
ಬೆಂಗಳೂರು, ಮಾರ್ಚ್ 9: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತು ನಾನಾ ರೀತಿಯ ಅಭಿಪ್ರಾಯಗಳು, ಭಯ, ಆತಂಕ, ಖುಷಿ ಎಲ್ಲಾ ಕಂಡುಬರುತ್ತಿದೆ. ಆಂಥ್ರೋಪಿಕ್‌ನ ಕ್ಲಾಡ್ ಐಐಎಯ ನಂತರ ಎಲ್ಲಾ ಸಾಫ್ಟ್‌ವೇರ್ ಕಂಪನಿಗಳು ಧೂಳಿಪಟ ಎಂಬ ಸುದ್ದಿ ಇತ್ತೀಚೆಗೆ ಸಾಕಷ್ಟು ಕೇಳಿ ಬಂದಿತ್ತು. ಎಲ್ಲಾ ಹೊಸ ತಂತ್ರಜ್ಞಾನಗಳು ಬಂದರೆ ಇದೇ ರೀತಿ ಭಯ ಇರುತ್ತೆ. ಆದರೆ, ತಂತ್ರಜ್ಞಾನಗಳು ಮನುಷ್ಯನಿಗೆ ಬಲ ನೀಡುತ್ತವೆ ಅವನ ಸ್ಥಾನವನ್ನು ಕಿತ್ತುಕೊಳ್ಳುವುದಿಲ್ಲ ಎಂಬ ಸಮಾಧಾನಕರ ಅಭಿಪ್ರಾಯಗಳು ಇವೆ. ಈ ಮಧ್ಯೆ ಟಾಮ್ ಬ್ಲಾಮ್‌ಫೀಲ್ಡ್ (ಟಾಮ್ ಬ್ಲೋಮ್‌ಫೀಲ್ಡ್) ಎಂಬುವವರು ಹೊಸ ಐ ಬಾಂಬ್ ಸಿಡಿಸಿದ್ದಾರೆ. ಅವರ ಪ್ರಕಾರ ಕ್ಲಾಡ್ ಎಐ ಅದೆಷ್ಟು ಪ್ರಚಂಡವಾಗಿದೆ ಎಂದರೆ ಇಡೀ ಕಂಪನಿಯ ಎಲ್ಲಾ ಕೆಲಸಗಳನ್ನೂ ಒಬ್ಬನೇ ವ್ಯಕ್ತಿ ಮಾಡಲು ಸಾಧ್ಯವಾಗುತ್ತಿಲ್ಲ.
ವೈ ಕಾಂಬಿನೇಟರ್ ಎಂಬ ಸ್ಟಾರ್ಟಪ್ ಫಂಡಿಂಗ್ ಕಂಪನಿಯ ಪಾರ್ಟ್ನರ್ ಆಗಿರುವ ಟಾಮ್ ಬ್ಲಾಮ್ಫೀಲ್ಡ್ ಅವರು ಎಕ್ಸ್‌ನಲ್ಲಿ ಈ ಬಾಂಬ್ ಸಿಡಿಸಿ ಐಟಿ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದಾರೆ. ಅವರು ಮಾಡಿದ ಟ್ವೀಟ್ ಇಷ್ಟೇ… ‘ಕಳೆದ ಮಂಗಳವಾರ ಕ್ಲಾಡ್ ಕೋಡ್ ಕಲಿತ 24 ವರ್ಷದ ಇಡೀ ಅಕ್ಸೆಂಚರ್ ವರ್ಕ್ಫೋರ್ಸ್ ಅನ್ನೇ ಮೀರಿಸಲಿದ್ದಾನೆ’ ಎಂಬುದು. ಮಾರ್ಚ್ 2 ರಂದು ಮಾಡಿದ ಟ್ವೀಟ್ ಅದು.
ಟಾಮ್ ಬ್ಲಾಮ್ಫೀಲ್ಡ್ ಮಾಡಿದ ಟ್ವೀಟ್
ಕಳೆದ ಮಂಗಳವಾರ ಕ್ಲೌಡ್ ಕೋಡ್ ಅನ್ನು ಕಲಿತ 24 ವರ್ಷ ವಯಸ್ಸಿನವರಿಂದ ಸಂಪೂರ್ಣ ಅಕ್ಸೆಂಚರ್ ಕಾರ್ಯಪಡೆಯು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.
– ಟಾಮ್ ಬ್ಲೋಮ್‌ಫೀಲ್ಡ್ (@t_blom) ಮಾರ್ಚ್ 1, 2026
ಕ್ಲಾಡ್ ಎಐ ಅಭಿವೃದ್ಧಿಪಡಿಸಿದ ಆಂಥ್ರೋಪಿಕ್ ಕಂಪನಿಯ ಸಹ-ಸಂಸ್ಥಾಪಕ ಜ್ಯಾಕ್ ಅವರು ಇತ್ತೀಚೆಗೆ ಟಿವಿ ಪ್ರದರ್ಶನದಲ್ಲಿ ಕ್ಲಾಡ್ನ ಉಪಯುಕ್ತತೆಯ ಬಗ್ಗೆ ಒಂದು ಮಾಹಿತಿ ಹೊರಗೆಡವಿದರು. ಕಂಪನಿಯ ಹೆಚ್ಚಿನ ಇಂಟರ್ನಲ್ ಕೋಡ್ ಅನ್ನು ಕ್ಲಾಡ್ ಬರೆಯಬಲ್ಲದು. ಈ ವರ್ಷಾಂತ್ಯದೊಳಗೆ ಸಂಪೂರ್ಣ ಎಲ್ಲಾ ಕೋಡ್ ಅನ್ನು ಈ ಎಐ ಸ್ವತಂತ್ರವಾಗಿ ನಿಭಾಯಿಸಬಲ್ಲದು.
ಇದನ್ನೂ ಓದಿ: ಬಿಕ್ಕಟ್ಟಿನಲ್ಲಿ ಏರಬೇಕಿದ್ದ ಚಿನ್ನದ ಬೆಲೆ ಕಡಿಮೆ ಆಗುತ್ತಿರುವುದು ಯಾಕೆ? ಇಲ್ಲಿವೆ ಇಂಟರೆಸ್ಟಿಂಗ್ ಕಾರಣಗಳು
ಕ್ಲಾಡ್ನಿಂದ ಅಕ್ಸೆಂಚರ್ ಗತಿ ಏನು?
ಟಾಮ್ ಬ್ಲಾಮ್‌ಫೀಲ್ಡ್ ಅವರ ಟ್ವೀಟ್‌ಗೆ ನಾನಾ ಪ್ರತಿಕ್ರಿಯೆಗಳು ಬಂದಿವೆ. ಅಕ್ಸೆಂಚ ಕಂಪನಿ ಹೇಗೆ ಈ ಕ್ಲಾಡ್ ಅನ್ನು ಆಡಬಲ್ಲುದು ಎಂದು ವಿವರಿಸಲಾಗಿದೆ. ಏಳು ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಅಕ್ಸೆಂಚರ್ ಕಂಪನಿ ಕಳೆದ ವರ್ಷ ಆಂಥ್ರೋಪಿಕ್ ಜೊತೆ ಒಪ್ಪಂದ ಮಾಡಿಕೊಂಡಿತು, ತನ್ನ 30,000 ಎಂಜಿನಿಯರುಗಳಿಗೆ ಕ್ಲಾಡ್‌ನ ಟ್ರೈನಿಂಗ್ ಕೊಡಿಸಿತು. ಎಐ ವರ್ಕ್ಫ್ಲೋ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಅಕ್ಸೆಂಚರ್ ಇಟ್ಟ ಹೆಜ್ಜೆ ಇದು. ಇದೀಗ ಅಕ್ಸೆಂಚರ್ ಕಂಪನಿಯು ಡಿಸ್ಟ್ರಿಬ್ಯೂಶನ್ ಲೇಯರ್ ಆಗಿರುತ್ತದೆ. ಕ್ಲಾಡ್ ಕಲಿತ 24 ವರ್ಷದ ವ್ಯಕ್ತಿ ಡೆಮೋ ಕೊಡಬಹುದು. ಆದರೆ, ಅನುಷ್ಠಾನ, ಮ್ಯಾನೇಜ್‌ಮೆಂಟ್ ಬದಲಾವಣೆ, ಡಾಟಾ ಮೈಗ್ರೇಶನ್, ಮಲ್ಟಿ ಇಯರ್ ಕಾಂಟ್ರಾಕ್ಟ್ ಇತ್ಯಾದಿಗಳನ್ನು ಅಕ್ಸೆಂಚರ್ ಕಂಪನಿ ನಿಯಂತ್ರಿಸುತ್ತದೆ ಎಂದು ಅವರು ತಮ್ಮ ಟ್ವೀಟ್‌ನಲ್ಲಿ ವಿವರಿಸಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