’ಕೃಷ್ಣ ರುಕ್ಕು’ ಧಾರಾವಾಹಿ ಆರಂಭವಾಗಿದ್ದು, ಇದು ಅಣ್ಣನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊರುವ ರುಕ್ಕು ಮತ್ತು ಹಾದಿ ತಪ್ಪಿದ ಕುಡುಕ ಕೃಷ್ಣನ ನಡುವಿನ ಕಥೆಯಾಗಿದೆ. ಕುಡುಕನ ಪಾತ್ರದಲ್ಲಿ ನಟ ಅಕ್ಷಯ್ ನಾಯಕ್ ಕಾಣಿಸಿಕೊಂಡಿದ್ದು, ಈ ಪಾತ್ರಕ್ಕಾಗಿ ತಾವು ಪಟ್ಟ ಶ್ರಮದ ಕುರಿತು ಹೇಳಿದ್ದಾರೆ.

ಇಂದಿನಿಂದ ಜೀ ಕನ್ನಡದಲ್ಲಿ ಕೃಷ್ಣ ರುಕ್ಕು (Krishna Rukku Serial) ಆರಂಭವಾಗಿದೆ. ಅಣ್ಣನ ಸಾವಿನ ನಂತರ ಕುಟುಂಬದ ಜವಾಬ್ದಾರಿ ಹೊರುವ ರುಕ್ಕು ಮತ್ತು ಹಾದಿ ತಪ್ಪಿದ ಕೃಷ್ಣನ ಕಥೆಯಿದು.

ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ ಜತೆಗೆ ಅನಿರೀಕ್ಷಿತ ತಿರುವುಗಳು ಈ ಧಾರಾವಾಹಿ ಪ್ರಮುಖ ವಿಷಯಗಳು. ಅಣ್ಣನ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತುಕೊಳ್ಳುವ ರುಕ್ಕು ಮತ್ತು ಅವಳ ಪ್ರೀತಿ, ದ್ವೇಷ, ವಿಧಿಯಾಟದ ಕಥೆ ಹೇಳುತ್ತದೆ. ಆಗ ಎದುರಾಗುವ ಸವಾಲುಗಳನ್ನು ಅವಳು ಹೇಗೆ ಎದುರಿಸುತ್ತಾಳೆ ಎಂಬುದು ಧಾರಾವಾಹಿಯ ಕಥೆ. ಹಾಗೆಯೇ ಸಮಾಜದಲ್ಲಿ ಹಾದಿ ತಪ್ಪಿರುವ ಕೃಷ್ಣ ಅದು ಹೇಗೆ ರುಕ್ಕುವಿನ ಸಂಪರ್ಕಕ್ಕೆ ಬರುತ್ತಾನೆ ಎಂಬುದೇ ಈ ಧಾರಾವಾಹಿ ಪ್ರಮುಖ ಘಟ್ಟ.

ಇದರಲ್ಲಿ ಕೃಷ್ಣ ಮಹಾ ಕುಡುಕ. ಈ ಪಾತ್ರವನ್ನು ಅಕ್ಷಯ್ ನಾಯಕ್ (Akshay Nayak) ನಿರ್ವಹಿಸುತ್ತಿದ್ದಾರೆ. ಉಳಿದಂತೆ, ಮೌನ ಗುಡ್ಡೇಮನೆ ರುಕ್ಕು ಆಗಿದ್ದರೆ, ಎಸ್. ನಾರಾಯಣ್, ಸುಚಿತ್ರಾ, ಗಾಯಕ ನವೀನ ಸಜ್ಜು ಪ್ರಮುಖ ಪಾತ್ರಗಳಲ್ಲಿದ್ದಾರೆ. ಸೂರ್ಯ ಪ್ರಕಾಶ್ ಎಂಬ ಪಾತ್ರದಲ್ಲಿ ನಾರಾಯಣ್ ನಟಿಸುತ್ತಿದ್ದಾರೆ.

ಅಕ್ಷಯ್ ನಾಯಕ್ ಇದೀಗ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕೃಷ್ಣ ರುಕ್ಕು ಸೀರಿಯಲ್ಗಾಗಿ ನಾನು ಕುಡುಕ ಆಗಬೇಕಾಯ್ತು. ಅರ್ಥಾತ್ ಕುಡುಕನಂತೆ ನಟಿಸಬೇಕಾಯ್ತು. ನಿಜ ಜೀವನದಲ್ಲಿ ನಾನು ಕುಡಿಯುವುದೇ ಇಲ್ಲ ಎಂದಿದ್ದಾರೆ.

ನನ್ನ ಒಂದಿಷ್ಟು ಫ್ರೆಂಡ್ಸ್ ಸರ್ಕಲ್, ಒಂದಿಷ್ಟು ನೆಂಟರಿಷ್ಟರು ಕುಡಿಯುತ್ತಾರೆ. ಅವರನ್ನು ನೋಡಿ ನಾನು ಕುಡುಕರು ಹೇಗಿರುತ್ತಾರೆ ಎನ್ನುವುದನ್ನು ಆಬ್ಸರ್ವ್ ಮಾಡಿದೆ. ಕುಡಿದ ಮೇಲೆ ಅವರು ಹೇಗೆ ವರ್ತಿಸುತ್ತಾರೆ ಎನ್ನುವುದನ್ನು ನೋಡಿ ನಾನೂ ಅದೇ ರೀತಿ ಪ್ರಾಕ್ಟೀಸ್ ಮಾಡಿದೆ ಎಂದಿದ್ದಾರೆ ನಟ.

ಕುಡಕ ಪಾರ್ಟ್ ಮಾಡೋದು ತುಂಬಾ ಕಷ್ಟ. ಕುಡುಕರು ಅಲ್ಲದವರು ಹಾಗೆ ಮಾಡಿದರೆ ಅದು ಫೇಕ್ ಎನ್ನಿಸುತ್ತದೆ. ಆದ್ದರಿಂದ ನಾನು ಅದೆಲ್ಲಾ ಗೊತ್ತಾಗಬಾರದು ಎಂದು ಒಬ್ಬನೇ ಇದ್ದಾರೆ ಕುಡುಕನಂತೆ ತುಂಬಾ ಪ್ರಾಕ್ಟೀಸ್ ಮಾಡಿದೆ. ಈ ಸೀರಿಯಲ್ಗಾಗಿ ಸಾಕಷ್ಟು ತಯಾರಿ ನಡೆಸಿದೆ ಎಂದಿದ್ದಾರೆ.

Source link
Krishna Rukku Serialಗಾಗಿ ಕುಡುಕ ಆಗ್ಬೇಕಾಯ್ತು, ನಾನು ಕುಡಿದವನೇ ಅಲ್ಲ- ನಟ ಅಕ್ಷಯ್ ಏನಂದ್ರು ನೋಡಿ