ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ

ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ


ಲೈವ್ ಬಂದು ಸಾಯಲು ಯತ್ನಿಸಿದ ಬಿಗ್ ಬಾಸ್ ಸ್ಪರ್ಧಿ; ಪರಿಸ್ಥಿತಿ ಚಿಂತಾಜನಕ

ಜನಪ್ರಿಯ ಯೂಟ್ಯೂಬರ್ ಅನುರಾಗ್ ದೊಭಾಲ್ (ಅನುರಾಗ್ ದೋಭಾಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಹಿಂದಿ ಬಿಗ್ ಬಾಸ್ ಸೀಸನ್ 17’ (ಬಿಗ್ ಬಾಸ್ 17) ಶೋನಲ್ಲಿ ಇದ್ದಿದ್ದ ಅವರು ಮಾನಸಿಕವಾಗಿ ಬಹಳ ನೊಂದಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಶನಿವಾರ (ಮಾರ್ಚ್ 7) ರಾತ್ರಿ 10 ಗಂಟೆ ಸುಮಾರಿಗೆ ಕಾರು ಓಡಿಸುತ್ತಾ ಲೈವ್ (UK07 ರೈಡರ್ ಲೈವ್‌ಸ್ಟ್ರೀಮ್) ಬಂದಿದ್ದ ಅನುರಾಗ್ ದೊಭಾಲ್ ಅವರು ‘ಇದು ಕೊನೆಯ ವಿದಾಯ’ ಎಂದು ಹೇಳಿ ಡಿವೈಡರ್‌ಗೆ ಡಿಕ್ಕಿ ಹೊಡೆದರು. ಆಸ್ಪತ್ರೆಗೆ ಸೇರಿಸಲು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕಾರು ಓಡಿಸುವಾಗ ಅನುರಾಗ್ ದೊಭಾಲ್ ಅವರು ಬಹಳ ಎಮೋಷನಲ್ ಆಗಿದ್ದರು. ತಂದೆ ತಾಯಿ ಮತ್ತು ಪತ್ನಿಯಿಂದ ತಮಗೆ ಪ್ರೀತಿ ಸಿಕ್ಕಿಲ್ಲ ಎನ್ನುತ್ತಾ ಅವರು ಕಣ್ಣೀರು ಹಾಕಿದರು. ಇದು ಕೊನೆಯ ವ್ಲಾಗ್ ಎಂದು ಕೂಡ ಅವರು ತಮ್ಮ ಅಭಿಮಾನಿಗಳಿಗೆ ಸ್ಥಾಪಿಸಿದರು. ದಯವಿಟ್ಟು ಕಾರು ನಿಲ್ಲಿಸಿ ಮಾತನಾಡಿ ಎಂದು ಅಭಿಮಾನಿಗಳು ಮನವಿ ಮಾಡಿದರೂ ಕೂಡ ಅನುರಾಗ್ ದೋಭಾಲ್ ನಿಲ್ಲಿಸಲೇ ಇಲ್ಲ.

ಬಹುಕಾಲದ ಗೆಳತಿ ರಿತಿಕಾ ಚೌಹಾಣ್ ಜೊತೆ ಅನುರಾಗ್ ದೊಭಾಲ್ ಮದುವೆ ಆಗಿದ್ದರು. ಆದರೆ ಜಾತಿಯ ಕಾರಣದಿಂದ ಅನುರಾಗ್ ಮನೆಯವರು ಈ ಮದುವೆಯನ್ನು ಒಪ್ಪಲಿಲ್ಲ. ಅವರು ಬಹಳ ನೊಂದಿದ್ದರು. ಹಣ ಮತ್ತು ಆಸ್ತಿಯ ಸಂಪೂರ್ಣ ನಿಯಂತ್ರಣವನ್ನು ಅನುರಾಗ್ ಅವರ ತಂದೆ-ತಾಯಿ ಮತ್ತು ಸಹೋದರರು ಇದ್ದರು. ಈ ಎಲ್ಲ ಕಾರಣಗಳಿಂದಾಗಿ ಅವರು ಖಿನ್ನತೆಗೆ ಜಾರಿದ್ದರು.

ಅನುರಾಗ್ ದೊಭಾಲ್ ಅವರು 150 ಕಿಲೋ ಮೀಟರ್ ವೇಗದಲ್ಲಿ ಕಾರು ಓಡಿಸುತ್ತಿದ್ದರು. ಸಾಯಲೇ ಬೇಕು ಎಂಬುದು ಅವರ ನಿರ್ಧಾರ. ಕಣ್ಣೀರು ಹಾಕುತ್ತಲೇ ಅವರು ತಮ್ಮ ನೋವಿನ ಕಥೆಯನ್ನು ವಿವರಿಸಿದರು. ‘ಮುಂದಿನ ಜನ್ಮದಲ್ಲಿ ನಾನು ಮರಳಿ ಬಂದಾಗ ನನಗೆ ಪ್ರೀತಿ ನೀಡಿ ಅಮ್ಮ.. ನನಗೆ ಪ್ರೀತಿಯ ಅವಶ್ಯಕತೆ ಇತ್ತು’ ಎಂದು ಲೈವ್ ನಲ್ಲಿ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗೆ ಬೆದರಿಕೆ; 10 ಕೋಟಿ ರೂಪಾಯಿಗೆ ಬೇಡಿಕೆ

ಬೇಕಂತಲೇ ಕಾರನ್ನು ಡಿವೈಡರ್‌ಗೆ ಡಿಕ್ಕಿ ಹೊಡೆಸಿದಾಗ 80 ಸಾವಿರ ಜನರು ಲೈವ್ ವಿಡಿಯೋ ವೀಕ್ಷಿಸಿದರು. ದೆಹಲಿ-ಮೀರತ್ ಹೈವೇನಲ್ಲಿ ಅಪಘಾತ ಸಂಭವಿಸಿತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬದವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಯಾವುದೇ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಅನುರಾಗ್ ಮ್ಯಾನೇಜರ್ ರೋಹಿತ್ ಪಾಂಡೆ ಅವರು ನೆಟ್ಟಿಗರಿಗೆ ಮನವಿ ಮಾಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *