ಚಿಕ್ಕ ಮನೆಯನ್ನು ದೊಡ್ಡದಾಗಿ ಕಾಣುವಂತೆ ಮಾಡಲು ದುಬಾರಿ ಖರ್ಚುಗಳ ಅಗತ್ಯವಿಲ್ಲ. ಗೋಡೆಗಳಿಗೆ ಆಫ್ ವೈಟ್, ಪೇಸ್ಟಲ್ ಬ್ಲೂ, ಮತ್ತು ಲೈಟ್ ಗ್ರೇ ನಂತಹ ತಿಳಿ ಬಣ್ಣಗಳನ್ನು ಬಳಸುವುದರಿಂದ ಕೋಣೆಗಳು ಪ್ರಕಾಶಮಾನವಾಗಿ ಮತ್ತು ವಿಶಾಲವಾಗಿ ಕಾಣಿಸುತ್ತವೆ.

ನೀವು ಚಿಕ್ಕ ಮನೆ ಅಥವಾ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದೀರಾ? ಹಾಗಿದ್ರೆ ಯಾವುದೇ ದೊಡ್ಡ ಖರ್ಚಿಲ್ಲದೆ ನಿಮ್ಮ ಮನೆಯನ್ನು ದೊಡ್ಡದಾಗಿ ಕಾಣುವಂತೆ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಿರೋದು ಇಷ್ಟೇ, ನಿಮ್ಮ ಕೋಣೆಯ ಗೋಡೆಗಳ ಬಣ್ಣವನ್ನು ಬದಲಾಯಿಸಬೇಕು. ಕೆಲವರು ಗೋಡೆಗಳಿಗೆ ಡಾರ್ಕ್ ಕಲರ್ ಪೇಂಟ್ ಮಾಡಿಸುತ್ತಾರೆ, ಇದರಿಂದ ಕೋಣೆ ಇನ್ನಷ್ಟು ಚಿಕ್ಕದಾಗಿ ಕಾಣಿಸುತ್ತದೆ. ಆದರೆ ಮಾರುಕಟ್ಟೆಯಲ್ಲಿ ಈಗ ಸಿಲ್ಕ್ ಫಿನಿಶ್ ನೀಡುವ ಹಲವು ಬಣ್ಣಗಳು ಲಭ್ಯವಿವೆ. ಇವು ನಿಮ್ಮ ಕೋಣೆಯನ್ನು ಬ್ರೈಟ್ ಆಗಿ ಕಾಣುವಂತೆ ಮಾಡುತ್ತವೆ. ಗೋಡೆಗಳಿಗೆ ಹೊಳಪು ನೀಡಿ, ಕೋಣೆಯನ್ನು ದೊಡ್ಡದಾಗಿ ತೋರಿಸುವ 6 ವಾಲ್ ಕಲರ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಚಿಕ್ಕ ಕೋಣೆಯನ್ನು ದೊಡ್ಡದಾಗಿ ತೋರಿಸಲು ಆಫ್ ವೈಟ್ ಒಂದು ಕ್ಲಾಸಿಕ್ ಬಣ್ಣ. ಈ ಬಣ್ಣವು ಕೋಣೆಯನ್ನು ಸ್ವಚ್ಛವಾಗಿ, ಪ್ರಕಾಶಮಾನವಾಗಿ ಮತ್ತು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ಹಗಲು ಮತ್ತು ರಾತ್ರಿ, ಎರಡೂ ಹೊತ್ತಿನ ಬೆಳಕಿನಲ್ಲಿ ನಿಮ್ಮ ರೂಮ್ ದೊಡ್ಡದಾಗಿ ಮತ್ತು ಸುಂದರವಾಗಿ ಕಾಣಿಸುತ್ತದೆ.

ತಿಳಿ ನೀಲಿ ಬಣ್ಣವು ಕೋಣೆಗೆ ಶಾಂತ ಮತ್ತು ವಿಶಾಲವಾದ ಲುಕ್ ನೀಡುತ್ತದೆ. ಇದರಿಂದ ಕೋಣೆ ದೊಡ್ಡದಾಗಿ ಕಾಣಿಸುತ್ತದೆ. ಮಕ್ಕಳ ಸ್ಟಡಿ ರೂಮ್ ಅಥವಾ ಬೆಡ್‌ರೂಮ್‌ಗೆ ನೀವು ಈ ಬಣ್ಣವನ್ನು ಆಯ್ಕೆ ಮಾಡಬಹುದು. Asian Paints, Nerolac Paints, ಮತ್ತು Berger ನಂತಹ ಪ್ರಮುಖ ಬ್ರ್ಯಾಂಡ್‌ಗಳಲ್ಲಿ ನಿಮಗೆ ಹಲವಾರು ಉತ್ತಮ ಆಯ್ಕೆಗಳು ಸಿಗುತ್ತವೆ. ಬೇಸಿಗೆಯಲ್ಲಿ ಈ ಬಣ್ಣವು ಕೋಣೆಗೆ ತಂಪಾದ, ಶಾಂತ ಮತ್ತು ಸ್ಟೈಲಿಶ್ ನೋಟವನ್ನು ನೀಡುತ್ತದೆ.

ಲೈಟ್ ಗ್ರೇ ಬಣ್ಣವು ಮಾಡರ್ನ್ ಮತ್ತು ಎಲಿಗೆಂಟ್ ಲುಕ್ ನೀಡುವುದರ ಜೊತೆಗೆ, ಚಿಕ್ಕ ಕೋಣೆಯನ್ನು ಸಾಕಷ್ಟು ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಬೆಡ್‌ರೂಮ್, ಲಿವಿಂಗ್ ರೂಮ್, ಕಿಚನ್‌ನಿಂದ ಹಿಡಿದು ಬಾತ್‌ರೂಮ್‌ವರೆಗೂ ಮನೆಯ ಎಲ್ಲಾ ಭಾಗಗಳಿಗೂ ನೀವು ಗ್ರೇ ಕಲರ್ ಆಯ್ಕೆ ಮಾಡಬಹುದು.

ತಿಳಿ ಹಸಿರು ಬಣ್ಣವು ಕೋಣೆಗೆ ಫ್ರೆಶ್‌ನೆಸ್ ತರುವುದರ ಜೊತೆಗೆ, ರೂಮ್ ಅನ್ನು ವಿಶಾಲವಾಗಿ ಕಾಣುವಂತೆ ಮಾಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ನೀವು ಈ ಬಣ್ಣವನ್ನು ಆಯ್ಕೆ ಮಾಡಬಹುದು. ಹಸಿರು ಬಣ್ಣದಲ್ಲಿ ನಿಮಗೆ ಒಂದಲ್ಲ, ಹಲವು ಶೇಡ್‌ಗಳು ಸಿಗುತ್ತವೆ.

ಈ ಸಾಫ್ಟ್ ಮತ್ತು ಎಲಿಗೆಂಟ್ ಬಣ್ಣವು ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುತ್ತದೆ. ನಿಮ್ಮ ಮನೆಯ ಗೋಡೆಗಳಿಗೆ ಪೇಲ್ ಪಿಂಕ್ ಅಥವಾ ಬ್ಲಶ್ ಪಿಂಕ್ ಬಣ್ಣವನ್ನು ಬಳಸಿ. ಈ ಬಣ್ಣವನ್ನು ಹಚ್ಚುವುದರಿಂದ, ವಿಶೇಷವಾಗಿ ಬೆಡ್‌ರೂಮ್ ಅಥವಾ ಚಿಕ್ಕ ಕೋಣೆಗಳು ಕೂಡ ದೊಡ್ಡದಾಗಿ ಮತ್ತು ಬ್ರೈಟ್ ಆಗಿ ಕಾಣಿಸುತ್ತವೆ.

ಇದು ಸಾಫ್ಟ್ ಮತ್ತು ವಾರ್ಮ್ ಟೋನ್ ಹೊಂದಿರುವ ವಾಲ್ ಕಲರ್. ಇದು ಚಿಕ್ಕ ಕೋಣೆಯನ್ನು ದೊಡ್ಡದಾಗಿ ತೋರಿಸುತ್ತದೆ ಮತ್ತು ತಂಪಾದ ಅನುಭವವನ್ನು ನೀಡುತ್ತದೆ. ನಿಮ್ಮ ಮನೆಯ ಬೇರೆ ಬೇರೆ ಕೋಣೆಗಳಿಗೆ ಮಿಂಟ್ ಗ್ರೀನ್, ಆಫ್ ವೈಟ್ ಮತ್ತು ಲೈಟ್ ಬೇಜ್‌ನಂತಹ ಬಣ್ಣಗಳನ್ನು ನೀವು ಆಯ್ಕೆ ಮಾಡಬಹುದು.

Source link
ನಿಮ್ಮ ಚಿಕ್ಕ ಕೋಣೆ ದೊಡ್ಡದಾಗಿ ಅರಮನೆಯಂತೆ ಕಾಣಬೇಕಾ? ಇಲ್ಲಿವೆ ನೋಡಿ 6 ಬಣ್ಣದ ಜಾದೂ