Headlines

Iran Israel War: ಯುದ್ಧದ ಪರಿಣಾಮ ಕಾರವಾರ ಬಂದರಿಗೆ ಡಾಂಬರ್ ಸರಬರಾಜು ಬಂದ್; ತಿಂಗಳಿಗೆ 80 ಲಕ್ಷ ರೂ. ನಷ್ಟ!

Iran Israel War: ಯುದ್ಧದ ಪರಿಣಾಮ ಕಾರವಾರ ಬಂದರಿಗೆ ಡಾಂಬರ್ ಸರಬರಾಜು ಬಂದ್; ತಿಂಗಳಿಗೆ 80 ಲಕ್ಷ ರೂ. ನಷ್ಟ!


ಇರಾನ್ ಇಸ್ರೇಲ್ ಯುದ್ಧ: ಯುದ್ಧದ ಪರಿಣಾಮ ಕಾರವಾರ ಬಂದರಿಗೆ ಡಾಂಬರ್ ಸರಬರಾಜು ಬಂದ್; ತಿಂಗಳಿಗೆ 80 ಲಕ್ಷ ರೂ. ನಷ್ಟ!

ಕಾರವಾರ, ಮಾರ್ಚ್ 09: ಉತ್ತರ ಕನ್ನಡ ಜಿಲ್ಲೆ (ಉತ್ತರ ಕನ್ನಡ) ಕಾರವಾರದಲ್ಲಿ ಮಧ್ಯಪ್ರಾಚ್ಯ ಯುದ್ಧ ಸಂಘರ್ಷದ ಪರಿಣಾಮ ವಾಣಿಜ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಇರಾನ್‌ನಿಂದ ಕಾರವಾರದ ವಾಣಿಜ್ಯ ಬಂದರಿಗೆ ಬರುತ್ತಿದ್ದ ಕಚ್ಚಾ ಡಾಂಬರ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದ ತಿಂಗಳಿಗೆ 80 ಲಕ್ಷ ರೂ.ಗಳವರೆಗೆ ನಷ್ಟವಾಗುತ್ತಿದೆ ಎಂದು ತಿಳಿದು ಬಂದಿದೆ.

ಡೀಸೆಲ್ ಸರಬರಾಜಿಗೂ ಸಂಕಷ್ಟ

ಸಾಮಾನ್ಯವಾಗಿ ಪ್ರತಿ ತಿಂಗಳು ಇರಾನ್‌ನಿಂದ ಕಚ್ಚಾ ಡಾಂಬರ್ ಸಾಗಣೆ ಹಡಗುಗಳು ಕಾರವಾರ ಬಂದರಿಗೆ ಆಗಮಿಸುತ್ತಿದ್ದವು. ಆದರೆ ಯುದ್ಧದ ಪರಿಸ್ಥಿತಿಯಿಂದ ಈಗ ಹಡಗುಗಳು ಬಾರದ ಕಾರಣ ಬಂದರು ಬಿಕೋ ಎನ್ನುತ್ತಿದೆ. ಇದರಿಂದ ಗಲ್ಪ್ ರಾಷ್ಟ್ರಗಳಿಂದ ಬರುತ್ತಿದ್ದ ಡೀಸೆಲ್ ಸರಬರಾಜಿಗೂ ಸಂಕಷ್ಟ ಎದುರಾಗಿದೆ. ಕಾರವಾರದ ಕದಂಬ ನೌಕಾ ನೆಲೆಗೆ ಡೀಸೆಲ್ ಅನ್ನು ಈಗ ಮುಂಬೈಯಿಂದ ತರಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಬಂದರು ವಾಣಿಜ್ಯ ಚಟುವಟಿಕೆಗಳ ಮೇಲೆ ಅವಲಂಬಿತವಾದ ಲಾರಿ ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ ಜಗತ್ತಿಗೇ ಕಂಟಕ ಇರಾನ್ ಯುದ್ಧ: ಮಾರಕ ಕಾಯಿಲೆ ಹರಡುವ ಭೀತಿ, ಭಾರತಕ್ಕೂ ಇದೆ ಆತಂಕ!

ಕಚ್ಚಾ ಡಾಂಬರ್ ಸಾಗಣೆಗಾಗಿ ಬಂದಿದ್ದ ಲಾರಿಗಳು ಕಾರವಾರ ವಾಣಿಜ್ಯ ಬಂದರು ಬಳಿ ಸಾಲುಗಟ್ಟಿ ನಿಂತಿದ್ದು, ಕಳೆದ ಹತ್ತು ದಿನಗಳಿಂದ ಕೆಲಸವಿಲ್ಲದೇ ನಿಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಡಗು ಸಂಚಾರ ಕಡಿಮೆಯಾಗಿರುವ ನಿಮಗೆ ಬಂದರಿಗೆ ತಿಂಗಳಿಗೆ 70 ರಿಂದ 80 ಲಕ್ಷ ರೂಪಾಯಿ ನಷ್ಟವಾಗುತ್ತಿದೆ ಎಂದು ಸೂಚಿಸಲಾಗಿದೆ. ಇದರಿಂದ ಬಂದರು ಆಧಾರಿತ ವ್ಯಾಪಾರಿಗಳು ಹಾಗೂ ಕಾರ್ಮಿಕರಲ್ಲಿ ಆತಂಕ ಉಂಟಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *