
ಟಿ20 ಮುಕ್ತಾಯಗೊಂಡಿದೆ. ಈ ಬಾರಿಯ ಸ್ಪರ್ಧೆಯಲ್ಲಿ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ನ್ಯೂಝಿಲೆಂಡ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಇತ್ತ ಚಾಂಪಿಯನ್ ಪಟ್ಟ ಅಲಂಕರಿಸಿದ ಟೀಮ್ ಇಂಡಿಯಾಗೆ 27.56 ಕೋಟಿ ರೂ. ಬಹುಮಾನ ಮೊತ್ತ ಸಿಕ್ಕರೆ, ಅತ್ತ ನ್ಯೂಝಿಲೆಂಡ್‌ಗೆ 14.70 ಕೋಟಿ ರೂ. ಲಭಿಸಿದೆ.
ಇನ್ನು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಸಂಜು ಸ್ಯಾಮ್ಸನ್ ಪಾಲಾದರೆ, ಶ್ರೇಷ್ಠ ಪ್ರಶಸ್ತಿಯನ್ನು ಜಸ್ಪ್ರೀತ್ ಬುಮ್ರಾ ಪಡೆದಿದ್ದರು. ಇದರ ಬೆನ್ನಲ್ಲೇ ಟಿ20 ಪಂದ್ಯದ ವೇಳೆ ಕಾಣಿಸಿಕೊಂಡ ಹುಂಡೈ ಕಾರ್ ಸಿಕ್ಕಿದ್ದು ಯಾರಿಗೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಾರ್ ಸಿಕ್ಕಿದ್ದು ಯಾರಿಗೆ?
ಈ ಬಾರಿಯ ಟಿ20 ಆವೃತ್ತಿಯ ಅಧಿಕೃತ ಪಾಲುದಾರರಾಗಿ ಹ್ಯುಂಡೈ ಕಂಪನಿ ಕಾಣಿಸಿಕೊಂಡಿದ್ದರು. ಜೊತೆಗೆ ಪ್ರತಿ ಪಂದ್ಯದ ವೇಳೆ ಮೈದಾನದಲ್ಲಿ ಕ್ರೆಟಾ ಕಾರನ್ನು ಪ್ರದರ್ಶಿಸಲಾಯಿತು. ಇದಾಗ್ಯೂ ಈ ಕಾರ ಪ್ರಶಸ್ತಿಯಾಗಿ ನೀಡಿಲ್ಲ ಎಂಬುದೇ ಸತ್ಯ.
ಟಿ20 ಅಂದರೆ ಯಾವುದೇ ಆಟಗಾರನಿಗೆ ಅಧಿಕೃತವಾಗಿ ಬಹುಮಾನವಾಗಿ ನೀಡಲಾಗಿಲ್ಲ. ಇಲ್ಲಿ ಹುಂಡೈ ಕಂಪನಿಯು ಕ್ರೆಟಾ ಕಾರನ್ನು ಕೇವಲ ಜಾಹೀರಾತಿಗಾಗಿ ಬಳಸಲಾಗಿದೆ. ಇದರ ಹೊರತಾಗಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅಥವಾ ಪ್ಲೇಯರ್ ಆಫ್ ದಿ ಮ್ಯಾಚ್ಗೆ ಕಾರ್ ನೀಡುವುದನ್ನು ತಿಳಿಸಲಿಲ್ಲ.
ಈ ಬಾರಿಯ ಆವೃತ್ತಿಯಲ್ಲಿ 321 ರನ್ ಗಳಿಸಿದ ಸಂಜು ಸ್ಯಾಮ್ಸನ್ ಅವರಿಗೆ ಕಾರು ನೀಡಲಾಗಿದೆ ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಇವೆಲ್ಲವೂ ಫೇಕ್ ನ್ಯೂಸ್. ಬದಲಾಗಿ ಐಸಿಸಿ ಪ್ರಶಸ್ತಿಯಲ್ಲಿ ಕಾರನ್ನು ಪ್ರಶಸ್ತಿಯಾಗಿ ನೀಡುತ್ತಿಲ್ಲ ಎಂಬುದೇ ಸತ್ಯ.
ಈ ಹಿಂದೆ ನೀಡಲಾಗಿತ್ತೇ?
ಐಸಿಸಿ ತನ್ನ ಅಧಿಕೃತ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಆಟಗಾರರಿಗೆ ಕಾರನ್ನು ಬಹುಮಾನವಾಗಿ ನೀಡುವುದಿಲ್ಲ. ಆದರೆ, ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಪ್ರಮುಖ ಪ್ರಯೋಜಕರು ಅಥವಾ ಖಾಸಗಿ ಸಂಸ್ಥೆಗಳು ಆಟಗಾರರಿಗೆ ಉಡುಗೊರೆಯಾಗಿ ನೀಡಿವೆ.
ಅದರಲ್ಲ 1985ರಲ್ಲಿ ನಡೆದ 7 ತಂಡಗಳ ನಡುವಣ ಬೆನ್ಸನ್ ಆಂಡ್ ಹೆಡ್ಜಸ್ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ (ಇದು ಐಸಿಸಿ ಪ್ರಶಸ್ತಿ) ರವಿಶಾಸ್ತ್ರಿ ಅವರು ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪ್ರಶಸ್ತಿ ಗೆದ್ದು ಆಡಿ 100 ಕಾರುಗಳನ್ನು ಪಡೆದಿದ್ದರು. ಇದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧ ಕಾರು ಬಹುಮಾನವಾಗಿದೆ.
ಇದನ್ನೂ ಓದಿ: IPL 2026: ಹೆಚ್ಚುವರಿ ಪಂದ್ಯಗಳು… ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆ
ಹಾಗೆಯೇ ಐಪಿಎಲ್‌ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುವ ಆಟಗಾರನಿಗೆ ಪ್ರಾಯೋಜಕರಾದ ಟಾಟಾ ಕಂಪನಿ ಪ್ರತಿ ಸೀಸನ್‌ಗೆ ಬಹುಮಾನವಾಗಿ ನೀಡಲಾಗುತ್ತದೆ. ಅದರಂತೆ ಕಳೆದ ಬಾರಿ 206.55 ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದ ಯುವ ಎಡಗೈ ದಾಂಡಿಗ ವೈಭವ್ ಸೂರ್ಯವಂಶಿ ಟಾಟಾ ಕರ್ವ್ ಕಾರನ್ನ ಪ್ರಶಸ್ತಿಯಾಗಿ ಪಡೆದಿದ್ದರು.