Headlines

ಸಾವಿರಾರು ಮರಗಳ ಮಾರಣಹೋಮಕ್ಕೆ ಸಜ್ಜಾದ ಸರ್ಕಾರ?: ಪರಿಸರ ವಾದಿಗಳಿಂದ ತೀವ್ರ ವಿರೋಧ

ಸಾವಿರಾರು ಮರಗಳ ಮಾರಣಹೋಮಕ್ಕೆ ಸಜ್ಜಾದ ಸರ್ಕಾರ?: ಪರಿಸರ ವಾದಿಗಳಿಂದ ತೀವ್ರ ವಿರೋಧ


ಸಾವಿರಾರು ಮರಗಳ ಮಾರಣಹೋಮಕ್ಕೆ ಸಜ್ಜಾದ ಸರ್ಕಾರ?: ಪರಿಸರ ವಾದಿಗಳಿಂದ ತೀವ್ರ ವಿರೋಧ

ಬೆಂಗಳೂರು, ಮಾರ್ಚ್ 09: ಅಭಿವೃದ್ಧಿಯ ಹೆಸರಲ್ಲಿ ಪರಿಸರದ ನಾಶದಿಂದಾಗಿ ಪ್ರಾಕೃತಿಕ ಸಮತೋಲನ ಹಾಳಾಗಿ ಸಾಲು ಸಾಲು ಸಂಕಷ್ಟಗಳನ್ನು ಜನ ಅನುಭವಿಸುತ್ತಿದ್ದಾರೆ. ಪರಿಸರವನ್ನು ಉಳಿಸುವ ಸಲುವಾಗಿ ಅದೆಷ್ಟೋ ಸಂಘ-ಸಂಸ್ಥೆಗಳು ಗಿಡಗಳನ್ನು ನೆಡುವ ಜೊತೆಗೆ ಪರಿಣಾಮಕಾರಿ ಕೆಲಸಗಳನ್ನು ಮಾಡುತ್ತಿವೆ. ಪರಿಸರ ನಾಶದಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈಹಾಕಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ಹೆಸರಲ್ಲಿ ಸಾವಿರಾರು ಮರಗಳ ಮಾರಣಹೋಮಕ್ಕೆ ಸರ್ಕಾರ ಸಜ್ಜಾಗಿದೆ ಎಂಬ ವಿಚಾರ ಹರಿದಾಡಿದ್ದು, ಈ ಬಗ್ಗೆ ಪ್ರಿಯರಿಂದ ಭಾರಿ ವಿರೋಧ ಕೇಳಿಬಂದಿದೆ.

ಮಲ್ಲೇಶ್ವರದಲ್ಲಿರುವ ಮೈಸೂರು ಲ್ಯಾಂಪ್ ವರ್ಕ್ಸ್ ಲಿಮಿಟೆಡ್ ಆವರಣದ 22 ಕೇಂದ್ರ ಜಾಗದಲ್ಲಿ ಕನ್ವೆನ್ಶನ್ ಸೆಂಟರ್ ಮತ್ತು ಎಸಿಬಿಷನ್ ಸೆಂಟರ್ ನಿರ್ಮಿಸುವ ಬಗ್ಗೆ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಹಲವು ವರ್ಷಗಳಿಂದ ಈ ಕಾರ್ಖಾನೆಯ ಕೆಲಸ ಸ್ಥಗಿತಗೊಂಡಿದೆ. ಸದ್ಯ ಈ ಕಾರ್ಖಾನೆ ಪ್ಲಾಂಟೇಷನ್ ತುಂಬೆಲ್ಲ ಸಾವಿರಾರು ಮರಗಳಿದ್ದು, ಇವುಗಳನ್ನು ಕಡಿದು ಆ ಜಾಗದಲ್ಲಿ 10 ಸಾವಿರ ಜನರಿಗೆ ವ್ಯವಸ್ಥೆಯಾಗುವಂತೆ ಇಂಟರ್‌ನ್ಯಾಶನಲ್ ಕನ್ಷೆಷನ್ ಸೆಂಟರ್, ಎಕ್ಸಿಸಿಬಿಷನ್ ಸೆಂಟರ್, 5 ಸ್ಟಾರ್ ಹೋಟೆಲ್‌ಗಳು, ಮಲ್ಟಿಪ್ಲೆಕ್ಸ್ ಹಾಲ್ ಮತ್ತು 50 ವರ್ಷ ಬಾಳಿಕೆ ಬರುವ ಅಂಡರ್ ಗ್ರೌಂಡ್ ಪಾರ್ಕಿಂಗ್ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೇರೆ ದೇಶದ ಗಣ್ಯರು ಬಂದ್ರೆ ಉಳಿದುಕೊಳ್ಳಲು ವ್ಯವಸ್ಥೆಯಾಗುವ ರೀತಿ ಯೋಜನೆ ನಿರ್ಮಿಸಲು ಪ್ಲ್ಯಾನ್ ನಡೆದಿದೆ.

ಇದನ್ನೂ ಓದಿ: ಬಿಸಿಲಿನ ತಾಪಕ್ಕೆ ‘ಬೆಂದಕಾಳೂರು’ ವಿಲ ವಿಲ! ಮಣ್ಣಿನ ಮಡಿಕೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಆದರೆ ಅಂತಾರಾಷ್ಟ್ರೀಯ ಕನ್ವೆನ್ಷನ್ ಹಾಲ್ ಹೆಸರಲ್ಲಿ ಮರಗಳ ಮಾರಣ ಹೋಮಕ್ಕೆ ಪರಿಸರವಾದಿ ಜೋಸೆಫ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ದಯವಿಟ್ಟು ಮರಗಳನ್ನು ಕಡಿಯೋದನ್ನು ನಿಲ್ಲಿಸಿ ಎಂದು ಮನವಿ ಮಾಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಶೇ. 93ರಷ್ಟು ಮರಗಳನ್ನು ಕಡಿದು ಹಾಕಿದ್ದೇವೆ. ಮರಗಳ ಸಂಖ್ಯೆ ಸಹ ಕಡಿಮೆಯಾಗಿದೆ. ಕೆರೆಗಳ ನಿರ್ವಹಣೆ ಇಲ್ಲದೆ ಬೆಂಗಳೂರು ಡೆಡ್ ಸಿಟಿ ಆಗಿದೆ. ಇದರ ಜೊತೆಗೆ ಮತ್ತೆ ಸರ್ಕಾರ ಮರಗಳಿಗೆ ಕೊಡಲಿ ಬಿಲ್ಡಿಂಗ್ ಕಟ್ಟಲು ಮುಂದಾಗಿದೆ. ಬೆಂಗಳೂರಿನ ವಾತಾವರಣ ಬದಲಾವಣೆಯಾಗಿದೆ. ಎದೆಯ ತೊಂದರೆಗಳು, ತಾಪಮಾನದಲ್ಲಿ ಬದಲಾವಣೆ ದಿನೇ ಹೆಚ್ಚಾಗುತ್ತಲೇ ಇರುತ್ತವೆ. ಹೀಗಾಗಿ ಅಭಿವೃದ್ಧಿ ಹೆಸರಿನಲ್ಲಿ ಮರಗಳಿಗೆ ಕೊಡಲಿ ತಪ್ಪು ಎಂದು ಅವರು.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *