Headlines

ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?

ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?


ಬ್ಯಾರಲ್ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ರೌದ್ರಾವತಾರ ಕಡಿಮೆಯಾಗುತ್ತಿಲ್ಲ. ಯುದ್ಧ ದಾಳಿಗೆ ತೈಲ ಸಂಗ್ರಹಗಾರರೇ (ತೈಲ ಟ್ಯಾಂಕ್‌ಗಳು) ಪ್ರಮುಖ ಗುರಿಯಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ (ಹೋರ್ಮುಜ್ ಜಲಸಂಧಿ) ತೈಲ ಸಾಗಣೆಗೆ ತಡೆಯಾಗಿರುವುದರಿಂದ ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರುತ್ತಿದೆ. ಕೆಲ ಕಚ್ಚಾ ತೈಲಗಳು (ಕ್ರೂಡ್ ಆಯಿಲ್ಸ್) ಬ್ಯಾರಲ್‌ಗೆ 120 ಡಾಲರ್‌ಗಳಷ್ಟು ಬೆಲೆ ಏರಿಕೆ ಕಂಡಿವೆ. ಮರ್ಬನ್ ಕ್ರೂಡ್ 120 ಡಾಲರ್‌ಗೆ ಏರಿದೆ. ಡಬ್ಲ್ಯುಟಿಐ ಕ್ರೂಡ್ 102 ಡಾಲರ್ ದಾಟಿದೆ. ಬ್ರೆಂಟ್ ಕ್ರೂಡ್ 107 ಡಾಲರ್ ಮುಟ್ಟಿದೆ. ಆದರೆ, ಡಬ್ಲ್ಯುಟಿಐ ಫ್ಯೂಚರ್ಸ್‌ನ ಬೆಲೆ 120 ಡಾಲರ್‌ಗೆ ಏರಿರುವುದು ಚಿಂತೆಯ ವಿಷಯವಾಗಿದೆ.

2008ರದ್ದು ದಾಖಲೆ ತೈಲ ಬೆಲೆ

2-3 ವಾರಗಳ ಹಿಂದಷ್ಟೇ ತೈಲ ಬೆಲೆ ಬ್ಯಾರಲ್‌ಗೆ 66 ಡಾಲರ್ ಇತ್ತು. ಬಹಳ ವೇಗವಾಗಿ ಇದರ ಬೆಲೆ ಎರಡು ಪಟ್ಟು ಹೆಚ್ಚಿದೆ. 18 ವರ್ಷದ ಹಿಂದೆ ತೈಲ ಬೆಲೆ (ಡಬ್ಲ್ಯುಟಿಐ ಕ್ರೂಡ್) ಬ್ಯಾರಲ್‌ಗೆ 147 ಡಾಲರ್ ಇತ್ತು. ಅದು ಸಾರ್ವಕಾಲಿಕ ಗರಿಷ್ಠ ತೈಲ ಬೆಲೆ ಎನಿಸಿದೆ. ಆಗ ಜಾಗತಿಕ ರಾಜಕೀಯ ಅನಿಶ್ಚಿತ ಸ್ಥಿತಿ ಜೊತೆಗೆ ಚೀನಾದಿಂದ ಸಿಕ್ಕಾಪಟ್ಟೆ ತೈಲ ಖರೀದಿ ನಡೆದಿತ್ತು. ಹೀಗಾಗಿ, ಕಚ್ಚಾ ತೈಲ 2008 ರಲ್ಲಿ ದುಬಾರಿಯಾಗಿದೆ. ಪ್ರಸಕ್ತ ಬಿಕ್ಕಟ್ಟು ಹೀಗೆಯೇ ಮುಂದುವರಿದರೆ 2008ರ ದಾಖಲೆಯನ್ನು ಮುರಿಯುವ ಸಾಧ್ಯತೆಯಿದೆ.

