Headlines

Priyanka Mohan: ‘ಆ ಕರಾಳ ದಿನಗಳಿಗೆ ವಾಪಸ್ ಹೋಗಲ್ಲ.. ನನ್ನ ವಿರುದ್ಧ ದ್ವೇಷದ ಅಭಿಯಾನ ನಡೆದಿತ್ತು’ ಎಂದ ನಟಿ | Priyanka Mohan Opens Up About Facing Hate Campaign In Her Career Gvd

ಡಾನ್, ಕ್ಯಾಪ್ಟನ್ ಮಿಲ್ಲರ್ ಅಂತಹ ಹಿಟ್ ಸಿನಿಮಾಗಳ ಮೂಲಕ ಸೌತ್ ಇಂಡಿಯಾದಲ್ಲಿ ಫೇಮಸ್ ಆದ ನಟಿ ಪ್ರಿಯಾಂಕಾ ಮೋಹನ್, ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಎದುರಿಸಿದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ.

ಆ ಕೆಟ್ಟ ಅನುಭವ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆ, ಅದರಿಂದ ಬಹಳಷ್ಟು ಕಲಿತಿದ್ದೇನೆ. ಆದರೆ ಆ ಭೂತಕಾಲಕ್ಕೆ ಮತ್ತೆ ಹೋಗಲು ಇಷ್ಟವಿಲ್ಲ ಎಂದು ನಟಿ ಪ್ರಿಯಾಂಕಾ ಮೋಹನ್ ಹೇಳಿಕೊಂಡಿದ್ದಾರೆ.

ಡಾನ್, ಕ್ಯಾಪ್ಟನ್ ಮಿಲ್ಲರ್ ಅಂತಹ ಹಿಟ್ ಸಿನಿಮಾಗಳ ಮೂಲಕ ಸೌತ್ ಇಂಡಿಯಾದಲ್ಲಿ ಫೇಮಸ್ ಆದ ನಟಿ ಪ್ರಿಯಾಂಕಾ ಮೋಹನ್, ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಎದುರಿಸಿದ ಕಹಿ ಅನುಭವದ ಬಗ್ಗೆ ಮಾತನಾಡಿದ್ದಾರೆ. ತನ್ನ ವಿರುದ್ಧ ದ್ವೇಷದ ಅಭಿಯಾನ (Hate Campaign) ನಡೆದಿತ್ತು ಅಂತ ಪ್ರಿಯಾಂಕಾ ಇದೀಗ ಬಹಿರಂಗಪಡಿಸಿದ್ದಾರೆ. ಆ ಕರಾಳ ಭೂತಕಾಲಕ್ಕೆ ಮತ್ತೆ ವಾಪಸ್ ಹೋಗೋಕೆ ನನಗೆ ಇಷ್ಟವಿಲ್ಲ, ಆದರೆ ಆ ಅನುಭವ ಒಂದು ರೀತಿಯಲ್ಲಿ ನನ್ನನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಿದೆ ಅಂತಾನೂ ಪ್ರಿಯಾಂಕಾ ಹೇಳಿದ್ದಾರೆ.

“ನನ್ನ ವಿರುದ್ಧ ದ್ವೇಷದ ಅಭಿಯಾನ ನಡೆದಿತ್ತು. ಇವತ್ತಿನ ದಿನಗಳಲ್ಲಿ ಎಲ್ಲರೂ ಎಲ್ಲರನ್ನೂ ಟ್ರೋಲ್ ಮಾಡ್ತಾರೆ. ಲೆಜೆಂಡರಿ ನಟರು, ನಿರ್ದೇಶಕರನ್ನೂ ಬಿಡದೆ ಟ್ರೋಲ್ ಮಾಡಲಾಗ್ತಿದೆ. ನನ್ನ ವಿಷಯದಲ್ಲೂ ಇಂತಹ ಸಾಕಷ್ಟು ಘಟನೆಗಳು ನಡೆದಿದ್ದವು. ಆದರೆ ಆ ದಿನಗಳಿಗೆ ಮತ್ತೆ ಹೋಗಲು ನಾನು ಬಯಸುವುದಿಲ್ಲ,” ಎಂದು ಪ್ರಿಯಾಂಕಾ ಮೋಹನ್ ಹೇಳಿದ್ದಾರೆ.

ನಾನು ಬಹಳಷ್ಟು ಕಲಿತಿದ್ದೇನೆ

“ಯಾಕಂದ್ರೆ ಆ ಕೆಟ್ಟ ಅನುಭವ ನನ್ನನ್ನು ಒಬ್ಬ ಒಳ್ಳೆ ಮನುಷ್ಯಳಾಗಲು ಸಹಾಯ ಮಾಡಿದೆ, ಅದರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಸಿನಿಮಾ ಇಂಡಸ್ಟ್ರಿ ಅನ್ನೋದು ಅನಿಶ್ಚಿತತೆಗಳಿಂದ ತುಂಬಿದ ಕ್ಷೇತ್ರ. ಇಲ್ಲಿ ಅವರಿಗೇ ಬೇಕಾದರೂ ಏನು ಬೇಕಾದರೂ ಆಗಬಹುದು. ಆದರೆ, ಕಷ್ಟದ ಸಮಯ ಬಂದಾಗಲೆಲ್ಲಾ ಅದು ನಮ್ಮನ್ನು ಇನ್ನಷ್ಟು ಎತ್ತರಕ್ಕೆ ಬೆಳೆಯಲು ಸಹಾಯ ಮಾಡುತ್ತದೆ,” ಎಂದು ಪ್ರಿಯಾಂಕಾ ವಿವರಿಸಿದ್ದಾರೆ. ಸುಧೀರ್ ಶ್ರೀನಿವಾಸನ್ ಅವರೊಂದಿಗಿನ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *