Headlines

ಅರ್ಚಕ ಮಾಂಸ ತಿನ್ನುವ ಫೋಟೋ ವೈರಲ್​: ದೇವಾಲಯದಿಂದ ಹೊರ ಎಳೆದು ಥಳಿಸಿದ ಗುಂಪು

ಅರ್ಚಕ ಮಾಂಸ ತಿನ್ನುವ ಫೋಟೋ ವೈರಲ್​: ದೇವಾಲಯದಿಂದ ಹೊರ ಎಳೆದು ಥಳಿಸಿದ ಗುಂಪು


ಅರ್ಚಕ ಮಾಂಸ ತಿನ್ನುವ ಫೋಟೋ ವೈರಲ್: ದೇವಾಲಯದಿಂದ ಹೊರ ಎಳೆದು ಥಳಿಸಿದ ಗುಂಪು

ಕಾನ್ಪುರ, ಮಾ.9: ಉತ್ತರ ಪ್ರದೇಶದ ಕಾನ್ಪುರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೇವಾಲಯದ ಅರ್ಚಕರೊಬ್ಬರನ್ನು ಜನರ ಗುಂಪು ಮನಬಂದಂತೆ ಥಳಿಸಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಹೋಟೆಲ್‌ನಲ್ಲಿ ಅರ್ಚಕರು ಮಾಂಸಾಹಾರ ಸೇವಿಸುತ್ತಿದ್ದಾರೆ ಎನ್ನಲಾದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಹಿಂಸಾಚಾರ ನಡೆದಿದೆ.

ಕಾನ್ಪುರದ ಭೂತೇಶ್ವರದ ಅರ್ಚಕ ಪ್ರಶಾಂತ್ ಗಿರಿ ಮೇಲೆ ಸುಮಾರು 50 ದೇವಾಲಯದಿಂದ 60 ಜನರ ಗುಂಪೊಂದು ದಾಳಿ ನಡೆಸಿದೆ. ಅರ್ಚಕರನ್ನು ಅವರ ಕೊಠಡಿಯಿಂದ ಹೊರಗೆ ಎಳೆದುಕೊಂಡು ಬಂದು ರಸ್ತೆಯಲ್ಲಿ ಧರಧರನೆ ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಈ ವೇಳೆ ದೇವಾಲಯದಲ್ಲಿದ್ದ ಕೆಲವು ಮಹಿಳೆಯರು ಅರ್ಚಕರನ್ನು ಕಾಪಾಡಲು ಮುಂದಾದರು. ಅರ್ಚಕರ ಸುತ್ತಲೂ ಕುಳಿತು ಗುರಾಣಿಯಂತೆ ರಕ್ಷಣೆ ನೀಡಲು ಪ್ರಯತ್ನಿಸಿದರು. ಆದರೆ, ಉದ್ರಿಕ್ತ ಗುಂಪು ಅರ್ಚಕರನ್ನು ಉಳಿಸಲು ಬಂದ ಮಹಿಳೆಯರ ಮೇಲೆ ಕೂಡ ಹಲ್ಲೆ ನಡೆಸಿ, ಅವರನ್ನು ದೂಡಿ ಹಾಕಿ ಅರ್ಚಕ ಹೊಡೆದಿದ್ದಾರೆ.

ಇದನ್ನೂ ಓದಿ: ಶಾಲೆಯಲ್ಲಿ ಅಡುಗೆ ಮಾಡುವ ಮಹಿಳಾ ಕುಕ್ ಜೊತೆ ಹೆಡ್ ಮಾಸ್ಟರ್ ಕುಚ್ ಕುಚ್: ಗ್ರಾಮಸ್ಥರಿಂದ ಬಿತ್ತು ಗೂಸ

ಈ ಬಗ್ಗೆ ದೂರು ನೀಡಿದ್ದು, “ತನ್ನ ದೇವಾಲಯದಿಂದ ಹೊರಹಾಕಲಾಗಿದೆ. ಪೊಲೀಸರು ವೈರಲ್ ವಿಡಿಯೋ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *