
ಟೆಸ್ಟ್, ಏಕದಿನ ನಾಯಕನಾಗಿರುವ ಶುಭ್‌ಮನ್ ಗಿಲ್‌ರನ್ನು ಟಿ20ಯಲ್ಲೂ ಬೆಳೆಸುವುದು ಆಯ್ಕೆ ಸಮಿತಿ ನಿರ್ಧಾರವಾಗಿತ್ತು. ಆದರೆ ಲಯದ ಕಾರಣಕ್ಕೆ ವಿಶ್ವಕಪ್‌ಗೂ ಮುನ್ನ ಅವರನ್ನು ತಂಡದಿಂದ ಹೊರಗಿಡುವ ದಿಟ್ಟ ನಿರ್ಧಾರ ಕೈಗೊಂಡು, ಇಶಾನ್ ಕಿಶನ್‌ರನ್ನು ಸೇರಿಸಿಕೊಂಡಿತು. ಇದು ಹಲವರನ್ನು ಅಚ್ಚರಿಗೆ ದೂಡಿದರೂ ತಂಡದ ವಿಚಾರದಲ್ಲಿ ಸರಿಯಾದ ನಿರ್ಧಾರವೇ ಆಗಿತ್ತು. ಇಶಾನ್ ಅಕ್ಷರಶಃ ಅಬ್ಬರಿಸಿ, ಪ್ರಮುಖ ಪಂದ್ಯಗಳಲ್ಲಿ ಗೆಲುವಿನ ರೂವಾರಿಯಾದರು.