ಹಾನಿಗೊಂಡ ಬ್ಯಾಗ್‌, ನಕಾರ ಮಾಡಿದ ಏರ್ ಇಂಡಿಯಾಗೆ ಪಾಠ ಕಲಿಸಿದ ಬೆಂಗಳೂರು ಯುವಕ! ಇದು ಪ್ರತಿಯೊಬ್ಬರು ತಿಳಿದಿರಬೇಕು | Bengaluru Man Wins Compensation After Damaged Luggage On Air India Flight Gdp

ಹಾನಿಗೊಂಡ ಬ್ಯಾಗ್‌, ನಕಾರ ಮಾಡಿದ ಏರ್ ಇಂಡಿಯಾಗೆ ಪಾಠ ಕಲಿಸಿದ ಬೆಂಗಳೂರು ಯುವಕ! ಇದು ಪ್ರತಿಯೊಬ್ಬರು ತಿಳಿದಿರಬೇಕು | Bengaluru Man Wins Compensation After Damaged Luggage On Air India Flight Gdp



ಹಾನಿಗೊಂಡ ಬ್ಯಾಗ್‌, ನಕಾರ ಮಾಡಿದ ಏರ್ ಇಂಡಿಯಾಗೆ ಪಾಠ ಕಲಿಸಿದ ಬೆಂಗಳೂರು ಯುವಕ! ಇದು ಪ್ರತಿಯೊಬ್ಬರು ತಿಳಿದಿರಬೇಕು | Bengaluru Man Wins Compensation After Damaged Luggage On Air India Flight Gdp

ಬೆಂಗಳೂರಿನ ಯುವಕನೊಬ್ಬನ ಟ್ರಾಲಿ ಬ್ಯಾಗ್ ಏರ್ ಇಂಡಿಯಾ ವಿಮಾನ ಪ್ರಯಾಣದಲ್ಲಿ ಹಾನಿಗೊಂಡಿತ್ತು. ವಿಮಾನಯಾನ ಸಂಸ್ಥೆ ದೂರು ಸ್ವೀಕರಿಸಲು ನಿರಾಕರಿಸಿದಾಗ, ಆತ ಗ್ರಾಹಕ ಆಯೋಗದ ಮೊರೆ ಹೋಗಿ ನ್ಯಾಯಕ್ಕಾಗಿ ಹೋರಾಟ ನಡೆಸಿದ. ಅಂತಿಮವಾಗಿ, ಆಯೋಗವು ಯುವಕನ ಪರವಾಗಿ ತೀರ್ಪು ನೀಡಿ, ಏರ್ ಇಂಡಿಯಾಗೆ ಪರಿಹಾರ ಪಾವತಿಸಲು ಆದೇಶಿಸಿದೆ.

ಬೆಂಗಳೂರು: ವಿಮಾನ ಪ್ರಯಾಣದ ವೇಳೆ ನಿಮ್ಮ ಸಾಮಾನು ಹಾನಿಗೊಂಡಿದ್ದರೂ, ಅದನ್ನು ಯಾರೂ ಗಮನಿಸದಂತೆ ಬಿಡಬೇಕಾಗಿದೆಯೇ? ಇಂತಹ ಅನುಭವ ಹಲವಾರು ಪ್ರಯಾಣಿಕರಿಗೆ ಎದುರಾಗುತ್ತದೆ. ಆದರೆ ಬೆಂಗಳೂರಿನ 28 ವರ್ಷದ ಯುವಕನೊಬ್ಬ ಈ ಸಮಸ್ಯೆಯನ್ನು ಸುಮ್ಮನೆ ಬಿಡದೆ ನ್ಯಾಯಕ್ಕಾಗಿ ಹೋರಾಟ ನಡೆಸಿ, ಕೊನೆಗೆ ಗ್ರಾಹಕ ಆಯೋಗದಿಂದ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ.

ಹಳೆ ವಿಮಾನ ನಿಲ್ದಾಣ ರಸ್ತೆಯ ನಿವಾಸಿಯಾಗಿರುವ ಹಾಗೂ Air India ವಿಮಾನಯಾನ ಸಂಸ್ಥೆಯಲ್ಲಿ ಆಗಾಗ ಪ್ರಯಾಣಿಸುವ ಸದಸ್ಯನಾಗಿರುವ ಸೌರಭ್ ರಪೇರಿಯಾ, 2024ರ ಸೆಪ್ಟೆಂಬರ್ 8ರಂದು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಿದ್ದರು. ಅವರ ಚೆಕ್-ಇನ್ ಟ್ರಾಲಿ ಬ್ಯಾಗ್‌ಗೆ ‘ಫ್ರಾಜೈಲ್’ ಟ್ಯಾಗ್ ಅಳವಡಿಸಲಾಗಿತ್ತು. ಆದರೆ ಅವರು ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬ್ಯಾಗ್ ಪಡೆಯಲು ಹೋದಾಗ, ಬ್ಯಾಗ್‌ ನ ಜಿಪ್ ಡ್ಯಾಮೇಜ್ ಕಂಡುಬಂದಿತ್ತು.

ವಿಮಾನ ನಿಲ್ದಾಣದಲ್ಲೇ ದೂರು ದಾಖಲಿಸಲು ಯತ್ನ

ಬ್ಯಾಗ್ ಹಾನಿಗೊಂಡಿರುವುದನ್ನು ಗಮನಿಸಿದ ಸೌರಭ್ ತಕ್ಷಣವೇ ವಿಮಾನಯಾನ ಸಂಸ್ಥೆಯ ಬ್ಯಾಗೇಜ್ ಸೇವಾ ಕೌಂಟರ್‌ಗೆ ತೆರಳಿ ದೂರು ದಾಖಲಿಸಲು ಪ್ರಯತ್ನಿಸಿದರು. ಆದರೆ ಅಲ್ಲಿ ಇದ್ದ ಸಿಬ್ಬಂದಿ ಅವರ ದೂರುವನ್ನು ಸ್ವೀಕರಿಸಲು ಅಥವಾ ‘ಪ್ರಾಪರ್ಟಿ ಇರ್ರೆಗ್ಯುಲಾರಿಟಿ ರಿಪೋರ್ಟ್’ (PIR) ನೀಡಲು ನಿರಾಕರಿಸಿದರು. ಬದಲಾಗಿ, ಸಮಸ್ಯೆಯನ್ನು ಇಮೇಲ್ ಮೂಲಕ ತಿಳಿಸಲು ಸಲಹೆ ನೀಡಿದರು.

ಆ ದಿನದ ನಂತರ ಸೌರಭ್ ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣವಾದ X ನಲ್ಲಿ ಪೋಸ್ಟ್ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ಅವರ ಟಿಕೆಟ್ ವಿವರಗಳು, ಬ್ಯಾಗೇಜ್ ಟ್ಯಾಗ್ ಸಂಖ್ಯೆ ಹಾಗೂ ಹಾನಿ ದೂರು ಸಂಖ್ಯೆಯನ್ನು ಕೇಳಿತು. ಆದರೆ ವಿಮಾನ ನಿಲ್ದಾಣದಲ್ಲೇ ದೂರು ದಾಖಲಿಸಲು ಅವಕಾಶ ನೀಡದ ಕಾರಣ, ಅವರ ಬಳಿ ಯಾವುದೇ ದೂರು ಸಂಖ್ಯೆ ಇರಲಿಲ್ಲ. ಆದರೂ ಲಭ್ಯವಿದ್ದ ಮಾಹಿತಿಯನ್ನು ಅವರು ಹಂಚಿಕೊಂಡರು.

ಕಡಿಮೆ ಪರಿಹಾರ ನೀಡಲು ಮುಂದಾದ ಏರ್ ಇಂಡಿಯಾ

ಸೆಪ್ಟೆಂಬರ್ 9, 2024ರಂದು ಸೌರಭ್ ಅಧಿಕೃತವಾಗಿ ಏರ್ ಇಂಡಿಯಾಗೆ ಇಮೇಲ್ ಮೂಲಕ ಪರಿಹಾರವನ್ನು ಕೋರಿದರು. ಎರಡು ದಿನಗಳ ನಂತರ ಏರ್ ಇಂಡಿಯಾ ಮೊದಲಿಗೆ 500 ರೂ. ಪರಿಹಾರ ನೀಡಲು ಮುಂದಾಯಿತು. ಆದರೆ ಅದು ಅಸಮರ್ಪಕವೆಂದು ಸೌರಭ್ ತಿಳಿಸಿದ ಬಳಿಕ ಆ ಮೊತ್ತವನ್ನು 1,000 ರೂ.ಗಳಿಗೆ ಹೆಚ್ಚಿಸಲಾಯಿತು. ಆದರೆ ಸೌರಭ್ ತಮ್ಮ ಹಾನಿಗೊಂಡ ಟ್ರಾಲಿ ಬ್ಯಾಗ್‌ಗೆ ಸಮಾನ ಗುಣಮಟ್ಟದ ಹೊಸ ಬ್ಯಾಗ್ ನೀಡಬೇಕು ಅಥವಾ ಅದರ ಮೌಲ್ಯವಾದ 13,425 ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ವಿಮಾನಯಾನ ಸಂಸ್ಥೆಯ ವಾದ

ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ, ಪ್ರಯಾಣಿಕರು ಸಾಮಾನು ವಿತರಣಾ ಪ್ರದೇಶವನ್ನು ಹಾನಿ ವರದಿ ಮಾಡದೇ ಬಿಟ್ಟರೆ, ಅವರು ತಮ್ಮ ಬ್ಯಾಗ್ ಅನ್ನು ಸರಿಯಾದ ಸ್ಥಿತಿಯಲ್ಲಿ ಸ್ವೀಕರಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿತು. ಆದರೆ ಈ ವಾದವನ್ನು ಸೌರಭ್ ತಿರಸ್ಕರಿಸಿದರು. ಅವರು ವಿಮಾನ ನಿಲ್ದಾಣದಲ್ಲಿಯೇ ದೂರು ದಾಖಲಿಸಲು ಪ್ರಯತ್ನಿಸಿದ್ದರೂ, ಸಿಬ್ಬಂದಿಯೇ ಅದನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಆ ನಿಯಮ ಅನ್ವಯಿಸುವುದಿಲ್ಲ ಎಂದು ಅವರು ವಾದಿಸಿದರು.

ಕಾನೂನು ನೋಟಿಸ್ ಬಳಿಕವೂ ಉತ್ತರ ಇಲ್ಲ

ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಸೌರಭ್ ಹಲವು ಬಾರಿ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿದರು. ಆದರೆ ಯಾವುದೇ ಸ್ಪಷ್ಟ ಪರಿಹಾರ ದೊರಕದ ಕಾರಣ, 2024ರ ಸೆಪ್ಟೆಂಬರ್ 23ರಂದು ಅವರು ಏರ್ ಇಂಡಿಯಾಗೆ ಕಾನೂನು ನೋಟಿಸ್ ಕಳುಹಿಸಿದರು. ಆದರೂ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಗ್ರಾಹಕ ಆಯೋಗದ ಮೊರೆ

ಕೊನೆಗೆ 2024ರ ಡಿಸೆಂಬರ್ 10ರಂದು ಸೌರಭ್ ಗ್ರಾಹಕ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದರು. ಈ ಪ್ರಕರಣದಲ್ಲಿ ಏರ್ ಇಂಡಿಯಾ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿ, ಸೇವೆಯಲ್ಲಿ ಯಾವುದೇ ಕೊರತೆ ಇಲ್ಲ ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಅನುಸರಿಸಿಲ್ಲ ಎಂದು ವಾದಿಸಿತು. ಜೊತೆಗೆ ಕೇಸ್‌ ವಜಾಗೊಳಿಸಬೇಕೆಂದು ಕೂಡ ಮನವಿ ಮಾಡಿತು.

