಯಿ’ ಜೊತೆಗೆ ಹಲವಾರು ಜನಪ್ರಿಯ ಹಾಡುಗಳನ್ನು ಫಾಲ್ಗುಣಿ ಹಾಡಲಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಬಳಿ ಮಾತನಾಡಿರುವ ಫಾಲ್ಗುಣಿ ಪಾಠಕ್, ‘ನಾನು ಈ ಪ್ರದರ್ಶನಕ್ಕಾಗಿ ಉತ್ಸುಕನಾಗಿದ್ದೇನೆ. ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯ ಜನರೆದುರು ಪ್ರದರ್ಶನವನ್ನು ನಾನು ನೀಡಿದ್ದೇನೆ’ ಎಂದು.
ಇದನ್ನೂ ಓದಿ:IND vs NZ: ಟಿ20 ಫೈನಲ್‌ಗೆ ಮೋದಿ ಮೈದಾನದಲ್ಲಿ ಏನೆಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಗೊತ್ತಾ?
‘ಪ್ರಿನ್ಸ್ ಆಫ್ ಭಾಂಗ್ಡಾ’ ಎಂದೆಂದಿಗೂ ಹೆಸರಾದ ಸುಖ್ಬೀರ್ ಸಿಂಗ್ ಅವರ ಹಿಟ್ ಹಾಡುಗಳಾದ ‘ಇಷ್ಕ್ ತೇರಾ ತಡ್ಪಾವೆ’ ಸೇರಿದಂತೆ ಇನ್ನೂ ಕೆಲವು ಬಲು ಜನಪ್ರಿಯ ಹಾಡುಗಳನ್ನು ಹಾಡಲಿದ್ದಾರೆ. ಇವರೂ ಸಹ ಗುಜರಾತಿ ಜನರ ಮೆಚ್ಚಿನ ಗಾಯಕರುಗಳಲ್ಲಿ ಒಬ್ಬರು. ಸಂಜೆ 5:30ಕ್ಕೆ ಲೈವ್ ಪ್ರದರ್ಶನ ಪ್ರಾರಂಭವಾಗಲಿದೆ. ರಾತ್ರಿ 7 ಗಂಟೆಗೆ ಪಂದ್ಯ ಪ್ರಾರಂಭ ಆಗಲಿದೆ.
ಟೀಮ್ ಇಂಡಿಯಾವನ್ನು ಬೆಂಬಲಿಸಲು ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್, ಆಲಿಯಾ ಭಟ್, ಅನಿಲ್ ಕಪೂರ್ ಮತ್ತು ವರುಣ್ ಧವನ್ ಅವರು ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಮಿಫೈನಲ್‌ನಲ್ಲೂ ಮಿಂಚಿದ್ದ ಈ ತಾರೆಯರು ಫೈನಲ್ ಪಂದ್ಯಕ್ಕೂ ಸಾಕ್ಷಿಯಾಗಲಿದ್ದಾರೆ. ಇವರ ಜೊತೆಗೆ ಮಾಜಿ ನಾಯಕ ಎಂಎಸ್ ಧೋನಿ ಕೂಡ ಅಹಮದಾಬಾದ್‌ಗೆ ಆಗಮಿಸಲಿದ್ದಾರೆ, ಪ್ರಧಾನಿ ನರೇಂದ್ರ ಮೋದಿ ಸಹ ಆಗಮಿಸುವ ನಿರೀಕ್ಷೆಯಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