
ಸಿನಿಮಾ ಫ್ಲಾಪ್ ಆದರೆ, ಅದಕ್ಕೆ ಸೀಕ್ವೆಲ್ ಮಾಡಲು ಯಾವ ನಿರ್ಮಾಪಕರೂ ಮುಂದಕ್ಕೆ ಬರೋದಿಲ್ಲ. ಮೊದಲ ಚಿತ್ರದಿಂದ ಆದ ನಷ್ಟವನ್ನೇ ನಿರ್ಮಾಪಕರು ಚೇತರಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುವಾಗ ಮತ್ತೆ ಅದಕ್ಕೆ ಸೀಕ್ವೆಲ್ ಮಾಡುವ ಸಾಹಸ ಮಾಡಿದರೆ ಹೇಗೆ? ಈಗ ಇದೆ ಸಾಹಸವನ್ನು ಕಮಲ್ ಹಾಸನ್ (ಕಮಲ್ ಹಾಸನ್) ಹಾಗೂ ನಿರ್ದೇಶಕ ಶಂಕರ್ ಮಾಡಲು ಮುಂದಾಗಿದ್ದರು. ಆದರೆ, ಇದಕ್ಕೆ ನಿರ್ಮಾಣ ಸಂಸ್ಥೆ ಆಸಕ್ತಿ ತೋರಿಸುತ್ತಿಲ್ಲ ಎಂದು ವರದಿಯಾಗಿದೆ.
‘ಇಂಡಿಯನ್’ ಸಿನಿಮಾ 1996ರಲ್ಲಿ ರಿಲೀಸ್ ಆಯಿತು. 30 ವರ್ಷಗಳ ಹಿಂದೆ ಬಂದ ಈ ಚಿತ್ರಕ್ಕೆ 2024ರಲ್ಲಿ ಸೀಕ್ವೆಲ್ ಬಂತು. ಈ ಚಿತ್ರ ಮೆಚ್ಚುಗೆ ಪಡೆಯಲು ವಿಫಲವಾಯಿತು. ಸಿನಿಮಾ ಹೀನಾಯವಾಗಿ ನಷ್ಟ ಕಂಡಿತು. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡಿದ್ದು, ನಿರ್ಮಾಣ ಸಂಸ್ಥೆಗೆ ಭಾರೀ ನಷ್ಟವಾಗಿದೆ. ಆದಾಗ್ಯೂ ಸಿನಿಮಾದ ಮೂರನೇ ಭಾಗದ ತರಲು ನಿರ್ದೇಶಕರು ಹಾಗೂ ಕಮಲ್ ಹಾಸನ್ ತೋರಿಸಿದ್ದರು. ಆದರೆ, ನಿರ್ಮಾಣ ಸಂಸ್ಥೆ ಈ ಬಗ್ಗೆ ಇನ್ನೂ ಮೀನಾಮೇಷ ಎನಿಸುತ್ತಿದೆ.
ಇದರಿಂದ ಶಂಕರ್ ಕೂಡ ಅಸಮಾಧಾನಗೊಂಡಿದ್ದಾರಂತೆ. ಅವರು ತಮ್ಮ ಮುಂದಿನ ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ. ಆದರೆ, ನಿರ್ಮಾಣ ಸಂಸ್ಥೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬೀಳಲಿದೆ ಎಂದು ಅವರು ಈ ಯೋಜನೆ ಕೈ ಬಿಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಸ್ಟಾರ್ ನಿರ್ದೇಶಕನ ಜೊತೆ ಕೈ ಜೋಡಿಸಲಿರುವ ಕಮಲ್ ಹಾಸನ್
ನಿರ್ಮಾಣ ಸಂಸ್ಥೆಗೆ ‘ಇಂಡಿಯನ್ 3’ ಮಾಡಲು ಯಾವುದೇ ಆಸಕ್ತಿ ಇಲ್ಲ. ಈ ಚಿತ್ರವನ್ನು ನೇರವಾಗಿ ನೆಟ್‌ಫ್ಲಿಕ್ಸ್‌ಗೆ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇತ್ತು. ಆದರೆ, ಇದಕ್ಕೆ ಶಂಕರ್ ರೆಡಿ ಇಲ್ಲ. ಥಿಯೇಟರ್ ನಲ್ಲಿ ರಿಲೀಸ್ ಮಾಡುವುದು ಅವರ ಗುರಿ. ಈ ತಿಕ್ಕಾಟದಿಂದ ಯೋಜನೆ ವಿಳಂಬವಾಗುತ್ತಿತ್ತು. ಈಗ ನಿರ್ಮಣ ಸಂಸ್ಥೆ ಜೊತೆ ಶಂಕರ್ ಕೂಡ ಯೋಜನೆಯಿಂದ ಹೊರ ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಾ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.