ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆಯಲ್ಲಿ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ | Iran Israel War Causes Massive Fall In Mumbai Stock Market Rupee Falls All Time Low

ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆಯಲ್ಲಿ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ | Iran Israel War Causes Massive Fall In Mumbai Stock Market Rupee Falls All Time Low



ಇರಾನ್ ಇಸ್ರೇಲ್ ಯುದ್ಧದಿಂದ ಷೇರುಪೇಟೆಯಲ್ಲಿ ಮಹಾಪತನ: 10 ದಿನದಲ್ಲಿ 31 ಲಕ್ಷ ಕೋಟಿ ಸಂಪತ್ತು ನಾಶ | Iran Israel War Causes Massive Fall In Mumbai Stock Market Rupee Falls All Time Low

ಇರಾನ್ ಯುದ್ಧದ ಪರಿಣಾಮವಾಗಿ ಭಾರತೀಯ ಷೇರುಪೇಟೆ ಭಾರೀ ಕುಸಿತ ಕಂಡಿದ್ದು, ಹೂಡಿಕೆದಾರರು ಲಕ್ಷಾಂತರ ಕೋಟಿ ನಷ್ಟ ಅನುಭವಿಸಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠಕ್ಕೆ ಇಳಿದಿದೆ. ಒಂದೇ ದಿನ 53 ಪೈಸೆ ಕುಸಿದು 92.35 ರು.ಗೆ ಮುಕ್ತಾಯವಾಗಿದೆ. ಇದು ಇದುವರೆಗಿನ ಸಾರ್ವಕಾಲಿಕ ಕನಿಷ್ಠ.

ಮುಂಬೈ: ಇರಾನ್ ಯುದ್ಧದ ಪರಿಣಾಮ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಒಂದೇ ದಿನ ಭಾರೀ ಪ್ರಮಾಣದಲ್ಲಿ ಕುಸಿದಿವೆ. ಸೆನ್ಸೆಕ್ಸ್ 1,352.74 ಅಂಕ ಕುಸಿದು 77,566 ಅಂತ್ಯಗೊಂಡಿದ್ದರೆ ನಿಫ್ಟಿ 422.4 ಅಂಕ ಇಳಿದು 24,028ರಲ್ಲಿ ಮುಕ್ತಾಯಗೊಂಡಿದೆ. ಷೇರು ಮಾರುಕಟ್ಟೆಯಲ್ಲಿನ ಈ ನಕಾರಾತ್ಮಕ ಬದಲಾವಣೆ ಪರಿಣಾಮ ಹೂಡಿಕೆದಾರರು ಒಂದೇ ದಿನ ಬರೋಬ್ಬರಿ 12.78 ಲಕ್ಷ ಕೋಟಿ ರು. ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಆರಂಭವಾದ ಬಳಿಕ ಭಾರತೀಯ ಷೇರುಪೇಟೆಯು ಕಳೆದ 10 ದಿನದಲ್ಲಿ 31 ಲಕ್ಷ ಕೋಟಿ ರು.ನಷ್ಟು ಇಳಿಕೆ ಕಂಡಿದೆ.

ರೂಪಾಯಿ ಮೌಲ್ಯ 92.35ಕ್ಕಿಳಿಕೆ: ಇದು ಸಾರ್ವಕಾಲಿಕ ಕನಿಷ್ಠ

ಮುಂಬೈ: ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆಗೂ ತೀವ್ರ ಪೆಟ್ಟು ಬಿದ್ದಿದೆ. ಡಾಲ‌ರ್ ಎದುರು ರುಪಾಯಿ ಮೌಲ್ಯ ಸೋಮವಾರ ಒಂದೇ ದಿನ 53 ಪೈಸೆ ಕುಸಿದು 92.35 ರು.ಗೆ ಮುಕ್ತಾಯವಾಗಿದೆ. ಇದು ರುಪಾಯಿಯ ಇದುವರೆಗಿನ ಸಾರ್ವಕಾಲಿಕ ಕನಿಷ್ಠ. ಮಧ್ಯಪ್ರಾಚ್ಯ ಬಿಕ್ಕಟ್ಟು, ಕಚ್ಚಾತೈಲ ಬೆಲೆ ಹೆಚ್ಚಳ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹಣ ಹಿಂಪಡೆದಿದ್ದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ.

