ಶಿವಮೊಗ್ಗ ಶಾದಿ ಮಹಲ್‌ಗಳಲ್ಲಿ ಚಿನ್ನ ಕದಿಯುತ್ತಿದ್ದ ಮಹಿಳೆ ಅರೆಸ್ಟ್; ₹18 ಲಕ್ಷದ ಬಂಗಾರ ಜಪ್ತಿ! | Shivamogga Police Arrest Lady Thief Rukhsar Firdous In Shadi Mahal Gold Theft Case Sat

ಮದುವೆ ಸಮಾರಂಭಗಳ ಗದ್ದಲವನ್ನೇ ಬಂಡವಾಳ ಮಾಡಿಕೊಂಡು, ಅತಿಥಿಗಳ ಸೋಗಿನಲ್ಲಿ ಬಂದು ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಚಾಲಾಕಿ ಮಹಿಳೆಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯಿಂದ ಬರೊಬ್ಬರಿ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ನಗರದ ಹೊರವಲಯದ ಸೂಳೆಬೈಲ್ ನಿವಾಸಿ ರುಕ್ಸಾರ್ ಫಿರ್ದೋಸ್ (30) ಬಂಧಿತ ಆರೋಪಿ. ಈಕೆ ನಗರದ ವಿವಿಧ ಶಾದಿ ಮಹಲ್‌ಗಳಲ್ಲಿ ನಡೆಯುತ್ತಿದ್ದ ಮುಸ್ಲಿಂ ವಿವಾಹ ಮಹೋತ್ಸವಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದಳು. ಮದುವೆ ಮನೆಗೆ ಅತ್ಯಂತ ಆಪ್ತ ಸಂಬಂಧಿಕಳಂತೆ ಎಂಟ್ರಿ ಕೊಡುತ್ತಿದ್ದ ಈಕೆ, ಅಲ್ಲಿನ ಮಹಿಳೆಯರೊಂದಿಗೆ ನಗುನಗುತ್ತಲೇ ಬೆರೆತು ಅವರ ವಿಶ್ವಾಸ ಗಳಿಸುತ್ತಿದ್ದಳು. ನಂತರ ಸಮಯ ಸಿಕ್ಕಾಗ ಅತಿಥಿಗಳ ಬ್ಯಾಗ್ ಅಥವಾ ಮೈಮೇಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು.

Source link

Leave a Reply

Your email address will not be published. Required fields are marked *