
ಬೆಂಗಳೂರು, (ಮಾರ್ಚ್ 09): ಆನೇಕಲ್ನಲ್ಲಿ (ಆನೇಕಲ್) ಅಪಹರಣಕ್ಕೊಳಗಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೋಪಾಲ್ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಹೌದು..ಹೊನ್ನಕಳಸಾಪುರ ಗ್ರಾಮದ ನಿವಾಸಿ ಗೋಪಾಲ್ ಅವರು ನಿನ್ನೆ ಸಂಜೆ 7.30 ರ ಸುಮಾರಿನಲ್ಲಿ ಕರ್ಪೂರು ಗೇಟ್ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಅವರ ಕಾರಿಗೆ ದುರ್ಷ್ಕಮಿಗಳು ವಾಹನದಿಂದ ಅಪಘಾತವೆಂಬಂತೆ ಡಿಕ್ಕಿ ಹೊಡೆದಿದ್ದಾರೆ. ನಂತರ ಗೋಪಾಲ್ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದು, ಬಳಿಕ ತಮಿಳುನಾಡಿಗೆ (ತಮಿಳುನಾಡು) ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ನಿನ್ನೆ (ಮಾರ್ಚ್ 08) ಸ್ನೇಹಿತನಿಗೆ ಹೆಣ್ಣು ನೋಡುವ ಕಾರ್ಯಕ್ರಮಕ್ಕೆ ಹೋಗಿ ವಾಪಸ್ಸಾಗ್ತಿದ್ದ ಗೋಪಾಲ್ ಕಾರಿಗೆ ಇನ್ನೊಂದು ಕಾರು ಡಿಕ್ಕಿಯಾಗಿತ್ತು. ಈ ವೇಳೆ ಕಾರಿನಿಂದ ಇಳಿಯುತ್ತಿದ್ದಂತೆ ಗೋಪಿ ಹಾಗೂ ಸ್ನೇಹಿತ ಅತೀಶ್ಗೆ ಪೆಪ್ಪರ್ಸ್ಪ್ರೇ ಹೊಡೆದ ಕಿರಾತಕರ ಗ್ಯಾಂಗ್ ಗೋಪಿಯನ್ನು ಕಿಡ್ನ್ಯಾಪ್ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಸ್ಕೂಟರ್ ನಿರಾಕರಿಸಿದ್ದಕ್ಕೆ ಗೆಳತಿ ಮತ್ತು ಆಕೆಯ ಪೋಷಕರ ಮೇಲೆ ಬೆಂಕಿ ಹಚ್ಚಿದ ಬೆಂಗಳೂರಿನ ವ್ಯಕ್ತಿ
ಈ ಘಟನೆ ನಡೆದಿದ್ದಂತೆ ಗೋಪಾಲ್ ಜೊತೆಗಿದ್ದ ಸ್ನೇಹಿತ ಸತೀಶ್ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಕುಟುಂಬಸ್ಥರೂ ಕೂಡ ಹೊನ್ನಕಳಶಾಪುರದ ಮೋಹನ್ ಬಾಬು ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದರು. ಇಂದು (ಮಾರ್ಚ್ 09) ತಮಿಳುನಾಡಿನ ಡೆಂಕಣೀಕೋಟೆ ಬಳಿ ಬರ್ಬರವಾಗಿ ಕೊಲೆಯಾದ ಸ್ಥಿತಿಯಲ್ಲಿ ಗೋಪಿ ಶವ ಇದೆ. ರೊಚ್ಚಿಗೆದ್ದ ಕುಟುಂಬಸ್ಥರು ಆನೇಕಲ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು, ಆರೋಪಿ ಮೋಹನ್ ಬಾಬು ಮನೆ ಮೇಲೆ ಕಲ್ಲು ತೂರಾಟ.
ಅಂದಹಾಗೆ ಮೃತ ಗೋಪಾಲ್ ಹಾಗೂ ಆರೋಪಿ ಮೋಹನ್ ಬಾಬು ಮೊದಲು ಜೊತೆಯಾಗಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. 10 ವರ್ಷದ ಹಿಂದೆ ಗೋಪಾಲ್ ಸ್ವಾತಿ ಎಂಬ ಯುವತಿಯನ್ನ ಮದುವೆಯಾಗಿದ್ದಳು. ಆದರೆ ಮೋಹನ್ಗೂ ಆಕೆ ಮೇಲೆ ಮೋಹವಿತ್ತಂತೆ. ಇದು ಇಬ್ಬರ ಮಧ್ಯೆ ದ್ವೇಷಕ್ಕೆ ಕಾರಣ. ಜೊತೆಗೆ ವ್ಯವಹಾರದಲ್ಲಿ ಏಳಿಗೆ ಸಹಿಸದ ಮೋಹನ್, 2 ವರ್ಷದ ಹಿಂದೆಯೂ ಗೋಪಿಯನ್ನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ನಂತೆ. ಆದರೆ , ಮಾರ್ಚ್ 08 ಮಾತ್ರ 25 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಮೋಹನ್ ಬಾಬು ಆತನ ಜೀವವನ್ನೇ ತೆಗೆದಿದ್ದಾನೆ.