Headlines

Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ

Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ

Bengaluru: ವಿಧಾನಸೌಧದ ಮುಂದೆ ಯುವತಿಯರ ಡಿಶುಂ ಡಿಶುಂ: ಮಹಿಳಾ ದಿನಾಚರಣೆಯಂದು ಶಕ್ತಿ ಪ್ರದರ್ಶನ
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಮುಂದೆ ಯುವತಿಯರು ಹೊಡೆದಾಡಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಟ್ರೋ ನಿಲ್ದಾಣದ ಬಳಿ ನಡೆದ ಈ ಗಲಾಟೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ರಾಜ್ಯದ ಶಕ್ತಿಕೇಂದ್ರವಾಗಿರುವ ವಿಧಾನಸೌಧದ ಮುಂದೆ ಯುವತಿಯರು ಹೊಡೆದಾಡಿಕೊಂಡಿದ್ದಾರೆ. ಯುವತಿಯರ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರ ಸಂಜೆ ಸುಮಾರು 6 ಗಂಟೆಗೆ ಹೊಡೆದಾಟ ನಡೆದಿದೆ.

ಈ ಗಲಾಟೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಹಿಂದಿಯಲ್ಲಿ ಒಬ್ಬರಿಗೊಬ್ಬರು ನಿಂದಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಎಲ್ಲರೂ ಉತ್ತರ ಭಾರತ ಮೂಲದವರು ಎಂದು ತಿಳಿದು ಬಂದಿದೆ. ವಿಧಾನಸೌಧದ ಮೆಟ್ರೋ ನಿಲ್ದಾಣ ಪ್ರವೇಶ ದ್ವಾರದ ಬಳಿಯಲ್ಲಿ ಗಲಾಟೆ ನಡೆದಿದೆ.

ವಿಡಿಯೋ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಇಬ್ಬರ ನಡುವೆ ಶುರುವಾದ ಗಲಾಟೆ ಎರಡು ಗುಂಪುಗಳಾಗಿ ಬದಲಾದಂತೆ ಕಾಣಿಸುತ್ತಿದೆ. ಇನ್ನು ಸ್ಥಳದಲ್ಲಿ ಪೊಲೀಸ್ ಮತ್ತು ಜನರು ಯುವತಿಯರನ್ನು ಸಮಾಧಾನಗೊಳಿಸಿ ಸ್ಥಳದಿಂದ ಕಳುಹಿಸಿದ್ದಾರೆ.

ಕೆಂಪು ಡ್ರೆಸ್ ಧರಿಸಿದ ಯುವತಿ ಜೋರಾಗಿ ತನ್ನೆದುರು ನಿಂತಿರುವ ಮತ್ತೊಬ್ಬಾಕೆ ಮೇಲೆ ಮುಗಿಬೀಳುತ್ತಿರುತ್ತಾಳೆ. ಈ ಯುವತಿಯನ್ನು ಇಬ್ಬರು ಕಂಟ್ರೋಲ್ ಮಾಡಲು ಪ್ರಯತ್ನಿಸುತ್ತಿರೋದನ್ನು ಗಮನಿಸಬಹುದು. ಆದರೂ ಇಬ್ಬರ ಬಂಧನದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾಳೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಚಿಲ್ ಆಗೋಕೆ ಬಿಯರ್ ಖರೀದಿಸಿದ್ರೆ ಸಿಕ್ತು ಜೀವಂತ ಮೀನು; ಗ್ರಾಹಕ ಶಾಕ್

ಈ ವಿಡಿಯೋ ನೋಡಿದ ನೆಟ್ಟಿಗರು, ವಿಶ್ವ ಮಹಿಳಾ ದಿನಾಚರಣೆ ದಿನವೇ ಈ ಹೊಡೆದಾಟ ಬೇಕಿತ್ತಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಗಲಾಟೆ ಮಾಡಿಕೊಂಡ ಯುವತಿಯವರು ಎಲ್ಲಿಯವರು ಎಂಬುದರ ಬಗ್ಗೆಯೂ ತಿಳಿದು ಬಂದಿಲ್ಲ. ಸಾಮಾನ್ಯವಾಗಿ ವಿಧಾನಸೌಧದ ಮುಂದೆ ಫೋಟೋಶೂಟ್‌ಗಾಗಿ ಜನರು ಸೇರುತ್ತಾರೆ.

ಇದನ್ನೂ ಓದಿ: ತನ್ನ ಅಜ್ಜಿಯ ವಯಸ್ಸಿನ ಅಭಿಮಾನಿ ಭೇಟಿ ಮಾಡಿ ಆಸೆ ಈಡೇರಿಸಿದ ರಕ್ಷಿತಾ ಶೆಟ್ಟಿ

Source link

Leave a Reply

Your email address will not be published. Required fields are marked *