Rashmika Mandanna Wins Best Actress for The Girlfriend ‘ಇದು ನಂದೇ ಕಥೆ..’ ಎಂದಿದ್ದ ರಶ್ಮಿಕಾ ಮಂದಣ್ಣ..! | Rashmika Mandanna Wins Best Actress At Gaddar Film Awards After Marriage To Vijay Deverakonda Kvn

Rashmika Mandanna Wins Best Actress for The Girlfriend ‘ಇದು ನಂದೇ ಕಥೆ..’ ಎಂದಿದ್ದ ರಶ್ಮಿಕಾ ಮಂದಣ್ಣ..! | Rashmika Mandanna Wins Best Actress At Gaddar Film Awards After Marriage To Vijay Deverakonda Kvn


ನವವಧು ರಶ್ಮಿಕಾ ಮಂದಣ್ಣ ಅವರಿಗೆ ‘ದಿ ಗರ್ಲ್ ಫ್ರೆಂಡ್’ ಚಿತ್ರದ ಮನೋಜ್ಞ ನಟನೆಗಾಗಿ ತೆಲಂಗಾಣ ಸರ್ಕಾರದ ಗದ್ದರ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ವಿಜಯ್ ದೇವರಕೊಂಡ ಜೊತೆಗಿನ ಮದುವೆಯ ನಂತರ ಬಂದ ಈ ಗೌರವ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

ಮೊನ್ನೆ ತಾನೇ ಮದುವೆಯಾಗಿ ಹೊಸ ಬದುಕು ಆರಂಭಿಸಿರೋ ನವವಧು ರಶ್ಮಿಕಾಗೆ ಮತ್ತೊಂದು ಗಿಫ್ಟ್ ಸಿಕ್ಕಿದೆ. ತೆಲಂಗಾಣ ಸರ್ಕಾರ ನೀಡೋ ಗದ್ದರ್ ಫಿಲ್ಮ್ ಅವಾರ್ಡ್ಸ್ ಪ್ರಕಟಗೊಂಡಿದ್ದು, ರಶ್ಮಿಕಾಗೆ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ದೊರೆತಿದೆ. ಅದ್ರಲ್ಲೂ ದಿ ಗರ್ಲ್ ಫ್ರೆಂಡ್ ಸಿನಿಮಾದ ನಟನೆಗೆ ರಶ್ಮಿಕಾಗೆ ಅವಾರ್ಡ್ ಸಿಕ್ಕಿದ್ದು, ಈ ಚಿತ್ರಕ್ಕೂ ರಶ್ ಬದುಕಿಗೂ ವಿಶೇಷ ನಂಟಿದೆ.

ನವವಧುವಿಗೆ ಡಬಲ್ ಗಿಫ್ಟ್, ಅತ್ಯುತ್ತಮ ನಟಿ ಪ್ರಶಸ್ತಿ!

ಯೆಸ್ ಮೊನ್ನೆ ತಾನೇ ಮನಮೆಚ್ಚಿದ ಹುಡುಗ ವಿಜಯ್ ದೇವರಕೊಂಡನ ವರಿಸಿ ಹೊಸ ಬಾಳಿಗೆ ಕಾಲಿಟ್ಟಿರೋ ರಶ್ಮಿಕಾ ಲೈಫ್​ನಲ್ಲಿ ಮತ್ತೊಂದು ಸಂಭ್ರಮ ಬಂದಿದೆ. ತೆಲಂಗಾಣ ರಾಜ್ಯ ಸರ್ಕಾರ ನೀಡೋ ಗದ್ದರ್ ಅವಾರ್ಡ್ಸ್ ಪ್ರಕಟಗೊಂಡಿದ್ದು, ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದಾರೆ ರಶ್ಮಿಕಾ.

‘ದಿ ಗರ್ಲ್‌ ಫ್ರೆಂಡ್’ ನಟನೆಗೆ ಬೆಸ್ಟ್ ಆಕ್ಟ್ರೆಸ್ ಅವಾರ್ಡ್!

ಯೆಸ್ ಕಳೆದ ವರ್ಷ ನವೆಂಬರ್ ನಲ್ಲಿ ರಿಲೀಸ್ ಆಗಿದ್ದ ದಿ ಗರ್ಲ್ ಫ್ರೆಂಡ್ ಸಿನಿಮಾದ ನಟನೆಗೆ ರಶ್ಮಿಕಾಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ವಿಶೇಷ ಅಂದ್ರೆ ಇದು ನಾಯಕಿ ಪ್ರಧಾನ ಚಿತ್ರ. ಪ್ರಶಂಸೆ ಪಡೆಯೋದ್ರ ಜೊತೆಗೆ ಇದು ಬಾಕ್ಸಾಫೀಸ್​ನಲ್ಲೂ ಕಮಾಲ್ ಮಾಡಿತ್ತು. ಮತ್ತೀಗ ರಶ್ಮಿಕಾಗೆ ಬೆಸ್ಟ್ ಆಕ್ಟ್ರೆಸ್ ಸ್ಟೇಟ್ ಅವಾರ್ಡ್ ಕೂಡ ದೊರಕಿಸಿ ಕೊಟ್ಟಿದೆ.

ಮುದ್ದಿನ ಮಡದಿಗೆ ಅಭಿನಂದಿಸಿದ ದೇವರಕೊಂಡ!

ಹೌದು ರಶ್ಮಿಕಾಗೆ ಸ್ಟೇಟ್ ಅವಾರ್ಡ್ ಬಂದಿದ್ದಕ್ಕೆ ವಿಜಯ್ ದೇವರಕೊಮಡ ಖುಷ್ ಆಗಿ ಪೋಸ್ಟ್ ಮಾಡಿದ್ದಾರೆ. ಮುದ್ದಿನ ಮಡದಿಗೆ ಅವಾರ್ಡ್ ಬಂದಿದ್ದಕ್ಕೆ ಅಭಿನಂದಿಸಿ ಇದು ಸಂತಸ ಮತ್ತು ಹೆಮ್ಮೆಯ ಕ್ಷಣ ಅಂದಿದ್ದಾರೆ.

‘ಇದು ನಂದೇ ಕಥೆ..’ ಎಂದಿದ್ದ ರಶ್ಮಿಕಾ ಮಂದಣ್ಣ..!

ದಿ ಗರ್ಲ್ ಫ್ರೆಂಡ್ ಸಿನಿಮಾ ನೋಡಿದವರಿಗೆ ಅದರ ಕಥೆ ಗೊತ್ತಿರುತ್ತೆ. ಬಾಯ್‌ಫ್ರೆಂಡ್ ತನ್ನ ಗೆಳತಿಯನ್ನ ಅತಿಯಾದ ಪೊಸೆಸಿವ್​ನೆಸ್​ನೊಂದಿಗೆ ಹಿಂಸಿಸೋ ಕಥೆ ಅದು. ರಶ್ಮಿಕಾ ಈ ಸಿನಿಮಾ ರಿಲೀಸ್ ಆದ ವೇಳೆ ನಾನು ಕೂಡ ಇಂಥಾ ಹಿಂಸೆ ಅನುಭವಿಸಿದ್ದೆ ಅನ್ನೋ ಮಾತು ಹೇಳಿದ್ರು. ಅಲ್ಲಿಗೆ ತಾವು ರಕ್ಷಿತ್ ಶೆಟ್ಟಿ ಸಂಬಂಧ ಮುರಿದುಕೊಳ್ಳೋದಕ್ಕೆ ರಕ್ಷಿತ್ ವರ್ತನೆಯೇ ಕಾರಣ ಅನ್ನೋದನ್ನ ಪರೋಕ್ಷವಾಗಿ ಹೇಳಿದ್ರು.

ಇನ್ನೂ ವಿಜಯ್ ದೇವರಕೊಂಡ ಜೊತೆ ಮದುವೆ ಆದ ಮೇಲೆ , ವಿಜಯ್ ತನ್ನ ಬೆಳವಣಿಗೆಗೆ ದೊಡ್ಡ ಕಾರಣ ಆದ್ರು ಅಂತ ಹೇಳಿಕೊಂಡಿದ್ರು. ದಿ ಗರ್ಲ್ ಫ್ರೆಂಡ್ ಸಿನಿಮಾದ ಪಾತ್ರ ಬಹುತೇಕ ರಶ್ಮಿಕಾ ಬದುಕಿನ ಪಾತ್ರವೂ ಹೌದು. ಸೋ ತನ್ನದೇ ಕಥೆಯಲ್ಲಿ ಮನೋಜ್ಞವಾಗಿ ನಟಿಸಿದ್ದ ರಶ್ಮಿಕಾಗೆ ಈಗ ಸ್ಟೇಟ್ ಅವಾರ್ಡ್ ಬೇರೆ ಬಂದಿದೆ.

ಇನ್ನೂ ಈ ನಡುವೆ ರಕ್ಷಿತ್ ಶೆಟ್ಟಿ ತಮ್ಮ ಸೋಷಿಯಲ್ ಮಿಡಿಯಾ ಕವರ್ ಪೇಜ್ ಬದಲಿಸಿ ನಾಯಿ ಜೊತೆಗಿರೋ ಚಾರ್ಲಿ ಸಿನಿಮಾ ಪೋಸ್ಟರ್ ಹಂಚಿಕೊಂಡಿದ್ದರ ಬಗ್ಗೆ ಕೂಡ ಸಖತ್ ಚರ್ಚೆಯಾಗ್ತಾ ಇದೆ.

ಎನಿ ವೇ ಆಗಿದ್ದೆಲ್ಲಾ ಆಗಿ ಹೋಯಿತು. ಈಗೇನಿದ್ರೂ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಹೊಸ ಲೈಫ್ ಶುರುಮಾಡಿದ್ದಾರೆ. ಈ ನಡುವೆ ತೆಲಂಗಾಣದ ಸ್ಟೇಟ್ ಅವಾರ್ಡ್ ಬೇರೆ ಬಂದಿರೋದು ನವವಧುವಿನ ಸಂಭ್ರಮ ಡಬಲ್ ಮಾಡಿರೋದು ಸುಳ್ಳಲ್ಲ..!

ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.



Source link

Leave a Reply

Your email address will not be published. Required fields are marked *