Headlines

ಕಾರವಾರ: ಕಾರಿನ ಮೇಲೆ ಮಗುಚಿದ ಕಂಟೈನರ್ ಟ್ರಕ್: ಕುಡುಕ ಚಾಲಕನ ಅವಾಂತರಕ್ಕೆ ಬಾಲಕ ಬಲಿ

ಕಾರವಾರ: ಕಾರಿನ ಮೇಲೆ ಮಗುಚಿದ ಕಂಟೈನರ್ ಟ್ರಕ್:  ಕುಡುಕ ಚಾಲಕನ ಅವಾಂತರಕ್ಕೆ ಬಾಲಕ ಬಲಿ

ಕಾರವಾರ: ಕಾರಿನ ಮೇಲೆ ಮಗುಚಿದ ಕಂಟೈನರ್ ಟ್ರಕ್:  ಕುಡುಕ ಚಾಲಕನ ಅವಾಂತರಕ್ಕೆ ಬಾಲಕ ಬಲಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಳಿ ಕುಡಿದ ಮತ್ತಿನಲ್ಲಿದ್ದ ಕಂಟೈನರ್ ಚಾಲಕನೋರ್ವ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 8 ವರ್ಷದ ಬಾಲಕ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉತ್ತರಕನ್ನಡ/ಕಾರವಾರ: ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಕಂಟೈನರ್ ಚಾಲಕನೋರ್ವ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ 8 ವರ್ಷದ ಬಾಲಕನೋರ್ವ ಸಾವನ್ನಪ್ಪಿ ಕಾರಿನಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿ ಅರಗಾ ಗ್ರಾಮದ ಬಳಿ ಘಟನೆ ನಡೆದಿದೆ.

ಕುಡಿದ ಮತ್ತಿನಲ್ಲಿ‌ ಕಾರಿಗೆ ಗುದ್ದಿದ ಕಂಟೈನರ್ ಕಾರಿನ ಮೇಲೆಯೇ ಬಿದ್ದ ಪರಿಣಾಮ ಕಾರಿನಲ್ಲಿದ್ದ ಓರ್ವ ಬಾಲಕ ಸಾವನ್ನಪ್ಪಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರ‌ ಗಾಯಗೊಂಡ ಮೂವರನ್ನು ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕುಡಿದ ಮತ್ತಿನಲ್ಲಿದ್ದ ಕಂಟೈನರ್‌ ಚಾಲಕ ಅಲ್ಲಿದ್ದ ಎಲ್ಲರ ಜೊತೆಗೂ ಜಗಳ ಮಾಡುತ್ತಿದ್ದ. ರಸ್ತೆ ಮಧ್ಯೆ ವಾಹನ ಅಡ್ಡಗಟ್ಟಿ ಗಲಾಟೆ ಮಾಡಿದ್ದ. ನಂತರ ಸಿಟ್ಟಿನಿಂದ ಕಂಟೈನರ್ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಇದನ್ನೂ ಓದಿ: ಕಾಡಾನೆ ದಾಳಿಗೆ ಕೊಡಗಿನಲ್ಲಿ ಮಹಿಳೆ ಬಲಿ: ಚಿಕ್ಕಮಗಳೂರಿನಲ್ಲಿ ಹಾಲು ಕೊಡುವ ಹಸು ತುಳಿದು ಸಾಯಿಸಿದ ಆನೆ

ಅಪಘಾತದ ನಂತರ ಮಹಾರಾಷ್ಟ್ರ ನೋಂದಣಿಯ ಕಾರಿನ ಮೇಲೆ ಕಂಟೈನರ್ ಬಿದ್ದಿದ್ದು, ಕಾರಿನಲ್ಲಿದ್ದ 8 ವರ್ಷದ ಬಾಲಕ ಸಾವನ್ನಪ್ಪಿದ್ದು, ಟ್ರಕ್‌ ಚಾಲಕನನ್ನು ಕಾರವಾರ ಗ್ರಾಮೀಣ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ದಂಪತಿ ಮೇಲೆ ಬಿದ್ದ ನಿರ್ಮಾಣ ಹಂತದ ಮನೆಯ ಮೆಟ್ಟಿಲು: ಮನೆ ಕನಸು ನನಸಾಗುವ ಮೊದಲೇ ಸಾವು

Source link

Leave a Reply

Your email address will not be published. Required fields are marked *