ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಇದ್ದಾಗ ಮತ್ತೊಂದು ನಿರ್ಣಯ ಹೇಗೆ ತರುತ್ತೀರಿ? ವಿಪಕ್ಷಗಳ ವರ್ತನೆಗೆ ಪ್ರಲ್ಹಾದ್ ಜೋಷಿ ಕಿಡಿ

ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಇದ್ದಾಗ ಮತ್ತೊಂದು ನಿರ್ಣಯ ಹೇಗೆ ತರುತ್ತೀರಿ? ವಿಪಕ್ಷಗಳ ವರ್ತನೆಗೆ ಪ್ರಲ್ಹಾದ್ ಜೋಷಿ ಕಿಡಿ


ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಇದ್ದಾಗ ಮತ್ತೊಂದು ನಿರ್ಣಯ ಹೇಗೆ ತರುತ್ತೀರಿ? ವಿಪಕ್ಷಗಳ ವರ್ತನೆಗೆ ಪ್ರಲ್ಹಾದ್ ಜೋಷಿ ಕಿಡಿ

ಜನವರಿ, ಮಾರ್ಚ್ 9: ಸ್ಪೀಕರ್ ಬಿರ್ಲಾ ವಿರುದ್ಧ ದೋಷಾರೋಪಣೆ ಕೋರಿ ನಿರ್ಣಯ ತರಲು ವಿಪಕ್ಷಗಳು ಮಾಡಿದ ಪ್ರಯತ್ನ ಫಲಿಸಲಿಲ್ಲ. ಲೋಕಸಭೆಯಲ್ಲಿ ಈ ನಿರ್ಣಯದ ಮೇಲಿನ ಚರ್ಚೆಗೆ ವಿಪಕ್ಷಗಳಿಂದಲೇ ಅಡ್ಡಿಯಾಯಿತು. ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರ ಚರ್ಚೆಗೆ ಬರ ವಿಪಕ್ಷಗಳು ಹಿಡಿದ ಹಠಕ್ಕೆ ಸಮ್ಮತಿ ಸಿಗಲಿಲ್ಲ. ಪ್ರತಿಭಟನೆಗಳ ಮಧ್ಯೆ ಸೋಮವಾರ ಕಲಾಪ ಅವಧಿಗೆ ಮುನ್ನವೇ ಅಂತ್ಯಗೊಂಡಿತು. ಸಂಸದ ಈಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಅವರು ಸ್ಪೀಕರ್ ಓಂ ಬಿರ್ಲಾ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ವಿಪಕ್ಷಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಇವತ್ತು ಈ ವಿಚಾರವನ್ನು ಚರ್ಚೆಗೆ ಸೇರಿಸಲಾಯಿತು. ಅವರು ನಿರ್ಣಯ ಮಂಡಿಸಿದರು. ಅದರ ವಿಧಾನ ಏನಿದೆ ಹೇಳಿ? ನಿರ್ಣಯ ಮಂಡಿಸಿದಾಗ 50 ಜನರು ಅದಕ್ಕೆ ಬೆಂಬಲವಾಗಿ ನಿಲ್ಲಬೇಕು. ಇವತ್ತು ಲೋಕಸಭೆಯ ಅಧ್ಯಕ್ಷತೆ ವಹಿಸಿದ್ದ ಜಗದಾಂಬಿಕಾ ಪಾಲ್ ಅವರು, ನೀವು ನಿರ್ಣಯ ತರುವುದಾದರೆ ಚರ್ಚೆಗೆ ಒಪ್ಪುತ್ತೇನೆ ಎಂದು ಪದೇ ಪದೇ ಹೇಳಿದರು.

‘ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ತರುವ ಅಜೆಂಡಾ ಇದ್ದಾಗ ಮಧ್ಯದಲ್ಲಿ ಮತ್ತೊಂದು ನಿರ್ಣಯ, ಮತ್ತೊಂದು ನಿಲುವಳಿ ಸೂಚನೆ ಹೇಗೆ ತರುತ್ತೀರಿ? ನಿಯಮಗಳಿವೆಯೋ ಇಲ್ಲವೋ? ಸಂವಿಧಾನ ಇಲ್ಲವಾ? ರಾಹುಲ್ ಗಾಂಧಿ ಹೇಳಿದಂತೆ ಕಲಾಪ ನಡೆಸುವುದಾದರೆ ನಿಯಮ ರಚಿಸಿರುವುದು ಯಾಕೆ? ಈ ವ್ಯಕ್ತಿಗಳು ಮೊದಲು ಬೇಡಿಕೆ ಇಡುತ್ತಾರೆ, ನಂತರ ಗಲಾಟೆ ಮಾಡುತ್ತಾರೆ. ಇದೆಂಥ ವಿಚಾರ ಹೇಳಿ? ನಾನು ಸಂಸದೀಯ ವ್ಯವಹಾರಗಳ ಸಚಿವನಾದ ಬಳಿಕ ಸಾಕಷ್ಟು ಬಾರಿ ಆಗಿದ್ದೇನೆ. ಅವರು ಹೇಳಿದ್ದೇ ನಿಯಮ ಎಂದು ಭಾವಿಸಿದ್ದಾರೆ. ಯಾವ್ಯಾವು ಚರ್ಚೆಯಾಗಬೇಕು ಎಂದರೆ ಬಿಎಸ್‌ಸಿಯಲ್ಲಿ ಮೊದಲು ನಿರ್ಧಾರ ಆಗಬೇಕು’ ಎಂದು ಪ್ರಲ್ಹಾದ್ ಜೋಷಿ.

ಇದನ್ನೂ ಓದಿ: ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಷ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್

ಇವತ್ತು ಮಧ್ಯಾಹ್ನದ ಕಲಾಪ ಆರಂಭವಾದಾಗ ವಿಪಕ್ಷಗಳ ಸದಸ್ಯರು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ವಿಚಾರವನ್ನು ಚರ್ಚೆಗೆ ತರಲು ಒತ್ತಾಯಿಸಿದರು. ಸದನದ ಅಜೆಂಡಾ ಪ್ರಕಾರ ಕಾರ್ಯನಿರ್ವಹಿಸಲು ಅವಕಾಶ ಕೊಡುವಂತೆ ಸಭಾಧ್ಯಕ್ಷರು ಪದೇ ಪದೇ ಮನವಿ ಮಾಡಿಕೊಂಡ ವಿಪಕ್ಷದ ಸದಸ್ಯರು ಕಿವಿಗೊಡದೆ ಗದ್ದಲ ಮುಂದುವರಿಸಿದರು. ಲಭ್ಯವಿರುವ ಸದನದ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *