
ಜನವರಿ, ಜೂನ್ 9: ಅಮೆರಿಕ ಇರಾನ್ ಮೇಲೆ ಯಾಕೆ ಯುದ್ಧ ಮಾಡುತ್ತಿದೆ? ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆ ಎಂಬ ಕಾರಣವೊಡ್ಡಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಇರಾನ್ ತನ್ನ ಪರಮಾಣು ಯೋಜನೆ ಕೈಬಿಡುತ್ತೇನೆ ಎಂದು ಹಲವು ಬಾರಿ ವಾಗ್ದಾನ ಕೊಟ್ಟಿದೆ. ಆ ಇಂಟರ್ನ್ಯಾನಲ್ ಏಜೆನ್ಸಿಗಳಿಗೆ ಸಹಕಾರ ಕೂಡ ಕೊಟ್ಟಿದೆ. ಆದರೂ ಕೂಡ ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ಎರಗಿದೆ. ಮೇಲ್ನೋಟಕ್ಕೆ ಕಾಣುವ ಮತ್ತೊಂದು ಕಾರಣವೆಂದರೆ, ಇರಾನ್ ಅನೇಕ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗ. ಆದರೆ, ತೆರೆಯ ಮರೆಯಲ್ಲಿ ಇರಾನ್ ಮೇಲೆ ಅಮೆರಿಕ ಎರಗಿ ಹೋಗಲು ಬೇರೊಂದು ಕಾರಣ ಇದೆ.
ವೆನಿಜುವೆಲಾ ಮಾದರಿ ಪ್ರಯೋಗದಲ್ಲಿ ಅಮೆರಿಕ…
ಅಮೆರಿಕದ ಸೇನೆ ಇತ್ತೀಚೆಗಷ್ಟೇ ವೆನಿಜುವೆಲಾದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಅಧ್ಯಕ್ಷರನ್ನೇ ಬದಲಿಸಿತು. ಜನಸಾಮಾನ್ಯರಿಗೆ ಹಾನಿಯಾಗದೆಯೇ ನಡೆದ ಆಪರೇಷನ್ ಅದು. ಅದೇ ಮಾದರಿಯಲ್ಲಿ ಕ್ಯೂಬಾ ಮತ್ತು ಇರಾನ್‌ನಲ್ಲೂ ಅಮೆರಿಕ ಮಾಡಹೊರಟಿದೆ. ಇರಾನ್ ಅಧ್ಯಕ್ಷ ಆಯತೊಲ್ಲ ಖಮೇನಿ ಅವರನ್ನು ಆರಂಭದಲ್ಲೇ ಕೊಂಡು ಹಾಕಿತು. ಸರ್ವೋಚ್ಚ ನಾಯಕ ಸಾವನ್ನಪ್ಪಿದರೆ ಇರಾನ್ ಶರಣಾಗಬಹುದು ಎಂದು ಅಮೆರಿಕದ ಎಣಿಕೆ ತಪ್ಪಾಗಿದ್ದರೆ ಹೌದು. ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದ ಮಾಜಿ ನಿರ್ದೇಶಕ ತಾರಾ ಕರ್ತಾ ಅವರ ಪ್ರಕಾರ ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್‌ನಲ್ಲಿ ಒಂದು ಕಾಮನ್ ಫ್ಯಾಕ್ಟರ್ ಇದೆ. ಅದು ಚೀನಾದ ಲಿಂಕ್.
ಇದನ್ನೂ ಓದಿ: ಕಾಣದಂತೆ ಇದ್ದ ಖರ್ಗ್ ದ್ವೀಪದ ಮೇಲೆ ಅಮೆರಿಕದ ಕಣ್ಣು; ಏನದರ ಮಹತ್ವ?
ಚೀನಾದ ಯುಆನ್ ಕರೆನ್ಸಿ ಲಿಂಕ್
ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್ ದೇಶಗಳು ತಮ್ಮ ಮತ್ತು ಸರಕುಗಳ ರಫ್ತನ್ನು ಅಮೆರಿಕದ ಡಾಲರ್ ಕರೆನ್ಸಿ ಬದಲಿಗೆ ಚೀನಾದ ಯುವಾನ್ ಕರೆನ್ಸಿಯಲ್ಲಿ ನಡೆಸುವುದು ಎಂದು ತಾರಾ ಕರ್ತಾ ಅವರು ಎನ್ಡಿಟಿವಿಗೆ ಬರೆದ ಲೇಖನದಲ್ಲಿ ಪ್ರಕಟಿಸಿದ್ದಾರೆ. ವೆನಿಜುವೆಲಾ ಮತ್ತು ಇರಾನ್ ದೇಶಗಳು ಚೀನಾಗೆ ಕಡಿಮೆ ಬೆಲೆಯಲ್ಲಿ ತೈಲ ಪೂರೈಕೆಯನ್ನು ಮಾಡುತ್ತಿವೆ. ವೆನಿಜುವೆಲಾ ಅಧ್ಯಕ್ಷ ಮಡುರೊಂತೂ ಅವರ ಡಾಲರ್ ಕರೆನ್ಸಿ ವಹಿವಾಟು ತ್ಯಜಿಸಿ ತಮ್ಮ ದೇಶವನ್ನು ಅಮೆರಿಕದಿಂದ ಸಂಪೂರ್ಣ ಸ್ವತಂತ್ರಗೊಳಿಸುವಂತೆ ಹೇಳುತ್ತದೆ. ಅಮೆರಿಕವು ನಿಷೇಧಿಸಿದಾಗ ಚೀನಾಗೆ ತೈಲವನ್ನು ಹೆಚ್ಚು ಕಡಿಮೆ ಬೆಲೆಗೆ ಮಾರಲಾಗುತ್ತದೆ ವೆನಿಜುವೆಲಾ.
