ಅಹಮದಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಜತೆಗೆ ನರೇಂದ್ರ ಮೋದಿ ಸ್ಟೇಡಿಯಂಗೆ ಅಂಟಿದ ಕಳಂಕವನ್ನು ತೊಳೆದು ಹಾಕುವಲ್ಲಿ ಭಾರತ ತಂಡವು ಯಶಸ್ವಿಯಾಗಿದೆ.

ಅಹಮದಾಬಾದ್‌ನಲ್ಲಿ ಭಾರತದ ಅದೃಷ್ಟ ಕೊನೆಗೂ ಬದಲಾಗಿದೆ. ಅಹಮದಾಬಾದ್ ಸ್ಟೇಡಿಯಂ ಐಸಿಸಿ ಟೂರ್ನಿಗಳಲ್ಲಿ ಭಾರತದ ಪಾಲಿಗೆ ಅದೃಷ್ಟದ ತಾಣವಲ್ಲ ಎನ್ನುವ ಅಪವಾದದಿಂದ ಪಾರಾಗಿದೆ.

ಹೌದು, ಭಾರತದಲ್ಲೇ ನಡೆದಿದ್ದ 2023ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿತ್ತು. ಟೂರ್ನಿಯುದ್ದಕ್ಕೂ ಭಾರತ ಅಬ್ಬರಿಸಿದ್ದರೂ ಅಹಮದಾಬಾದ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಭಾರತ ಪರಾಭವಗೊಂಡಿತ್ತು.

ಇತ್ತೀಚೆಗೆ ಅಲ್ಲೇ ನಡೆದಿದ್ದ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೂ ಭಾರತ ಸೋತಿತ್ತು. ಇದರೊಂದಿಗೆ ಅಹಮದಾಬಾದ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟ ತಾಣವಲ್ಲ ಎಂಬ ಆಪಾದನೆಗೆ ಗುರಿಯಾಗಿತ್ತು.

ಈ ನಡುವೆ, ಲಕ್ ಬದಲಾಗಲಿ ಎಂಬ ಕಾರಣಕ್ಕೆ 2023ರ ಏಕದಿನ ಫೈನಲ್ ವೇಳೆ ಉಳಿದುಕೊಂಡಿದ್ದ ಹೋಟೆಲ್ ಬದಲಿಸಿ ಈ ಬಾರಿ ಬೇರೊಂದು ಹೋಟೆಲ್‌ನಲ್ಲಿ ಭಾರತೀಯ ಆಟಗಾರರು ತಂಗಿದ್ದರು. ಸದ್ಯ ಭಾರತ ಚಾಂಪಿಯನ್ ಆಗಿ ತನ್ನ ಅದೃಷ್ಟವನ್ನು ತಾನೇ ಬದಲಾಯಿಸಿದೆ.

ಮಾರ್ಚ್ 08ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಬಲಿಷ್ಠ ನ್ಯೂಜಿಲೆಂಡ್ ಎದುರು 96 ರನ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಹಾಗೂ ಒಟ್ಟಾರೆ ಮೂರನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಇದರ ಜತೆಗೆ 2023ರಲ್ಲಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅನುಭವಿಸಿದ್ದ ಸೋಲಿನ ನೋವನ್ನು ಮರೆಸುವಲ್ಲಿಯೂ ಈ ಗೆಲುವು ಯಶಸ್ವಿಯಾಗಿದೆ. ಇದಷ್ಟೇ ಅಲ್ಲದೇ ಸತತ ಎರಡು ಟಿ20 ವಿಶ್ವಕಪ್ ಗೆದ್ದ ಜಗತ್ತಿನ ಏಕೈಕ ತಂಡ ಎನ್ನುವ ಹೆಗ್ಗಳಿಕೆಗೂ ಭಾರತ ಪಾತ್ರವಾಗಿದೆ.

Source link
ಅಹಮದಾಬಾದಲ್ಲಿ ಚೇಂಜ್ ಆಯ್ತು ಭಾರತದ ಅದೃಷ್ಟ! ಕಪ್ ಗೆದ್ದು ಕಳಂಕ ತೊಳೆದ ಟೀಂ ಇಂಡಿಯಾ