Headlines

ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ರಫ್ತಿನ ದರದಲ್ಲಿ ಗಣನೀಯ ಏರಿಕೆ

ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ರಫ್ತಿನ ದರದಲ್ಲಿ ಗಣನೀಯ ಏರಿಕೆ

ಬ್ಯಾಡಗಿ ಮೆಣಸಿನ ರಫ್ತಿಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ: ರಫ್ತಿನ ದರದಲ್ಲಿ ಗಣನೀಯ ಏರಿಕೆ

ಹಾವೇರಿ, ಮಾರ್ಚ್ 09: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿ ದಾಳಿ ಹಿನ್ನೆಲೆ ಹಾವೇರಿಯ ಪ್ರಸಿದ್ಧ ಬ್ಯಾಡಗಿ ಮೆಣಸಿನ ಮಾರುಕಟ್ಟೆಗೂ ಯುದ್ಧದ ಬಿಸಿ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ಆಗುತ್ತಿರುವ ಬ್ಯಾಡಗಿ ಮೆಣಸು ರಫ್ತಿನ ಮೇಲೆ ಪರಿಣಾಮ ಉಂಟಾಗಿದೆ. ಮಸಾಲೆ ಪದಾರ್ಥಗಳು ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಬಳಕೆಯಾಗುವ ಈ ಮೆಣಸು ಮಲೇಶಿಯಾ, ಸಿಂಗಾಪುರ, ಇಂಡೋನೇಷಿಯಾ, ಬಾಲಿ, ಥೈಲ್ಯಾಂಡ್, ಇಸ್ರೇಲ್, ಇರಾನ್, ಅಮೆರಿಕಕ್ಕೆ ರಫ್ತಾಗುತ್ತಿದೆ. ಯುದ್ಧದ ಹಿನ್ನೆಲೆ ಈ ಮೊದಲು 1800 US ಡಾಲರ್ ಇದ್ದ ಕಂಟೇನರ್ 3500 US ಬಾಡಿಗೆ ದರ ದಾಟಿದೆ. ಯುದ್ಧ ಮುಂದುವರಿದರೆ ಬ್ಯಾಡಗಿ ಮೆಣಸಿನ ದರ ಕುಸಿಯುವ ಆತಂಕವನ್ನು ರೈತರು, ವರ್ತಕರು ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *