Car accident ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಎಂಡಿ ಸಾವು, BMW ಕಾರು ಪುಡಿ ಪುಡಿ | Breaking Shakoon Group Md Dies In Horrific Bmw Crash Delhi Mumbai Expressway

Car accident ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಎಂಡಿ ಸಾವು, BMW ಕಾರು ಪುಡಿ ಪುಡಿ | Breaking Shakoon Group Md Dies In Horrific Bmw Crash Delhi Mumbai Expressway



Car accident ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಎಂಡಿ ಸಾವು, BMW ಕಾರು ಪುಡಿ ಪುಡಿ | Breaking Shakoon Group Md Dies In Horrific Bmw Crash Delhi Mumbai Expressway

ಭೀಕರ ಅಪಘಾತದಲ್ಲಿ ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಎಂಡಿ ಸಾವು, BMW ಕಾರು ಪುಡಿ ಪುಡಿ, ವೇಗವಾಗಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ. ಮಾಜಿ ಸಿಎಂ ಸೇರಿ ಹಲವರು ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ. 

ಜೈಪುರ (ಮಾ.09) ಖ್ಯಾತ ಉದ್ಯಮಿ, ಶಕೂನ್ ಗ್ರೂಪ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಲ್ಲಬ್ ಮಹೇಶ್ವರಿ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೈಪುರದಿಂದ ಮಥುರಾಗೆ ತಮ್ಮ BMW ಕಾರಿನ ಮೂಲಕ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇನಲ್ಲಿ ಈ ಅಪಘಾತ ಸಂಭವಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಬ್ಯಾರಿಕೇಡ್ ಸೇರಿದೆಂತೆ ತಡೆಗೋಡೆಗೆ ಡಿಕ್ಕಿಯಾಗಿ ಹಲವು ಪಲ್ಟಿಯಾಗಿದೆ. ಕಾರಿನಲ್ಲಿ ಉದ್ಯಮಿ ವಲ್ಲಬ್ ಮಹೇಶ್ವರಿ ಹಾಗೂ ಚಾಲಕ ಇಬ್ಬರೇ ಪ್ರಯಾಣಿಸುತ್ತಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ.

ಚಾಲಕನಿಗೆ ಐಸಿಯುವಿನಲ್ಲಿ ಚಿಕಿತ್ಸೆ

ಅಪಘಾತದಲ್ಲಿ ಉದ್ಯಮಿ ವಲ್ಲಬ್ ಮಹೇಶ್ವರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಚಾಲಕನಿಗೂ ಗಾಯವಾಗಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ವಲ್ಲಬ್ ಮಹೇಶ್ವರಿ ಮೃತಪಟ್ಟರೆ, ಚಾಲಕನಿಗೆ ಗಾಯಗಳಾಗಿದೆ. ಚಾಲಕನ ಪ್ರಾಣಪಾಯದಿಂದ ಪಾರಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜೈಪುರ ಮೂಲದ ಖ್ಯಾತ ಉದ್ಯಮಿ 62 ವರ್ಷದ ವಲ್ಲಬ್ ಮಹೇಶ್ವರಿ ಸಾವಿಗೆ ಹಲವು ಗಣ್ಯರು ಆಘಾತ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘಟನೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಉದ್ಯಮಿ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಕೇಳಿ ನೋವಾಗಿದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದಿದ್ದಾರೆ. ಇದೇ ವೇಳೆ ರಾಜಸ್ಥಾನ ಮುಖ್ಯಮಂತ್ರಿ ಸೇರಿದಂತೆ ಹಲವು ನಾಯಕರು ಸಂಚಾಪ ಸೂಚಿಸಿದ್ದಾರೆ. ರೈನಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧಾರ್ಮಿಕ ಪ್ರವಾಸಲ್ಲಿದ್ದ ಉದ್ಯಮಿ

ವಲ್ಲಬ್ ಮಹೇಶ್ವರಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಂಪ್ರದಾಯ ಚಾಚು ತಪ್ಪದೆ ಪಾಲಿಸುತ್ತಿದ್ದರು. ಹಲವು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವುದು ವಲ್ಲಬ್ ಮಹೇಶ್ವರಿ ಅವರು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಇದೀಗ ಧಾರ್ಮಿಕ ಪ್ರವಾಸದಲ್ಲಿರುವಾಗಲೇ ಈ ದುರ್ಘಟನೆ ಸಂಭವಿಸಿದೆ.

ಶಕೂನ್ ಗ್ರೂಪ್ ಒಟ್ಟು 12 ಕಂಪನಿಗಳನ್ನು ನಿರ್ವಹಣೆ ಮಾಡುತ್ತಿದೆ. ಶಕೂನ್ ಅಡ್ವರ್ಟೈಸಿಂಗ್, ಶಕೂನ್ ಕಮ್ಯೂನಿಕೇಶನ್, ಶಕೂನ್ ರಿಯಲ್ ಎಸ್ಟೇಟ್ ಸೇರಿದಂತೆ ಒಟ್ಟು 12 ಕಂಪನಿಗಳನ್ನು ವಲ್ಲಬ್ ಮಹೇಶ್ವರಿ ನಿರ್ವಹಿಸುತ್ತಿದ್ದರು. ಕಾರ್ಪೋರೇಟ್ ಗವರ್ನೆನ್ಸ್ ಹಾಗೂ ಬ್ಯೂಸಿನೆಸ್ ಮ್ಯಾನೇಜ್ಮೆಂಟ್‌ನಲ್ಲಿ 32 ವರ್ಷಗಳ ಅನುಭವ ವಲ್ಲಬ್ ಮಹೇಶ್ವರಿ ಅವರಿಗಿತ್ತು. ಹೀಗಾಗಿ ಸಂಸ್ಥೆಯನ್ನು ಲಾಭದಾಯಕ ಉದ್ಯಮವಾಗಿ ಕಟ್ಟಿ ಬೆಳೆಸಿದ್ದಾರೆ.



Source link

Leave a Reply

Your email address will not be published. Required fields are marked *