Headlines

ಭಾಗ್ಯ-ಆದಿ ಜೋಡಿ ನೋಡೋಕೆ ಅಸಹ್ಯ ಎಂದ ವೀಕ್ಷಕರು…. ಹೆಂಗಸರಿಗೆ ವಯಸ್ಸಾದ ಮೇಲೆ ಪ್ರೀತಿ ಆಗೋದೆ ತಪ್ಪಾ?

ಭಾಗ್ಯ-ಆದಿ ಜೋಡಿ ನೋಡೋಕೆ ಅಸಹ್ಯ ಎಂದ ವೀಕ್ಷಕರು…. ಹೆಂಗಸರಿಗೆ ವಯಸ್ಸಾದ ಮೇಲೆ ಪ್ರೀತಿ ಆಗೋದೆ ತಪ್ಪಾ?

ಭಾಗ್ಯ-ಆದಿ ಜೋಡಿ ನೋಡೋಕೆ ಅಸಹ್ಯ ಎಂದ ವೀಕ್ಷಕರು…. ಹೆಂಗಸರಿಗೆ ವಯಸ್ಸಾದ ಮೇಲೆ ಪ್ರೀತಿ ಆಗೋದೆ ತಪ್ಪಾ?

Bhagyalakshmi: ಭಾಗ್ಯ ಲಕ್ಷ್ಮೀ ಧಾರಾವಾಹಿ ವೀಕ್ಷಕರು ಭಾಗ್ಯ ವಿರುದ್ಧ ಕಿಡಿ ಕಾರಿದ್ದಾರೆ. ತಾಂಡವ್ ಈ ವಯಸ್ಸಲ್ಲಿ ಮದುವೆಯಾಗಿದ್ರೂ ಅದನ್ನು ಒಪ್ಪಿಕೊಳ್ಳುವ ಜನ, ಭಾಗ್ಯಗೆ ಈ ವಯಸ್ಸಲ್ಲಿ ಲವ್ ಆಗಿರುವ ಬಗ್ಗೆ ಮಾತ್ರ ಗರಂ ಆಗಿದ್ದಾರೆ. ಭಾಗ್ಯ-ಆದಿ ಲವ್ ಮಾಡಿದ್ದು ತಪ್ಪು ಹೇಗಾಗುತ್ತೆ?