ಆಯೋಗದ ಮಹತ್ವದ ತೀರ್ಪು

ಎರಡೂ ಕಡೆಯವರ ವಾದಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿದ ನಂತರ ಆಯೋಗವು ಮಹತ್ವದ ತೀರ್ಪು ನೀಡಿತು. ವಿಮಾನಯಾನ ಸಂಸ್ಥೆಯು ಪರಿಹಾರ ನೀಡಲು ಮುಂದಾಗಿರುವುದೇ ಸಾಮಾನುಗಳು ತಮ್ಮ ವಶದಲ್ಲಿದ್ದಾಗಲೇ ಹಾನಿಗೊಂಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುವಂತಾಗಿದೆ ಎಂದು ಆಯೋಗ ಹೇಳಿತು. ಹೀಗಾಗಿ ನಂತರ ಹೊಣೆಗಾರಿಕೆಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.

ಇದಲ್ಲದೆ, ಪ್ರಯಾಣಿಕರು ಹಾನಿಯನ್ನು ವರದಿ ಮಾಡದೇ ಸಾಮಾನು ವಿತರಣಾ ಪ್ರದೇಶವನ್ನು ಬಿಟ್ಟರೆ ಮಾತ್ರ ಆ ನಿಯಮ ಅನ್ವಯಿಸುತ್ತದೆ. ಈ ಪ್ರಕರಣದಲ್ಲಿ ದೂರುದಾರರು ವಿಮಾನ ನಿಲ್ದಾಣದಲ್ಲಿಯೇ ಹಾನಿಯನ್ನು ವರದಿ ಮಾಡಲು ಯತ್ನಿಸಿದ್ದಾರೆ. ಆದರೆ ವಿಮಾನಯಾನ ಸಂಸ್ಥೆಯ ಸಿಬ್ಬಂದಿಯೇ ಅದನ್ನು ತಡೆಯಿರುವುದರಿಂದ ಆ ನಿಯಮ ಅನ್ವಯಿಸುವುದಿಲ್ಲ ಎಂದು ಆಯೋಗ ತಿಳಿಸಿತು.

ಪರಿಹಾರ ನೀಡಲು ಆದೇಶ

ಇತ್ಯರ್ಥಗೊಂಡ ಕಾನೂನು ಪ್ರಕಾರ, ಪರಿಶೀಲಿತ ಸಾಮಾನುಗಳು ಹಾನಿಗೊಂಡಿರುವುದು ಸಾಬೀತಾದ ನಂತರ, ನಿರ್ಲಕ್ಷ್ಯವಾಗಿಲ್ಲವೆಂದು ತೋರಿಸುವ ಹೊಣೆಗಾರಿಕೆ ವಿಮಾನಯಾನ ಸಂಸ್ಥೆಯ ಮೇಲಿದೆ ಎಂದು ಆಯೋಗ ಗಮನಸೆಳೆದಿತು. ಆದರೆ ಏರ್ ಇಂಡಿಯಾ ಅದಕ್ಕೆ ಸಂಬಂಧಿಸಿದ ಯಾವುದೇ ಪುರಾವೆ ನೀಡಲಿಲ್ಲ. ಹೀಗಾಗಿ 2026ರ ಫೆಬ್ರವರಿ 17ರಂದು ಆಯೋಗವು ಏರ್ ಇಂಡಿಯಾಗೆ ಸೌರಭ್ ರಪೇರಿಯಾ ಅವರಿಗೆ 7,000 ರೂ. ಪರಿಹಾರ ಮತ್ತು 10,000 ರೂ.ಗಳನ್ನು ಮೊಕದ್ದಮೆ ವೆಚ್ಚವಾಗಿ ಪಾವತಿಸಲು ನಿರ್ದೇಶಿಸಿತು.



Source link

Leave a Reply

Your email address will not be published. Required fields are marked *