
ಈ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಕೇವಲ 5 ಪಂದ್ಯಗಳಲ್ಲಿ 321 ರನ್ ಗಳಿಸಿದರು. ಇದರಲ್ಲಿ 199.37 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದು ವಿಶೇಷ. ವೆಸ್ಟ್ ಇಂಡೀಸ್ ವಿರುದ್ಧ 97*, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 89 ಮತ್ತು ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 89 ರನ್ ಗಳಿಸಿ, ಸತತ ಮೂರು ಪ್ರಮುಖ ಪಂದ್ಯಗಳಲ್ಲಿ ಭಾರತವನ್ನು ಗೆಲ್ಲಿಸಿದರು. ಫೈನಲ್ನಲ್ಲಿ ಸಂಜು ಗಳಿಸಿದ 89 ರನ್ಗಳು, ಟಿ20 ವಿಶ್ವಕಪ್ ಫೈನಲ್ನಲ್ಲಿ ಬ್ಯಾಟರ್ ಒಬ್ಬರು ಗಳಿಸಿದ ಅತಿ ಹೆಚ್ಚು ವೈಯುಕ್ತಿಕ ಸ್ಕೋರ್ ಎಂಬ ದಾಖಲೆ ಬರೆಯಿತು. ಈ ಹಿಂದೆ ಮರ್ಲಾನ್ ಸ್ಯಾಮ್ಯುಯೆಲ್ಸ್ (85*) ಮತ್ತು ಕೇನ್ ವಿಲಿಯಮ್ಸನ್ (85) ಹೆಸರಿನಲ್ಲಿದ್ದ ದಾಖಲೆಗಳನ್ನು ಅವರು ಮುರಿದರು.