ಸೆಂಟ್ರಲ್ ಡಿಸ್ಟ್ರಿಕ್ಟ್ ಆಟಗಾರ ಬ್ರೆಟ್ ರಾಂಡೆಲ್ 5 ಎಸೆತಗಳಲ್ಲಿ 5 ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನ 254 ವರ್ಷಗಳ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ನೇಪಿಯರ್: ನ್ಯೂಜಿಲೆಂಡ್‌ನ ಪ್ಲಂಕೆಟ್ ಶೀಲ್ಡ್ ಟೂರ್ನಿಯಲ್ಲಿ ನಾರ್ದರ್ನ್ ಡಿಸ್ಟ್ರಿಕ್ಟ್ ತಂಡದ ವಿರುದ್ಧ ಸೆಂಟ್ರಲ್ ಡಿಸ್ಟ್ರಿಕ್ಟ್ ಆಟಗಾರ ಬ್ರೆಟ್ ರಾಂಡೆಲ್ 5 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನ 254 ವರ್ಷಗಳ ಇತಿಹಾಸದಲ್ಲೇ ಮೊದಲು.

ಪಂದ್ಯದ 2ನೇ ದಿನವಾದ ಭಾನುವಾರ ರಾಂಡೆಲ್ ಈ ಸಾಧನೆ ಮಾಡಿದರು. ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದ್ದ ನಾರ್ದರ್ನ್ ತಂಡ ಬಳಿಕ 9 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ನಷ್ಟಕ್ಕೊಳಗಾಯಿತು.

ತಮ್ಮ 2ನೇ ಓವರ್‌ನ ಕೊನೆ ಎಸೆತದಲ್ಲಿ ಹೆನ್ರಿ ಕೂಪರ್ ವಿಕೆಟ್ ಕಿತ್ತರು. ಬಳಿಕ ತಮ್ಮ ಮುಂದಿನ ಓವರ್‌ನ ಆರಂಭಿಕ 4 ಎಸೆತಗಳಲ್ಲಿ ಕ್ರಮವಾಗಿ ಜೀತ್ ರಾವಲ್, ಜೋ ಕಾರ್ಟರ್, ರಾಬರ್ಟ್ ಓ‘ಡೊನೆಲ್ ಹಾಗೂ ಕ್ರಿಸ್ಟಿಯನ್ ಕ್ಲಾರ್ಕ್ ವಿಕೆಟ್ ಪಡೆದರು.

ಬ್ರೆಟ್ ರಾಂಡೆಲ್ ಅವರು ಸತತ 6 ವಿಕೆಟ್ ಪಡೆಯದಿದ್ದರೂ, 8 ಎಸೆತಗಳ ಅಂತರದಲ್ಲಿ 6 ವಿಕೆಟ್ ಕಿತ್ತ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಪಾತ್ರರಾದರು. ಅವರು ಈ ಇನ್ನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 25 ರನ್‌ಗೆ 7 ವಿಕೆಟ್ ಕಿತ್ತರು. ನಾರ್ದರ್ನ್ ತಂಡ 82 ರನ್‌ಗೆ ಆಲೌಟಾಯಿತು.

Source link
5 ಎಸೆತಕ್ಕೆ 5 ವಿಕೆಟ್ ಕಿತ್ತ ನ್ಯೂಜಿಲೆಂಡ್‌ನ ರಾಂಡೆಲ್: ಪ್ರಥಮ ದರ್ಜೆಯ 254 ವರ್ಷದಲ್ಲಿ ಇದೇ ಮೊದಲು!