ಭಾಗ್ಯಲಕ್ಷ್ಮೀ ಧಾರಾವಾಹಿಯನ್ನು ಇಷ್ಟು ದಿನ ಹೊಗಳುತ್ತಾ ಬಂದವರು, ಇದೀಗ ಕೆಲವು ವೀಕ್ಷಕರು ಆ ಬಗ್ಗೆ ಅಪಸ್ವರ ಎತ್ತಿದ್ದಾರೆ. ಇಷ್ಟು ದಿನ ಭಾಗ್ಯಳಿಗೆ ಬೆಂಬಲ ನೀಡುತ್ತಾ, ತಾಂಡವ್ ವಿರುದ್ಧ ಕಿಡಿ ಕಾರುತ್ತಾ ಬಂದ ಜನ, ತಾಂಡವ್ ಬದಲಾಗುತ್ತಿದ್ದಂತೆ, ತಾವು ಕೂಡ ಬದಲಾಗಿದ್ದಾರೆ. ಯಾವಾ ಆದಿ ಮತ್ತು ಭಾಗ್ಯ ಪ್ರೀತಿ ಶುರುವಾಯ್ತೋ, ಕೆಲವು ವೀಕ್ಷಕರಿಗೆ ಇದನ್ನು ಸಹಿಸೋದಕ್ಕೆ ಸಾಧ್ಯ ಆಗ್ತಾ ಇಲ್ಲ. ಹಾಗಾಗಿ ಭಾಗ್ಯ ವಿರುದ್ಧ ಭಾರಿ ವಾಗ್ಧಾಳಿನೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಏನಾಗ್ತಿದೆ ಧಾರಾವಾಹಿಯಲ್ಲಿ? ವೀಕ್ಷಕರು ಗರಂ ಆಗಿರೋದು ಯಾಕೆ ನೋಡೋಣ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಇದೀಗ ತಾಂಡವ್ ಬದಲಾಗಿದ್ದಾನೆ. ಶ್ರೇಷ್ಠಾ ನಿಜವಾದ ಮುಖ ಬಯಲಾದ ಬಳಿಕ ತಾಂಡವ್ ಇನ್ನು ನಾನು ಇಲ್ಲಿರೋದು ಸರಿ ಅಲ್ಲ ಎನ್ನುತ್ತಾ, ಮತ್ತೆ ಮನೆಗೆ ಮರಳಿದ್ದಾನೆ. ಭಾಗ್ಯ ಸೇರಿ ಮನೆಮಂದಿ ಮುಂದೆ ಕ್ಷಮೆ ಕೇಳಿದ್ದಾನೆ. ಆದರೆ ಭಾಗ್ಯ ಮತ್ತು ಕುಸುಮಾಗೆ ಇನ್ನೂ ತಾಂಡವ್ ಮೇಲೆ ನಂಬಿಕೆ ಬಂದಿಲ್ಲ. ಆದರೆ ಸುನಂದ ಮಾತ್ರ ಭಾಗ್ಯ ಏನೋ ತಪ್ಪು ಮಾಡ್ತಿದ್ದಾಳೆ ಎನ್ನುವಂತೆ, ಅಳಿಯಂದಿರ ಪರ ವಹಿಸಿಕೊಂಡು ಬಂದಿದ್ದಾರೆ. ಇದರ ನಡುವೆ ಭಾಗ್ಯಾಳಿಗೂ ಸಹ ಆದಿ ಮೇಲೆ ಪ್ರೀತಿ ಉಂಟಾಗಿದೆ.

ಕೆಲವು ವೀಕ್ಷಕರು ಭಾಗ್ಯ ಪರ ಧ್ವನಿ ಎತ್ತಿದ್ದು, ಎಷ್ಟು ಕಷ್ಟ ಕೊಡುತ್ತಿರ ಈ ಭಾಗ್ಯಗೆ, ಆ ಕೋಣ ತಾಂಡವ ಇಂದ ಮೊದಲು ನೆಮ್ಮದಿ ಇಲ್ಲ, ಡಿವೋರ್ಸ್ ಆದ ಮೇಲು ನೆಮ್ಮದಿ ಇಲ್ಲ, ಭಾಗ್ಯ ಹೊಸ ಜೀವನ ಶುರು ಮಾಡಿ ಆರಂ ಆಗಿ ಇರುತ್ತಾಳೆ ಅಂತ ಅಂದ್ರೆ, ಆ ಕೋಣ ದಿಂದ ನೆಮ್ಮದಿ ಇಲ್ಲ, ಮಗಳಿಂದ ನೆಮ್ಮದಿ ಇಲ್ಲ, ಸಾಕು ಈ ಸೀರಿಯಲ್ ಮುಗಿಸಿ ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ ಇಷ್ಟು ದಿನ ತಾಂಡವ್ ಗೆ ಭಾಗ್ಯ ಬೇಕಿರಲಿಲ್ಲ.ಇನ್ನೊಬ್ಬಳನ್ನು ಕಟ್ಟಿಕೊಂಡ.ಇವಾಗ ಆದಿ ಭಾಗ್ಯ ಮದುವೆ ಆಗಿ ಬಿಡುತ್ತಾರೆ ಅಂತ ನಾಟಕ ಮಾಡುತ್ತಾ ಬಂದ, ಯಾಕೇನಮ್ಮ ಭಾಗ್ಯಾ,,,, ಆದಿ ಜೊತೆ ಮರು ಮದುವೆ ಆದ್ರೇ ತಪ್ಪೇನಿದೆ, ಪವಿತ್ರ ಸ್ನೇಹ ಆದಿ ಭಾಗ್ಯದು. ಮದುವೆ ಆಗಲಿ. ಇನ್ನಾದರೂ ನೆಮ್ಮದಿಯಾಗಿ ಇರಲಿ ಬಿಡಿ. ಮಕ್ಕಳಿಗೆ, ಹೆತ್ತವರಿಗೆ , ಅತ್ತೆ ಮಾವನಿಗೆ ಒಳ್ಳೇ ಮಗ ಆಗಲಿಲ್ಲ, ಒಳ್ಳೇ ತಂದೆ ಆಗಲಿಲ್ಲ, ಒಳ್ಳೇ ಅಳಿಯ ನೂ ಆಗಿಲ್ಲಾ ಎಂದಿದ್ದಾರೆ.

ತಾಂಡವ್ ಹೇಗೆ ಇರಬಹುದು, ಆದರೆ ಈಗ ಅವನು ಬದಲಾಗಿದ್ದಾರೆ. ಮಕ್ಕಳಿಗೆ ಅಪ್ಪ ಅವನೇ. ಅವರ ಅಪ್ಪ ಅಮ್ಮನಿಗೆ ಮಗ ಅವನೇ. ಭಾಗ್ಯ ಗಂಡನ ಜೊತೆ ಇರೋದೆ ಸರಿ. ಇಲ್ಲ ಒಬ್ಬಳೇ ಫೇಸ್ ಮಾಡಿ ಸೈ ಅನಿಸಿಕೊಂಡು, ಈಗ ಆದಿಯಿಂದ ಕೆಟ್ಟವಳಾಗುತ್ತಿದ್ದಾಳೆ ಎಂದು ಒಬ್ಬರು ಹೇಳಿದ್ರೆ, ಮತ್ತೊಬ್ಬರು ಈ ಹುಡುಗಿಗೆ ಇರೋ ಬುದ್ಧಿ ಈ ಸೀರಿಯಲ್ ನಲ್ಲಿ ಭಾಗ್ಯ ಗೆ ಇಲ್ಲ. ಅವರಜ್ಜಿ ಕುಸುಮಗು ಇಲ್ಲ,ಇವಳಿಗೆ ಇಷ್ಟು ದೊಡ್ಡ ಮಗಳು ಇದ್ದರೂ ಮದ್ವೆ ಬೇಕಾ,ಗಂಡ ಇಲ್ಲದೆ ಇಷ್ಟು ವರ್ಷ ಬದುಕಿಲ್ವ. ಎಷ್ಟು ಜನರಿಗೆ ಸ್ಪೂರ್ತಿ ಆಗಲ್ವಾ ಮದ್ವೆ,ಈ ವಯಸ್ಲೇ ಲವ್ ಎಲ್ಲ ಬೇಕಾ ಅಂಥ.

ಥು ಡಬ್ಬ ಸೀರಿಯಲ್. ಎಷ್ಟು ದೊಡ್ಡ ಮಗಳು ಇರಬೇಕಾದ್ರೆ ಈ ಭಾಗ್ಯ ಗೇ ಲವ್ ಬೇಕಿತ್ತಾ? ಥು ಥು ಥು. ಆ ಆದಿಗೆ ಪ್ರಪೋಸ್ ಮಾಡೋದಂತೆ, ಐ ಲವ್ ಯು ಅಂತೆ, ವಾಕರಿಕೆ ಬರ್ತಾ ಇದೆ. ಈ ಸೀರಿಯಲ್ ನೋಡಿ, ಬೇಗ ಮುಗಸಬಿಡ್ರಪ್ಪ. ಇಲ್ಲಾ ಅಂದ್ರೇ ತಾಂಡವ್ ಭಾಗ್ಯ ಒಂದಾಗಬೇಕು. ಅದು ಇಲ್ಲಾ ಅಂದ್ರೇ ಭಾಗ್ಯ ಮಕ್ಕಳನ್ನ ತಾನೇ ನೋಡ್ಕೋಬೇಕು. ಒಟ್ಟನಲ್ಲಿ ಆದಿ ನಾ ಮದ್ವೆ ಆಗ್ಬಾರ್ದು. ಹಿಂದಿ ಅನುಪಮಾ ಸೀರಿಯಲ್ ತರ ಸ್ಟೋರಿ ಮಾಡ್ಬೇಡಿ ಹಿಂದಿ ಯಲ್ಲಿ 2,3,ಮದ್ವೆ ಆದ್ರೆ ನಡಿಯುತ್ತೆ ಆದ್ರೆ ನಮ್ಮಲ್ಲಿ ಅದನ್ನ ಯಾರೂ ಒಪ್ಪಕೊಳಲ್ಲ ಅದು ಸರೀನೇ ಅಲ್ಲ, ಭಾಗ್ಯದು ಚಿಕ್ಕ ವಯಸ್ಸಾಗಿದ್ರೆ, ಮಕ್ಕಳು ಸಣ್ಣವರಿದ್ರೆ ಮದ್ವೆ ಆಗೋದ್ರಲ್ಲಿ ಒಂದ್ ಅರ್ಥ್ ಇತ್ತು. ಎದೆ ಉದ್ದ ಮಕ್ಕಳಿಟ್ಟುಕೊಂಡು ಇದೆಲ್ಲ ಬೇಕಾ ಇವಳಿಗೆ ಅಂತ ಪ್ರಶ್ನೆ ಮಾಡಿದ್ದಾರೆ ಜನ.

ಗಂಡಸಾದವನು ವಯಸ್ಸು 50, 60, 70 ಆದ್ರೂ, ಮಕ್ಕಳಿಗೆ ಮದುವೆಯಾಗಿ ಮಕ್ಕಳಾದ್ರೂ, ಮತ್ತೆ ಮದುವೆಯಾಗಬಹುದು ಅಂತೆ. ಹಾಗಿದ್ರೆ ಅದನ್ನೇ ಹೆಂಗಸರು ಮಾಡಿದ್ರೆ ತಪ್ಪೇನು? ಯಾಕೆ ಹೆಂಗಸರಿಗೆ ವಯಸ್ಸಲ್ಲದ ವಯಸ್ಸಲ್ಲಿ ಮತ್ತೆ ಪ್ರೀತಿ ಆಗ್ಬಾರ್ದಾ? ಭಾಗ್ಯ ಇಲ್ಲಿವರೆಗೆ ಜೀವನದಲ್ಲಿ ಸಂಗಾತಿಯ ಪ್ರೀತಿಯನ್ನೇ ಕಂಡಿಲ್ಲ. ಅಂತದ್ರಲ್ಲಿ ಈ ಸಮಯದಲ್ಲಿ ಪ್ರೀತಿ ಸಿಕ್ಕಿದೆ ಅಂದ ಮೇಲೆ ಅದನ್ನು ಒಪ್ಪಿಕೊಂಡರೆ ತಪ್ಪೇನು? ಇಬ್ಬರು ಎದೆಯೆತ್ತರ ಬೆಳೆದ ಮಕ್ಕಳು ಇದ್ದು, ಅವರನ್ನು ಬಿಟ್ಟು, ಹೆಂಡತಿ, ಅಪ್ಪ-ಅಮ್ಮನ್ನ ಬಿಟ್ಟು ಡಿವೋರ್ಸ್ ಕೊಟ್ಟು ಬೇರೆ ಮದುವೆಯಾದ ತಾಂಡವ್ ಗೆ ಇಲ್ಲದ ರೂಲ್ಸ್, ಏನೂ ತಪ್ಪು ಮಾಡದೇ, ಈ ವಯಸ್ಸಲ್ಲಿ ಪ್ರೀತಿಯಾಗಿರುವ ಭಾಗ್ಯಾಗೆ ಯಾಕೆ?

Source link

Leave a Reply

Your email address will not be published. Required fields are marked *