Headlines

‘ಹೊರಗಿನ ಜಗತ್ತಿಗೆ ನಾನು ಹೇಗೇ ಕಂಡರೂ ..’: ವಿಶ್ವಕಪ್ ಗೆಲ್ಲಿಸಿ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಸಂಜು ಸ್ಯಾಮ್ಸನ್ | Sanju Samson Credits Wife Charulatha After Record Breaking T20 World Cup Performance

‘ಹೊರಗಿನ ಜಗತ್ತಿಗೆ ನಾನು ಹೇಗೇ ಕಂಡರೂ ..’: ವಿಶ್ವಕಪ್ ಗೆಲ್ಲಿಸಿ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಸಂಜು ಸ್ಯಾಮ್ಸನ್ | Sanju Samson Credits Wife Charulatha After Record Breaking T20 World Cup Performance



‘ಹೊರಗಿನ ಜಗತ್ತಿಗೆ ನಾನು ಹೇಗೇ ಕಂಡರೂ ..’: ವಿಶ್ವಕಪ್ ಗೆಲ್ಲಿಸಿ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಸಂಜು ಸ್ಯಾಮ್ಸನ್ | Sanju Samson Credits Wife Charulatha After Record Breaking T20 World Cup Performance

ಟಿ20 ವಿಶ್ವಕಪ್ ಗೆದ್ದ ನಂತರ, ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ಯಶಸ್ಸಿನ ಶ್ರೇಯವನ್ನು ಪತ್ನಿ ಚಾರುಲತಾಗೆ ಸಲ್ಲಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ 321 ರನ್ ಗಳಿಸಿ, ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್.

ಅಹಮದಾಬಾದ್: ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ಯಶಸ್ಸಿನ ಹಿಂದಿರುವ ಶಕ್ತಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪತ್ನಿ ಚಾರುಲತಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಭಾವುಕ ಪೋಸ್ಟ್ ಹಾಕಿದ್ದಾರೆ.

ಈ ವಿಶ್ವಕಪ್‌ನಲ್ಲಿ ಸಂಜು ಸ್ಟಾರ್ ಆಟಗಾರನಾಗಿ ಮಿಂಚಿದ್ದರು. ಅವರು ಆಡಿದ ಕೇವಲ 5 ಇನ್ನಿಂಗ್ಸ್‌ಗಳಲ್ಲಿ 80.25ರ ಸರಾಸರಿಯಲ್ಲಿ 321 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 199.37 ಇತ್ತು. ಇದರಲ್ಲಿ ಮೂರು ಅರ್ಧಶತಕ ಮತ್ತು 24 ಸಿಕ್ಸರ್‌ಗಳು ಸೇರಿವೆ. ಈ ಮೂಲಕ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಸಂಜು ಪಾತ್ರರಾಗಿದ್ದಾರೆ.

ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಸಂಜು ಸ್ಯಾಮ್ಸನ್

ಈ ಯಶಸ್ಸಿನ ಬೆನ್ನಲ್ಲೇ ಸಂಜು ಸ್ಯಾಮ್ಸನ್ ತಮ್ಮ ಪತ್ನಿಗಾಗಿ ಸೋಶಿಯಲ್ ಮೀಡಿಯಾದಲ್ಲಿ, ‘ನಿನ್ನನ್ನು ಭೇಟಿಯಾದ ದಿನದಿಂದ ನನ್ನ ಜೀವನದ ಈ ಕ್ಷಣದವರೆಗೂ… ನನ್ನ ಜೊತೆ ನಿಂತಿದ್ದಕ್ಕೆ, ನಾನು ಯಾರೆಂದು ಅರ್ಥಮಾಡಿಕೊಂಡು ಪ್ರೀತಿಸಿದ್ದಕ್ಕೆ, ಹೊರಗಿನ ಜಗತ್ತಿಗೆ ನಾನು ಹೇಗೇ ಕಂಡರೂ ನನ್ನೊಂದಿಗೆ ಸದಾ ಪ್ರಾಮಾಣಿಕವಾಗಿದ್ದಕ್ಕೆ ನಿನಗೆ ತುಂಬಾ ಧನ್ಯವಾದಗಳು. ನನ್ನ ಒಳ್ಳೆಯ ಮತ್ತು ಕೆಟ್ಟ ಎರಡೂ ಮುಖಗಳನ್ನು ನೋಡಿದರೂ ನೀನು ನನ್ನ ಜೊತೆ ಗಟ್ಟಿಯಾಗಿ ನಿಂತೆ. ಕ್ರಿಕೆಟ್ ನನ್ನ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನು ಅರ್ಥಮಾಡಿಕೊಂಡು, ಅದನ್ನು ನಿನ್ನದಾಗಿಯೂ ಮಾಡಿಕೊಂಡಿದ್ದಕ್ಕೆ ಥ್ಯಾಂಕ್ಸ್. ಈ ಕ್ಷಣಕ್ಕಾಗಿ ನಾನು ಎಷ್ಟು ಹಂಬಲಿಸಿ, ಕನಸು ಕಂಡಿದ್ದೆನೋ, ಅಷ್ಟೇ ತೀವ್ರತೆಯಿಂದ ನೀನೂ ಆಸೆಪಟ್ಟಿದ್ದೆ. ನನ್ನ ಪ್ರೀತಿಯ ಹೆಂಡತಿಗೆ ತುಂಬಾ ಧನ್ಯವಾದಗಳು’ ಎಂದು ಸಂಜು ಬರೆದುಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸಂಜು 89 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಸೂಪರ್ 8 ಹಂತದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಬಾರಿಸಿದ್ದರು. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 42 ಎಸೆತಗಳಲ್ಲಿ 89 ರನ್ ಚಚ್ಚಿದ್ದರು. ಇಂತಹ ನಿರ್ಣಾಯಕ ಪಂದ್ಯಗಳಲ್ಲಿನ ಪ್ರದರ್ಶನವೇ ಸಂಜು ಅವರನ್ನು ಟೂರ್ನಿಯ ಶ್ರೇಷ್ಠ ಆಟಗಾರರಲ್ಲಿ ಒಬ್ಬರನ್ನಾಗಿಸಿತು. ಅಷ್ಟೇ ಅಲ್ಲ, ಒಂದೇ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರ ಎಂಬ ಹೊಸ ದಾಖಲೆಯನ್ನೂ ಸಂಜು ತಮ್ಮ ಹೆಸರಿಗೆ ಬರೆದಿದ್ದಾರೆ.

ಈ ವಿಶ್ವಕಪ್‌ನಲ್ಲಿ ಕೇವಲ 5 ಪಂದ್ಯಗಳನ್ನಾಡಿದ ಸಂಜು ಬರೋಬ್ಬರಿ 24 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇದುವರೆಗೂ ಯಾವುದೇ ಆಟಗಾರ ಒಂದೇ ವಿಶ್ವಕಪ್‌ನಲ್ಲಿ ಇಷ್ಟು ಸಿಕ್ಸರ್‌ಗಳನ್ನು ಬಾರಿಸಿಲ್ಲ. ನ್ಯೂಜಿಲೆಂಡ್‌ನ ಫಿನ್ ಅಲೆನ್ 20 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಶಿಮ್ರಾನ್ ಹೆಟ್ಮೆಯರ್ (19), ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ (18) ಮತ್ತು ಇಶಾನ್ ಕಿಶನ್ (18) ನಂತರದ ಸ್ಥಾನಗಳಲ್ಲಿದ್ದಾರೆ.

ವಿರಾಟ್ ಕೊಹ್ಲಿ ಅಪರೂಪದ ದಾಖಲೆ ಮುರಿದ ಸಂಜು ಸ್ಯಾಮ್ಸನ್:

ಟಿ20 ವಿಶ್ವಕಪ್ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ಭಾರತೀಯ ಆಟಗಾರರ ಪೈಕಿ ಸಂಜು ಸ್ಯಾಮ್ಸನ್ ಮೊದಲ ಸ್ಥಾನಕ್ಕೇರಿದ್ದಾರೆ. ಸಂಜು ಸ್ಯಾಮ್ಸನ್ ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಐದು ಇನ್ನಿಂಗ್ಸ್‌ಗಳಲ್ಲಿ321 ರನ್ ಕಲೆ ಹಾಕಿದ್ದಾರೆ. ಇನ್ನು 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 319 ರನ್ ಗಳಿಸಿದ್ದರು. ಆ ದಾಖಲೆಯನ್ನು ಸಂಜು ಬ್ರೇಕ್ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *