ಟೀಂ ಇಂಡಿಯಾ ಅಭಿಮಾನಿಗಳು ಯಾವುದನ್ನು ನಿರೀಕ್ಷಿಸಿದ್ದರೋ ಅದೇ ಆಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ಫೈನಲ್ನಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಮೂರನೇ ಬಾರಿಗೆ ಟ್ರೋಫಿ ಎತ್ತಿ ಹಿಡಿದಿದೆ. ಇದರೊಂದಿಗೆ ಟೀಂ ಇಂಡಿಯಾ ತವರಿನಲ್ಲಿ ಟಿ20 ಗೆದ್ದ ಮೊದಲ ತಂಡವೆಂಬ ದಾಖಲೆ ನಿರ್ಮಿಸಿದೆ.
ತವರಿನ ಅಭಿಮಾನಿಗಳ ಮುಂದೆ ಐತಿಹಾಸಿಕ ಸಾಧನೆ ಮಾಡಿದ ಟೀಂ ಇಂಡಿಯಾಗೆ ಐಸಿಸಿ ವತಿಯಿಂದ ಟ್ರೋಫಿ ಜೊತೆಗೆ ದೊಡ್ಡ ಮೊತ್ತದ ಬಹುಮಾನವು ಸಿಗಲಿದೆ. ಟೀಂ ಇಂಡಿಯಾಗೆ ಇದೆ, ರನ್ನರ್ ಅಪ್ ತಂಡವಾದ ಕಿವೀಸ್ಗೂ ಕೋಟಿ ಕೋಟಿ ಹಣ ಸಿಗಲಿದೆ. ಹಾಗಿದ್ದರೆ, ಈ ಎರಡು ತಂಡಗಳಿಗೆ ಐಸಿಸಿ ಖಜಾನೆಯಿಂದ ಎಷ್ಟು ಹಣ ಸಿಗಲಿದೆ ಎಂದು ನೋಡುವುದಾದರೆ..
2026 ರ ಟಿ20-ಯಿಂದ ಗೆದ್ದ ಟೀಂ ಇಂಡಿಯಾಕ್ಕೆ ಸುಮಾರು 27.48 ಕೋಟಿ ರೂ. ಬಹುಮಾನ ಸಿಕ್ಕಿದೆ. ಇದು ಹಿಂದಿನ ಆವೃತ್ತಿಗಳಿಗೆ, ಬಹುಮಾನದ ಗಾತ್ರದಲ್ಲಿ ಗಮನಾರ್ಹವಾಗಿದೆ. ಏಕೆಂದರೆ ಕಳೆದ ಆವೃತ್ತಿಯ ಚ್ಯಾಂಪಿಯನ್ ಆಗಿದ್ದ ಭಾರತ ತಂಡಕ್ಕೆ 20.42 ಕೋಟಿ ರೂ. ಬಹುಮಾನ ಪಡೆದಿತ್ತು. ಆದರೆ ಈ ಆವೃತ್ತಿಯಲ್ಲಿ ಭಾರತಕ್ಕೆ 7 ಕೋಟಿ ರೂ. ಅಧಿಕವಾಗಿ ಸಿಕ್ಕಿದೆ.
ಮತ್ತೊಂದೆಡೆ ಫೈನಲ್ನಲ್ಲಿ ಸೋತ ನ್ಯೂಜಿಲೆಂಡ್ ತಂಡಕ್ಕೂ ಸುಮಾರು ರೂ. 14.65 ಕೋಟಿ ರೂ. ಬಹುಮಾನ ಸಿಕ್ಕಿದೆ. ಉಳಿದಂತೆ ಸೆಮಿಫೈನಲ್ನಲ್ಲಿ ಸೋತ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳಿಗೆ ತಲಾ 7.24 ಕೋಟಿ ರೂ. ಬಹುಮಾನ ನೀಡಲಾಗಿದೆ. ಇದಲ್ಲದೆ, ಸೂಪರ್ 8 ಹಂತವನ್ನು ತಲುಪಿದ ಆದರೆ ಸೆಮಿಫೈನಲ್ ತಲುಪಲು ವಿಫಲವಾದ ಪ್ರತಿ ತಂಡಕ್ಕೂ ಸುಮಾರು 3.48 ಕೋಟಿ ರೂ. ಬಹುಮಾನ ನೀಡಲಾಗಿದೆ. ಎಲ್ಲಾ ತಂಡಗಳಿಗೆ ಸುಮಾರು 2.29 ಕೋಟಿ ರೂ. ಹಣ ಸಿಕ್ಕಿದೆ.
ಇನ್ನು ಈ ಫೈನಲ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪ್ರದರ್ಶನ ಅದ್ಭುತ ನೀಡಿತು. ಸಂಜು ಸ್ಯಾಮ್ಸನ್ 46 ರನ್ಗಳಲ್ಲಿ 89 ರನ್ ಗಳಿಸಿ ತಂಡವು 5 ಗಳಿಸಲು 255 ಗಳಿಸಲು ಸಹಾಯ ಮಾಡಿದರು. ಉತ್ತರವಾಗಿ, ನ್ಯೂಜಿಲೆಂಡ್ 159 ರನ್ಗಳಿಗೆ ಆಲೌಟ್ ಆಯಿತು. ಜಸ್ಪ್ರೀತ್ ಬುಮ್ರಾ 15 ರನ್ಗಳಿಗೆ 4 ವಿಕೆಟ್ಗಳನ್ನು ಪಡೆದರೆ, ಅಕ್ಷರ್ ಪಟೇಲ್ 3 ವಿಕೆಟ್ಗಳನ್ನು ಪಡೆದರು.