ಕದನದಿಂದ 2 ಇಂಡಿಗೋ ವಿಮಾನಗಳ ಪರದಾಟ

ನವದೆಹಲಿ: ಇರಾನ್ ಯುದ್ಧ ಆರಂಭವಾದ ಬಳಿಕ ಮೊದಲ ಸಲ ದೆಹಲಿಯಿಂದ ಮ್ಯಾಂಚೆಸ್ಟರ್‌ಗೆ ಹೊರಟಿದ್ದ ಇಂಡಿಗೋ ಸಂಸ್ಥೆಯ ಬೋಯಿಂಗ್ 787 ವಿಮಾನವು ಯೂಟರ್ನ್ ಮಾಡಿಕೊಂಡು ಮತ್ತೆ ದೆಹಲಿಗೆ ಮರಳಿದೆ. ಇದೇ ವೇಳೆ, ಮುಂಬೈ-ಲಂಡನ್ ಇಂಡಿಗೋ ವಿಮಾನ ಕೈರೋದಲ್ಲಿ ಲ್ಯಾಂಡ್‌ ಆಗಿ ಸಂಚಾರ ಸ್ಥಗಿತಗೊಂಡಿದೆ.

ತೈಲ ಉಳಿಸಲು ಪಾಕ್‌ನಲ್ಲಿ 15 ದಿನ ಶಾಲೆ ಬಂದ್

ಇಸ್ಲಾಮಾಬಾದ್‌: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವ ಕಾರಣ, ಪಾಕಿಸ್ತಾನ ಸರ್ಕಾರ ಇಂಧನ ಉಳಿತಾಯಕ್ಕಾಗಿ ಹಲವು ಕ್ರಮ ಘೋಷಿಸಿದೆ. 15 ದಿನಗಳ ಕಾಲ ಶಾಲಾ ಕಾಲೇಜು ಬಂದ್‌, ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ ನಾಲ್ಕೇ ದಿನ ಕೆಲಸ ಸೇರಿದಂತೆ ಹಲವು ನಿಯಮಗಳನ್ನು ಪ್ರಧಾನಿ ಶೆಹಬಾಜ್ ಷರೀಫ್‌ ಘೋಷಿಸಿದ್ದಾರೆ.

ಇರಾನ್ ಕ್ಷಿಪಣಿ ದಾಳಿ: ಭಾರತೀಯನಿಗೆ ಗಾಯ

ಜೆರುಸಲೇಂ: ಇಸ್ರೇಲ್ ಮೇಲೆ ಇರಾನ್ ಭಾನುವಾರ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಓರ್ವ ಭಾರತೀಯ ಗಾಯಗೊಂಡಿದ್ದಾನೆ. ಆತನ ಕುತ್ತಿಗೆಗೆ ಕ್ಷಿಪಣಿಯ ಚೂರು ತಗುಲಿದೆ. ಗಾಯಗೊಂಡ ವ್ಯಕ್ತಿಯು ಟೆಲ್ ಅವಿವ್‌ನ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಸದ್ಯ ಆತನ ಪರಿಸ್ಥಿತಿ ಸುಧಾರಿಸಿದೆ.

ಇದನ್ನೂ ಓದಿ: ಬೀಳ್ಕೊಡುಗೆ ಸಮಾರಂಭಕ್ಕೆ ಬಟ್ಟೆ ತರಲು ಹೋದ ಬಾಲಕನ ದುರಂತ ಸಾವು: ಶವಕ್ಕೆ ಕಲ್ಲು ಕಟ್ಟಿ ಕೆರೆಗೆಸೆದ ಸ್ನೇಹಿತರು



Source link

Leave a Reply

Your email address will not be published. Required fields are marked *