ಸಾವು ಬದುಕಿನ ಹೋರಾಟದಲ್ಲಿ ಬಿಗ್ ಬಾಸ್ ಸ್ಪರ್ಧಿ, ಲಾಸ್ಟ್ ರೈಡ್‌ನಲ್ಲಿ ಭೀಕರ ಅಪಘಾತ, ಪ್ರೀತಿಸಿ ಮದುವೆಯಾದ ಹುಡುಗಿ, ಪ್ರೀತಿಗಾಗಿ ಪೋಷಕರು ದೂರ ದೂರ ಸೇರಿದಂತೆ ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ ಇದೀಗ ಐಸಿಯುವಿನಲ್ಲಿ ಹೋರಾಡುತ್ತಿದ್ದಾರೆ.

ಬಿಗ್ ಬಾಸ್ ಹಲವರ ಬದುಕಿಗೆ ಮಹತ್ವದ ತಿರುವು ನೀಡಿದೆ. ಖ್ಯಾತಿ, ಅವಕಾಶಗಳನ್ನು ತಂದುಕೊಟ್ಟಿದೆ. ಬಿಗ್ ಬಾಸ್ ಬಳಸಿಕೊಂಡು ಹಲವರು ಬದುಕಿನ ದಾರಿ ಕಟ್ಟಿಕೊಂಡಿದ್ದು ಮಾತ್ರವಲ್ಲ, ಸಾಧನೆಯ ಪಥದಲ್ಲೂ ಸಾಗಿದ್ದಾರೆ. ಆದರೆ ಬಿಗ್ ಬಾಸ್ ಖ್ಯಾತಿಯ ಮಾಜಿ ಸ್ಪರ್ಧಿ ಖ್ಯಾತಿ, ಹೆಸರು ಎಲ್ಲವನ್ನೂ ಪಡೆದುಕೊಂಡರು ವೈಯುಕ್ತಿಕ ಜೀವನದಲ್ಲಿ ಕಳೆದುಕೊಳ್ಳುತ್ತಾ ಬಂದಿದ್ದಾರೆ. ಇದರ ಪರಿಣಾಮ ಖಿನ್ನತೆಗೆ ಜಾರಿ ಕೊನೆಯ ರೈಡ್ ಎಂದು ಬದುಕು ಅಂತ್ಯಗೊಳಿಸಲು ಹೋಗಿ ಇದೀಗ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಬಿಗ್ ಬಾಸ್ 17 ಹಿಂದಿ ಆವೃತ್ತಿಯ ಸ್ಪರ್ಧಿ ಅನುರಾಗ್ ದೊಭಾಲ್ ಚೇತರಿಕೆಗೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. UK07 ರೈಡರ್ ಎಂದೇ ಖ್ಯಾತಿಗೊಂಡಿದ್ದ ಅನುರಾಗ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟು ಭಾರಿ ಜನಪ್ರಿಯತೆ ಪಡೆದಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ತೀವ್ರ ಖಿನ್ನತೆಗೆ ಜಾರಿದ್ದರು. ಖಿನ್ನತೆಯಲ್ಲಿ ಅತೀ ವೇಗವಾಗಿ ಬೈಕ್ ರೈಡ್ ಮಾಡಿ ಅಪಘಾತ ಮಾಡಿಕೊಂಡಿದ್ದರು. ಗಂಭೀರಗಾಯಗೊಂಡಿದ್ದ ಅನುರಾಗ್‌ನನ್ನು ಇದೀಗ ಹೆಚ್ಚಿನ ಚಿಕಿತ್ಸೆಗೆ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಶೀಘ್ರ ಚೇತಿರಿಕೆ ಪ್ರಾರ್ಥಿಸಲು ಮ್ಯಾನೇಜರ್ ಕೋರಿದ್ದಾರೆ.

ಇನ್‌ಸ್ಟಾಗ್ರಾಂ ಮೂಲಕ ವಿಡಿಯೋ ಮಾಡುತ್ತಾ ನೋವು ಹಂಚಿಕೊಂಡಿದ್ದ ಅನುರಾಗ್, ತಾನು ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಇದು ನನ್ನ ಕೊನೆಯ ರೈಡ್ ಎಂದು ಲೈವ್ ವಿಡಿಯೋ ಮೂಲಕ ಹೇಳಿದ್ದಾನೆ. ಬಳಿಕ ದೆಹಲಿ ಎಕ್ಸ್‌ಪ್ರೆಸ್‌ವೇನಲ್ಲಿ ಅತೀ ವೇಗವಾಗಿ ರೈಡ್ ಮಾಡಿ ಅಪಘಾತ ಮಾಡಿಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡ ಅನುರಾಗ್‌ನ ಆಸ್ಪತ್ರೆ ದಾಖಲಿಸಲಾಗಿತ್ತು. ಇದೀಗ ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರ ಮಾಡಲಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಅನುರಾಗ್ ಹಾಗೂ ರಿತಿಕಾ ಚೌವ್ಹಾಣ್ ಪ್ರೀತಿ ಗಾಢವಾಗಿತ್ತು. ಆದರೆ ಇವರ ಪ್ರೀತಿಗೆ ಅನುರಾಗ್ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತವಾಗಿತ್ತು. ಕೈಮುಗಿದು ಬೇಡಿಕೊಂಡರು ಅನುರಾಗ್ ಪೋಷಕರು ಮದುವೆಗೆ ಬರಲಿಲ್ಲ, ಮನೆಗೂ ಸೇರಿಸಿಕೊಳ್ಳಲಿಲ್ಲ. ಬಳಿಕ ಅನುರಾಗ್‌ಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಕೆಲ ಬಾರಿ ಅನುರಾಗ್ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ರಿತಾಕಾಗಿ ಪೋಷಕರು, ಸಹೋದರ ಸೇರಿ ಮನೆಯವರನ್ನೇ ದೂರ ಮಾಡಿದ ಅನುರಾಗ್ ಕೆಲವೇ ತಿಂಗಳಲ್ಲಿ ಮತ್ತೊಂದು ಆಘಾತ ಎದುರಿಸಿದರು. ಪ್ರೀತಿಸಿ ಮದುವೆಯಾದ ರಿತಿಕಾ ದೂರವಾಗಿದ್ದಳು. ಇದು ಅನುರಾಗ್ ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಕಳೆದ ಕೆಲ ತಿಂಗಳಿನಿಂದ ಖಿನ್ನತೆಗೆ ಜಾರಿದ್ದರು.

ಖಿನ್ನತೆಯಲ್ಲಿ ಬೈಕ್ ಅತೀವೇಗವಾಗಿ ಚಲಾಯಿಸಿ ಅಪಘಾತ ಮೈಮೇಲೆ ಎಳೆದುಕೊಂಡಿದ್ದಾರೆ. ಸದ್ಯ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಭಿಮಾನಿಗಳು ಅನುರಾಗ್ ಶೀಘ್ರ ಚೇತರಿಕಿಗೆ ಪಾರ್ಥಿಸಿ ಎಂದು ಮ್ಯಾನೇಜರ್ ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಪಾರ್ಥನೆ ಮುಖ್ಯ ಎಂದ ಮ್ಯಾನೇಜರ್

Source link
ಸಾವು ಬದುಕಿನ ಹೋರಾಟದಲ್ಲಿ ಬಿಗ್ ಬಾಸ್ ಸ್ಪರ್ಧಿ, ಲಾಸ್ಟ್ ರೈಡ್‌ನಲ್ಲಿ ಭೀಕರ ಅಪಘಾತ