ಯಾವುದೇ ಕಾರಣಕ್ಕೂ ಈ ಒಂದು ಬೆರಳಿಗೆ ಚಿನ್ನದ ಉಂಗುರ ಹಾಕ್ಬೇಡಿ: 21 ದಿನ ನೀವೇ ಟೆಸ್ಟ್​ ಮಾಡಿ ನೋಡಿ!

ಯಾವುದೇ ಕಾರಣಕ್ಕೂ ಈ ಒಂದು ಬೆರಳಿಗೆ ಚಿನ್ನದ ಉಂಗುರ ಹಾಕ್ಬೇಡಿ: 21 ದಿನ ನೀವೇ ಟೆಸ್ಟ್​ ಮಾಡಿ ನೋಡಿ!

ಯಾವುದೇ ಕಾರಣಕ್ಕೂ ಈ ಒಂದು ಬೆರಳಿಗೆ ಚಿನ್ನದ ಉಂಗುರ ಹಾಕ್ಬೇಡಿ: 21 ದಿನ ನೀವೇ ಟೆಸ್ಟ್​ ಮಾಡಿ ನೋಡಿ!

ಜ್ಯೋತಿಷ ಶಾಸ್ತ್ರದ ಪ್ರಕಾರ, ಒಂದು ಬೆರಳು ಶನಿ ಮಹಾತ್ಮನಿಗೆ ಸಂಬಂಧಿಸಿದ್ದಾಗಿದ್ದು, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ, ನಿರಾಸೆ ಮತ್ತು ನಿಧಾನಗತಿಯ ಪ್ರಗತಿ ಉಂಟಾಗಬಹುದು.  21 ದಿನಗಳ ಕಾಲ ಉಂಗುರವನ್ನು ತೆಗೆದು ವ್ಯತ್ಯಾಸವನ್ನು ಗಮನಿಸಿ ಎನ್ನುತ್ತಾರೆ ಅವರು.

ಜ್ಯೋತಿಷ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ (Numerology) ಇವುಗಳಿಗೆ ಭಾರತದಲ್ಲಿ ಬಹುದೊಡ್ಡ ಮಹತ್ವವನ್ನೇ ನೀಡಲಾಗಿದೆ. ಆದರೆ ಇದರ ಹೆಸರಿನಲ್ಲಿ ವಂಚನೆ ಮಾಡುವ ದೊಡ್ಡ ವರ್ಗವೇ ಹುಟ್ಟಿಕೊಂಡಿದೆ. ಆದರೆ ನಿಖರವಾಗಿ ಇಂಥದ್ದೇ ದಿನ ಇದೇ ರೀತಿ ನಡೆಯುತ್ತದೆ ಎಂದು ಹೇಳುವ ಕಾಲಜ್ಞಾನಿಗಳೂ ನಮ್ಮ ಭಾರತದಲ್ಲಿಯೇ ಇದ್ದರು, ಈಗಲೂ ಇದ್ದಾರೆ. ಅಷ್ಟೊಂದು ಮಹತ್ವ ಈ ಶಾಸ್ತ್ರಕ್ಕೆ ಇದೆ.

ದೇಹದ ಒಂದೊಂದು ಅಂಗಗಳು ಜ್ಯೋತಿಷ ಶಾಸ್ತ್ರದ ಪ್ರಕಾರ ಒಂದೊಂದರ ಸಂಕೇತವಾಗಿದೆ. ಅದರಲ್ಲಿಯೂ ನಮ್ಮ ಅಂಗೈನಲ್ಲಿ ಇಡೀ ಶರೀರದ ಪಾತ್ರವೇ ಇದೆ. ಒಂದು ಕೈಯಲ್ಲಿ ಇರುವ ಐದು ಬೆರಳುಗಳಲ್ಲಿ ಪ್ರತಿಯೊಂದು ಬೆರಳಿಗೂ ಅದರದ್ದೇ ಆದ ವಿಶೇಷತೆ ಇದೆ. ಒಂದೊಂದು ಬೆರಳುಗಳನ್ನು ಒಂದೊಂದು ಗ್ರಹಕ್ಕೂ ಹೋಲಿಸಲಾಗುತ್ತದೆ.

ಬಹುತೇಕ ಮಂದಿ ಬೆರಳುಗಳಿಗೆ ಬೆಳ್ಳಿ, ಚಿನ್ನದ, ವಜ್ರದ ಉಂಗುರಗಳನ್ನು ಧರಿಸುತ್ತಾರೆ. ಅದರಲ್ಲಿಯೂ ಹೆಚ್ಚಾಗಿ ಜನರು ಧರಿಸುವುದು ಚಿನ್ನದ ಉಂಗುರ. ಆದರೆ ಒಂದು ಬೆರಳಿಗೆ ಮಾತ್ರ ಚಿನ್ನದ ಉಂಗುರವನ್ನು ಧರಿಸಲೇಬಾರದು. ಇದರಿಂದ ತುಂಬಾ ನಷ್ಟ ಎನ್ನುತ್ತಾರೆ ಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಅರವಿಂದ ರತನ್​

ಅವರು ಹೇಳುವ ಪ್ರಕಾರ, ನೀವು ಯಾವುದೇ ಬೆರಳುಗಳಿಗೆ ಚಿನ್ನದ ಉಂಗುರ ಹಾಕಿಕೊಳ್ಳಿ. ಆದರೆ ಮಧ್ಯದ ಬೆರಳು, ಅದು ಬಲಗೈ ಆಗಿರಬಹುದು ಅಥವಾ ಎಡಗೈ ಆಗಿರಬಹುದು. ಚಿನ್ನದ ಉಂಗುರ ಧರಿಸಲೇಬೇಡಿ ಎನ್ನುತ್ತಾರೆ.

ಮಧ್ಯದ ಬೆರಳು ಶನಿ ಮಹಾತ್ಮನಿಗೆ ರೂಲಿಂಗ್ ಆಗಿದೆ. ಈ ಬೆರಳಿಗೆ ಚಿನ್ನದ ಉಂಗುರ ಹಾಕಿಕೊಂಡರೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಳಂಬ, ತುಂಬಾ ನಿರಾಸೆ ಉಳಿದವರಿಗಿಂತಲೂ ಜಾಸ್ತಿ ಇರುತ್ತದೆ, ಪ್ರಗತಿ ತುಂಬಾ ನಿಧಾನವಾಗಿ ಆಗುತ್ತದೆ ಎನ್ನುವುದು ಅರವಿಂದ ಅವರ ಮಾತು.

ಒಂದು ವೇಳೆ ನಿಮಗೆ ಈ ಸಮಸ್ಯೆ ಇದ್ದು, ನೀವೇನಾದರೂ ಮಧ್ಯದ ಬೆರಳಿಗೆ ಚಿನ್ನದ ಉಂಗುರ ಹಾಕಿಕೊಳ್ಳುತ್ತಿದ್ದರೆ, 21 ದಿನ ಅದನ್ನು ತೆಗೆದು ಅಥವಾ ಬೇರೆ ಬೆರಳಿಗೆ ಹಾಕಿ ವ್ಯತ್ಯಾಸ ನೋಡಿ ಎಂದಿದ್ದಾರೆ ಅರವಿಂದ್​ ಅವರು.

Source link

Leave a Reply

Your email address will not be published. Required fields are marked *