Headlines

ಅರ್ಷದೀಪ್ ಮಾಡಿದ ಕೆಲಸಕ್ಕೆ ಕೆರಳಿದ ಮಿಚೆಲ್..! ಜಗಳ ತಪ್ಪಿಸಿದ ಸೂರ್ಯ; ವಿಡಿಯೋ ವೈರಲ್

ಅರ್ಷದೀಪ್ ಮಾಡಿದ ಕೆಲಸಕ್ಕೆ ಕೆರಳಿದ ಮಿಚೆಲ್..! ಜಗಳ ತಪ್ಪಿಸಿದ ಸೂರ್ಯ; ವಿಡಿಯೋ ವೈರಲ್


ಅರ್ಷದೀಪ್ ಮಾಡಿದ ಕೆಲಸಕ್ಕೆ ಕೆರಳಿದ ಮಿಚೆಲ್..! ಜಗಳ ತಪ್ಪಿಸಿದ ಸೂರ್ಯ; ವಿಡಿಯೋ ವೈರಲ್

ಕ್ರಿಕೆಟ್ ಲೋಕದ ಅತ್ಯಂತ ಜಂಟಲ್ ಮ್ಯಾನ್ ತಂಡಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಕಿವೀಸ್ ಆಟಗಾರರು ಕ್ರಿಕೆಟ್ ನಿಯಮಗಳನ್ನು ಮುರಿಯುವುದಾಗಲಿ, ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ವರ್ತಿಸುವುದಾಗಲಿ, ಎದುರಾಳಿ ತಂಡದ ಆಟಗಾರರೊಂದಿಗೆ ಅಸಭ್ಯವಾಗಿ ವರ್ತಿಸುವುದನ್ನು ನಾವು ನೋಡುವುದು ತೀರ ವಿರಳ. ಹೀಗಾಗಿ ಇಡೀ ವಿಶ್ವ ಕ್ರಿಕೆಟ್ ನ್ಯೂಜಿಲೆಂಡ್ ತಂಡಕ್ಕೆ ಸಲಾಂ ಹೊಡೆಯುತ್ತದೆ. ಅಂತಹದರಲ್ಲಿ ಕಿವೀಸ್ ತಂಡದ ಆಟಗಾರನೊಬ್ಬ ಲೈವ್ ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡು ಎದುರಾಳಿ ತಂಡದ ಆಟಗಾರ ವಾಗ್ವಾದಕ್ಕಿಳಿದ ಟಿ20 ಪಂದ್ಯದ ಫೈನಲ್ ಪಂದ್ಯ ನಡೆಯಿತು. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್, ಭಾರತದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಮೇಲೆ ಗರಂ ಆಗಿ ಜಗಳಕ್ಕಿಳಿದಿದ್ದಾರೆ. ಆದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಗಮನಿಸಿದ ನಾಯಕ ಸೂರ್ಯ, ಮಿಚೆಲ್ ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಅಂಪೈರ್, ಅರ್ಷದೀಪ್ ಸಿಂಗ್ ಕಿವಿ ಮಾತು ಹೇಳಿ ಮಿಚೆಲ್ ಬಳಿ ಕ್ಷಮೆಯಾಚಿಸಿದ್ದಾರೆ.

ಮಿಚೆಲ್ನ ಕೆರಳಿಸಿದ ಅರ್ಷದೀಪ್

ವಾಸ್ತವವಾಗಿ ನ್ಯೂಜಿಲೆಂಡ್ ಇನ್ನಿಂಗ್ಸ್‌ನ 11 ನೇ ಸ್ಥಾನದಲ್ಲಿ ಮಿಚೆಲ್, ಅರ್ಷದೀಪ್ ಸಿಂಗ್ ಅವರ ಸಮಾರಂಭದಲ್ಲಿ ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಎರಡು ಸಿಕ್ಸರ್‌ಗಳನ್ನು ಹೊಡೆಸಿಕೊಂಡ ನಂತರ ಅರ್ಷದೀಪ್ ಕೊಂಚ ತಾಳ್ಮೆ ಕಳೆದುಕೊಂಡವರಂತೆ ವರ್ತಿಸಿದರು. ಅರ್ಷದೀಪ್ ಅವರ ಐದನೇ ಸಮಯದಲ್ಲಿ, ಡ್ಯಾನಿಲ್ ಮಿಚೆಲ್ ಶಾಟ್ ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ಅರ್ಷದೀಪ್‌ಗೆ ತಲುಪಿತು. ನಂತರ ಅರ್ಷದೀಪ್ ಚೆಂಡನ್ನು ಡ್ಯಾರಿಲ್ ಮಿಚೆಲ್ ಕಡೆಗೆ ಎಸೆದರು. ಚೆಂಡು ರಬಸವಾಗಿ ಹೋಗಿ ಮಿಚೆಲ್ ಗೆ ಬಡಿಯಿತು.

ಇದರಿಂದ ತುಂಬಾ ಕೋಪಗೊಂಡ ಮಿಚೆಲ್ ಜೋರಾಗಿ ಏನನ್ನೋ ಹೇಳುತ್ತಾ ಅರ್ಷದೀಪ್ ಬಳಿಕ ಬರಲು ಪ್ರಾರಂಭಿಸಿದರು. ಆದರೆ ಅರ್ಷದೀಪ್ ತಾನು ಎಸಗಿದ ಕೃತ್ಯಕ್ಕೆ ಮಿಚೆಲ್ ಬಳಿ ಕ್ಷಮೆಯನ್ನು ಕೇಳದೆ ಮತ್ತೆ ಬೌಲಿಂಗ್ ಮಾಡುವತ್ತ ಗಮನ ಹರಿಸಿದರು. ಇತ್ತ ಮಿಚೆಲ್ ಆಕ್ರೋಶವನ್ನು ಗಮನಿಸಿದ ಸೂರ್ಯಕುಮಾರ್ ಯಾದವ್, ಅವರ ಬಳಿಗೆ ಬಂದು ಸಾಂತ್ವನ ಹೇಳಲು ಪ್ರಯತ್ನಿಸಿದರು. ಹಾಗೆ ಅಂಪೈರ್, ಅರ್ಷದೀಪ್ ಅವರನ್ನು ಕರೆದು ಹಾಗೆ ಮಾಡದಂತೆ ಸಲಹೆ ಸೂಚನೆ. ಕೊನೆಗೆ ಅರ್ಷದೀಪ್ ತನ್ನ ತಪ್ಪನ್ನು ಒಪ್ಪಿಕೊಂಡು ಮಿಚೆಲ್ ಬಳಿ ಕ್ಷಮೆಯಾಚಿಸಿದರು.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *