
ಗೀತಾ ಭಾರತಿ ಭಟ್ ಅವರು ಸಿನಿಮಾದಲ್ಲಿ ತಮಗಾದ ಬಾಡಿಶೇಮಿಂಗ್ ಬಗ್ಗೆ ಮಾತನಾಡಿದ್ದರು. ‘ಲವ್ ಮಾಕ್ಟೇಲ್’ ಚಿತ್ರದಲ್ಲಿ ‘ಹೂ ತರ ಇದ್ಲು, ಹೂಕೋಸ್ ತರ ಆಗಿದ್ದಾಳೆ’ ಎಂಬ ಡೈಲಾಗ್ ಇದೆ. ಈ ದೃಶ್ಯವನ್ನು ಗೀತಾ ಮಾಡಿದರು. ಥಿಯೇಟರ್ ನಲ್ಲಿ ನೋಡಿದಾಗ ಅವರಿಗೆ ಶಾಕ್ ಆಗಿತ್ತಂತೆ. ಅದಕ್ಕೆ ಅವರು ತಕರಾರು ತೆಗೆದಿದ್ದರು. ಈ ವಿಷಯಕ್ಕೆ ಚಿತ್ರದ ನಿರ್ಮಾಪಕಿ ಮಿಲನಾ ನಾಗರಾಜ್ ಹಾಗೂ ನಿರ್ದೇಶಕ ಕೃಷ್ಣ ಅವರು ಹೇಳಿದ್ದಾರೆ. ‘ಅಷ್ಟಿದ್ರೆ ಸಿನಿಮಾನೇ ಒಪ್ಪಿಕೊಳ್ಳಬಾರದಿತ್ತು’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಈ ಮೊದಲು ಮಾತನಾಡಿದ್ದ ಗೀತಾ ಅವರು, ನಿರ್ದೇಶಕ ಕೃಷ್ಣ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಸಿನಿಮಾದಲ್ಲಿ ಈ ರೀತಿಯ ಡೈಲಾಗ್ ಇದೆ ಎಂಬುದೇ ಗೊತ್ತಿರಲಿಲ್ಲ ಎಂದು ಆರೋಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ‘ಫಸ್ಟ್ ಡೇ ಫಸ್ಟ್ ಶೋ ಕನ್ನಡ’ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಿಲನಾ ಹಾಗೂ ಕೃಷ್ಣ ಮಾತನಾಡಿದ್ದಾರೆ.
‘ಅದು ಬಾಡಿ ಶೇಮಿಂಗ್ ಮಾಡಿಲ್ಲ. ರೈಮಿಂಗ್ ಆಗಿ ಬರೆದಿದ್ದು ಅಷ್ಟೇ’ ಎಂದು ಕೃಷ್ಣ ಅವರು ಹೇಳಿದ್ದಾರೆ. ‘ಅವರಿಗೆ ಸಿನಿಮಾ ಪಾತ್ರ ಗೊತ್ತಿತ್ತು. ಈಗ ಮಾತನಾಡುವ ಅವಶ್ಯಕತೆ ಇಲ್ಲ. ಅವರು ಸಂಪೂರ್ಣ ದೃಶ್ಯವನ್ನೇ ಮಾಡಿ ಹೋಗಿದ್ದಾರೆ. ಕಲಾವಿದರಿಗೆ ಹೇಳದೆ ನಾವು ದೃಶ್ಯ ಮಾಡೋಕಾಗಲ್ಲ. ಅವರಿಗೆ ಆ ಬಳಿಕ ಹಾಗೆ ಅನಿಸಬಹುದು. ಅಷ್ಟಿದ್ರೆ ಅವರು ಆ ರೀತಿಯ ಪಾತ್ರಗಳನ್ನು ಮಾಡಬಾರದು. ಯಾವುದನ್ನು ಮುಚ್ಚಿಟ್ಟು ಮಾಡಲ್ಲ. ಆಡಿಷನ್ ಮಾಡಿ ಕಾಸ್ಟ್ ಮಾಡೋದು. ನಿಮಗೆ ಆಗಲ್ಲ ಅಂದ್ರೆ ಬಿಡಿ’ ಎಂದು ಮಿಲನ ಖಡಕ್ ಆಗಿ ಹೇಳಿದ್ದಾರೆ.
‘ಗೀತಾ ಅವರು ಧಾರಾವಾಹಿ ಮಾಡುತ್ತಾ ಇಬ್ಬರು. ಅದರಲ್ಲೂ ಅದೇ ಕಥೆ ಇತ್ತು. ಮೂರು ವರ್ಷ ಆ ರೀತಿಯ ಧಾರಾವಾಹಿ ಮಾಡಿ, ನಮ್ಮ ಒಂದು ದೃಶ್ಯಕ್ಕೆ ತಕರಾರು ತೆಗೆದರೆ ಹೇಗೆ? ಮೇಕಿಂಗ್ ವಿಡಿಯೋ ಯೂಟ್ಯೂಬ್ ನಲ್ಲೇ ಇದೆ. ಯಾರಿಗೂ ಹರ್ಟ್ ಮಾಡಿಲ್ಲ. ಅನೇಕರಿಗೆ ಕನೆಕ್ಟ್ ಆಗಿರೋ ವಿಷಯ ಅದು’ ಎಂದು ಕೃಷ್ಣ ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ಲವ್ ಮ್ಯಾಕ್ಟೇಲ್‌ನಲ್ಲಿ ನನಗೆ ಬಾಡಿ ಶೇಮಿಂಗ್ ಆಗಿದೆ, ಆ ಪಾತ್ರ ಮಾಡಿ ತಪ್ಪು ಮಾಡಿದೆ’; ಗೀತಾ ಭಾರತಿ ಭಟ್
‘ಕಥಾ ನಾಯಕ ಆದಿ ಏನು ಫೀಲ್ ಮಾಡ್ತಾನೆ ಎಂದು ಬರೆದಿದ್ದು. ಕೆಲವರಿಗೆ ಬೇಸರ ಆಗಬಹುದು, ಕೆಲವರಿಗೆ ಖುಷಿ ಆಗಿರಬಹುದು. ಏನು ಮಾಡೋಕೂ ಆಗಲ್ಲ’ ಎಂದರು ಕೃಷ್ಣ. ‘ಕಾಮಿಡಿಯನ್ನು ಕಾಮಿಡಿತರ ತಗೋಬೇಕು’ ಎಂಬುದು ಮಿಲನ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.