ಇದನ್ನೂ ಓದಿ: ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಆಗುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ಕಚ್ಛಾ ತೈಲ ಬೆಲೆ ದುಬಾರಿಯಾದರೆ ಭಾರತದ ಮೇಲೇನು ಪರಿಣಾಮ?

  • ಆರ್ಥಿಕತೆಗೆ ಹಿನ್ನಡೆ: ಈ ಪ್ರಕಾರ ಬ್ಯಾರಲ್‌ಗೆ 10 ಡಾಲರ್‌ನಷ್ಟು ಬೆಲೆ ಏರಿಕೆಯಾದರೆ, ಭಾರತದ ಜಿಡಿಪಿ ಬೆಳವಣಿಗೆ 50 ಮೂಲಾಂಕಗಳಷ್ಟು (ಶೇ. 0.5) ಹಿನ್ನಡೆ ಹೊಂದುತ್ತದೆ.
  • ಹಣದುಬ್ಬರ ಏರಿಕೆ: ಕಚ್ಚಾ ತೈಲ ಬೆಲೆ ಏರಿಕೆಯಾದರೆ ಪೆಟ್ರೋಲ್, ಡೀಸಲ್, ಎಲ್ಪಿಜಿ, ಎಲ್ಎನ್ಜಿ, ಪಿಎನ್ಜಿ ಇತ್ಯಾದಿ ಬೆಲೆಗಳೆಲ್ಲವೂ ಏರುತ್ತವೆ. ಇತರ ಹಲವು ಸರಕುಗಳ ಬೆಲೆ ಏರುತ್ತದೆ. ಪರಿಣಾಮವಾಗಿ, ಹಣದುಬ್ಬರ ಹೆಚ್ಚಾಗುತ್ತದೆ.
  • ಕರೆಂಟ್ ಅಕೌಂಟ್ ಡೆಫಿಸಿಟ್ ಏರಿಕೆ: ದುಬಾರಿ ಬೆಲೆಗೆ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ ಭಾರತ ಡಾಲರ್‌ಗಳನ್ನು ವ್ಯಯಿಸಬೇಕು. ಇದರಿಂದ ಕರೆಂಟ್ ಅಕೌಂಟ್ ಡೆಫಿಸಿಟ್. ಡಾಲರ್ ಎದುರು ರುಪಾಯಿ ಹೆಚ್ಚು ದುರ್ಬಲವಾಗಿರುತ್ತದೆ. ಇದರಿಂದ ಆಮದು ಮತ್ತಷ್ಟು ವೆಚ್ಚ ಹೆಚ್ಚಾಗುತ್ತದೆ. ಇದು ಹಣದುಬ್ಬರ ಮತ್ತಷ್ಟು ಹೆಚ್ಚಾಯಿತು.

ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ದರ ಏರಿಕೆ, ಗ್ರಾಹಕರ ಬಿಗ್ ಶಾಕ್

ತೈಲದ ಶಾಕ್ ತಾತ್ಕಾಲಿಕ ಮಾತ್ರ?

ಐತಿಹಾಸಿಕವಾಗಿ ನೋಡಿದಾಗ ತೈಲ ಬಿಕ್ಕಟ್ಟು ಹಲವು ಬಾರಿ ಎದುರಾಗಿದೆ. ಆದರೆ, ದೀರ್ಘ ಕಾಲ ಈ ಬಿಕ್ಕಟ್ಟು ಮುಂದುವರಿದಿದ್ದಿಲ್ಲ. ಈ ಬಾರಿಯೂ ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಬೇಗ ಮುಗಿಯುವ ನಿರೀಕ್ಷೆ ಇದೆ. ಅಕಸ್ಮಾತ್, ತೈಲ ಪೂರೈಕೆಯ ತಿಂಗಳುಗಟ್ಟಲೆ ಸ್ಥಗಿತಗೊಂಡರೆ ಪರಿಸ್ಥಿತಿ ಕಷ್ಟಕರವಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *