Headlines

ಹಾನಿಕಾರಕ… ಭಾರತದ ಗೆಲುವಿನ ಬೆನ್ನಲ್ಲೇ ಕ್ಯಾತೆ ತೆಗೆದ ಮೈಕಲ್ ವಾನ್

ಹಾನಿಕಾರಕ… ಭಾರತದ ಗೆಲುವಿನ ಬೆನ್ನಲ್ಲೇ ಕ್ಯಾತೆ ತೆಗೆದ ಮೈಕಲ್ ವಾನ್


ಹಾನಿಕಾರಕ… ಭಾರತದ ಗೆಲುವಿನ ಬೆನ್ನಲ್ಲೇ ಕ್ಯಾತೆ ತೆಗೆದ ಮೈಕಲ್ ವಾನ್

T20 ವಿಶ್ವಕಪ್ 2026: T20 ರಿಂದ 10 ನೇ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪ್ರದರ್ಶನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕಲೆಹಾಕಿದ್ದು ಬರೋಬ್ಬರಿ 255 ರನ್ಗಳು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಕೇವಲ 159 ರನ್‌ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್ಗಳ ಗೆಲುವಿನೊಂದಿಗೆ ಪಟ್ಟವನ್ನು ಅಲಂಕರಿಸಲಾಗಿದೆ.

ಭಾರತ ತಂಡದ ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಫೈನಲ್ ಮ್ಯಾಚ್ ಗೆ ಸಿದ್ಧಪಡಿಸಲಾದ ಪಿಚ್ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಬ್ಯಾಟರ್‌ಗಳಿಗಾಗಿ ನಿರ್ಮಿಸಲಾಗಿದೆ ಇಂತಹ ಪಿಚ್ ಕ್ರಿಕೆಟ್ ಆಟಕ್ಕೆ “ಹಾನಿಕಾರಕ” ಎಂದು ಕರೆದಿದ್ದಾರೆ.

ಭಾರತ ತಂಡವು 255 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿದ್ದರಿಂದ ಅಸಮಾಧಾನ ಹೊರಹಾಕಿದ ಮೈಕಲ್ ವಾನ್, ಇದು ಕೇವಲ ಬ್ಯಾಟರ್ಗಳಿಗೆ ಮಾತ್ರ ಅನುಕೂಲಕರವಾದ ಪಿಚ್ ಎಂದು ದೂರಿದರು. ಬೌಲರ್‌ಗಳಿಗೆ ಯಾವುದೇ ಸಹಾಯವಿಲ್ಲದ ಇಂತಹ ಪಿಚ್‌ಗಳು ಆಟದ ಸಮತೋಲನವನ್ನು ಕೆಡಿಸುತ್ತವೆ.

ಇಂತಹ ಪಿಚ್ಗಳಿಂದ ಸಮತೋಲಿತ ಆಟವು ಮರೆಯಾಗುತ್ತಿದೆ. ಕೇವಲ ಬ್ಯಾಟರ್‌ಗಳಿಗಾಗಿಯೇ ಈ ಪಿಚ್ ನಿರ್ಮಿಸಲಾಗಿದೆ, ಹೀಗಾಗಿಯೇ ಟೀಮ್ ಇಂಡಿಯಾ ಇಷ್ಟೊಂದು ದೊಡ್ಡ ಮೊತ್ತವನ್ನು ಪೇರಿಸಲು ಸಾಧ್ಯವಾಗಿದೆ. ಪಡೆದ ಸಮತೋಲಿತ ಪೈಪೋಟಿ ಕಂಡು ಬಂದಿಲ್ಲ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಆಯಶಸ್ ಸರಣಿಯ ವೇಳೆ ಮೊದಲ ದಿನವೇ 20 ವಿಕೆಟ್ ಉರುಳಿದಾಗ, ಎಂ.ಸಿ.ಜಿ (MCG) ಪಿಚ್ ಅವರು “ಹಾಸ್ಯಾಸ್ಪದ” ಎಂದು ಕರೆದರು. ಬ್ಯಾಟರ್‌ಗಳಿಗೆ ಅಸಾಧ್ಯವಾದ ಇಂತಹ ಪಿಚ್‌ಗಳು ಕ್ರಿಕೆಟ್‌ನ ಘನತೆಯನ್ನು ಕುಗ್ಗಿಸುವುದಿಲ್ಲ ಎಂದು ಅವರು ಒತ್ತಿ ಹೇಳಿದರು.

ಇದನ್ನೂ ಓದಿ: ಶೋಯೆಬ್ ಅಖ್ತರ್: ಭಾರತ ಕ್ರಿಕೆಟ್ ಅನ್ನೇ ಕೊಂದು ಹಾಕಿದ್ದಾರೆ..!

ಇದೀಗ ಐಸಿಸಿ ಫೈನಲ್ ಪಂದ್ಯಕ್ಕಾಗಿ ಬ್ಯಾಟರ್ ಪಾಲಿಗೆ ಸ್ವರ್ಗದಂತಹ ಪಿಚ್ ನಿರ್ಮಿಸಿರುವುದರ ಬಗ್ಗೆ ಮೈಕಲ್ ವಾನ್ ಪ್ರಶ್ನೆಗಳನ್ನೆತ್ತಿದ್ದಾರೆ. ಇಂತಹ ಪಿಚ್ಗಳಿಂದ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಸಮತೋಲನ ಇಲ್ಲದ ಪಂದ್ಯಗಳು ಕಂಡು ಬರುತ್ತವೆ. ಜೊತೆಗೆ ಈ ರೀತಿಯ ಪಿಚ್ ಪ್ರದರ್ಶನ ಆಸಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಕ್ರಿಕೆಟ್‌ನ ಭವಿಷ್ಯಕ್ಕೆ ಹಾನಿಯಾಗುತ್ತದೆ ಎಂದು ವಾನ್ ಕಳವಳ ವ್ಯಕ್ತಪಡಿಸಿದ್ದಾರೆ.

 



Source link

Leave a Reply

Your email address will not be published. Required fields are marked *