ಇರಾನ್ ದೇಶ ಕೂಡ ಚೀನಾದೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಆನ್ ಕರೆನ್ಸಿಯಲ್ಲೇ ವಹಿವಾಟು ನಡೆಸುತ್ತದೆ. ಅಮೆರಿಕದ ನಿಷೇಧ ಕ್ರಮವನ್ನು ಬೈಪಾಸ್ ಮಾಡಲು ಇರಾನ್ ದೇಶವು ಮಲೇಷ್ಯಾ ಮೂಲಕ ಚೀನಾಕ್ಕೆ ತೈಲ ಸಾಗಿಸುತ್ತದೆ. ಅಲ್ಲಿ ಯುಯಾನ್ ಕರೆನ್ಸಿ ಬಳಕೆಯಾಗುತ್ತದೆ. ಅಮೆರಿಕ ಕಣ್ಣಿಟ್ಟಿರುವ ಕ್ಯೂಬಾ ದೇಶ ಕೂಡ ಚೀನೀ ಕರೆನ್ಸಿಯಲ್ಲಿ ವ್ಯವಹರಿಸುತ್ತದೆ.
ಚೀನಾಗೆ ತೈಲ ದಕ್ಕದಂತೆ ಮಾಡುವುದು ಅಮೆರಿಕದ ಚಿತಾವಣಿಯಾ?
ತಾರಾ ಕರ್ತಾ ಪ್ರಕಾರ ಅಮೆರಿಕವು ತೈಲ ಸಂಪನ್ಮೂಲ ಲಭ್ಯತೆ ಖಾತ್ರಿಪಡಿಸಿಕೊಳ್ಳುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಚೀನಾಗೆ ತೈಲ ದಕ್ಕಬಾರದು ಎಂಬ ಉದ್ದೇಶ ಇರಬಹುದು. ಇದರ ಜೊತೆಗೆ ಪ್ರಬಲ ಕಾರಣ ಯುವಾನ್ ಕರೆನ್ಸಿ ಬಲಗೊಳ್ಳುತ್ತಿದೆ.
ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್ ಮಹತ್ವದ ಎಚ್ಚರಿಕೆ
ವಿಶ್ವದಲ್ಲಿ ಸದ್ಯ ಅಮೆರಿಕದ ಡಾಲರ್ ಕರೆನ್ಸಿ ಅತಿ ಪ್ರಬಲವಾದುದು. ಡೀಫಾಲ್ಟ್ ಅಂತರರಾಷ್ಟ್ರೀಯ ಕರೆನ್ಸಿಯಾಗಿದೆ. ಎಲ್ಲಾ ದೇಶಗಳು ಡಾಲರುಗಳನ್ನು ಖರೀದಿಸುವುದು ಅನಿವಾರ್ಯವಾಗಿದೆ, ಅದನ್ನು ಅಮೆರಿಕದಲ್ಲಿ ಇರಿಸುವುದೂ ಅನಿವಾರ್ಯವಾಗಿದೆ. ಹೀಗಾಗಿ, ಅಮೆರಿಕದ ದೊಡ್ಡಣ್ಣನಾಗಲು ಡಾಲರ್ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಈಗ ಡಾಲರ್‌ಗೆ ಸೆಡ್ಡು ಹೊಡೆಯುವಂತೆ ಚೀನಾದ ಯುಆನ್ ಕರೆನ್ಸಿ ಬೆಳೆಯುತ್ತಿರುವ ಅಮೆರಿಕವನ್ನು ತಲ್ಲಣಗೊಳಿಸಬಹುದು. ತಾರಾ ಅವರು ಶಂಕಿಸಿರುವುದು ಇದನ್ನೇ.
ಯುಆರ್ ಕರೆನ್ಸಿಯಲ್ಲಿ ವಹಿವಾಟು ನಡೆಸುತ್ತಿರುವ ದೇಶಗಳು ಅಮೆರಿಕದ ಹಿಟ್‌ಲಿಸ್ಟ್‌ನಲ್ಲಿ ಇರಬಹುದೇ? ಬ್ರೆಜಿಲ್, ಅರ್ಜೆಂಟೀನಾ ಇಂಡೋನೇಷ್ಯಾ, ಮಾಯನ್ಮಾರ್, ಪಾಕಿಸ್ತಾನ ಮೊದಲಾದ ಕೆಲ ದೇಶಗಳು ಚೀನಾದ ವ್ಯವಹಾರವನ್ನು ಯುಆನ್‌ನಲ್ಲಿ ಡೀಲ್ ಮಾಡುತ್ತವೆ. ಇವುಗಳಲ್ಲೊಂದು ದೇಶವು ಅಮೆರಿಕದ ಮುಂದಿನ ಗುರಿ ಆಗಬಹುದಾ?
ಹೆಚ್ಚಿನ ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