ಸೂರ್ಯಕುಮಾರ್​ ಯಾದವ್​​ಗೆ ಅದೃಷ್ಟ ತಂದುಕೊಟ್ಟ ಕಾಪು ಮಾರಿಯಮ್ಮ: ಟಿ20 ವಿಶ್ವಕಪ್​​ ಗೆಲುವಿನ ಬೆನ್ನಲ್ಲೇ ವಿಶೇಷ ಪೂಜೆ

ಸೂರ್ಯಕುಮಾರ್​ ಯಾದವ್​​ಗೆ ಅದೃಷ್ಟ ತಂದುಕೊಟ್ಟ ಕಾಪು ಮಾರಿಯಮ್ಮ: ಟಿ20 ವಿಶ್ವಕಪ್​​ ಗೆಲುವಿನ ಬೆನ್ನಲ್ಲೇ ವಿಶೇಷ ಪೂಜೆ


ಸೂರ್ಯಕುಮಾರ್ ಯಾದವ್ ಗೆ ಅದೃಷ್ಟ ತಂದುಕೊಟ್ಟ ಕಾಪು ಮಾರಿಯಮ್ಮ: ಟಿ20 ಗೆಲುವಿನ ಬೆನ್ನಲ್ಲೇ ವಿಶೇಷ ಪೂಜೆ

ಉಡುಪಿ, ಮಾರ್ಚ್ 10: ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಾಡಿ ಟಿ20ನ ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತನ್ನ ಮುಡಿಗೇರಿಸಿಕೊಂಡಿದೆ. ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ ಅವರಿಗೆ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದೊಂದಿಗೆ ವಿಶೇಷ ಭಕ್ತಿಭಾವದ ನಂಟಿದ್ದು, ಉಡುಪಿಯ ಅಳಿಯನ ಹೆಸರಲ್ಲಿ ವಿಶೇಷ ಪೂಜೆಗೆ ಕಾಪು ಕ್ಷೇತ್ರದಲ್ಲಿ ಸಿದ್ಧತೆ ಭರದಿಂದ ಸಾಗಿದೆ.

ಸೂರ್ಯಕುಮಾರ್ ಯಾದವ್ ಅವರ ಪತ್ನಿ ದೇವಿಶಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಲದವರು. ಇವರ ಕುಟುಂಬ ಸದ್ಯ ಮುಂಬೈನಲ್ಲಿ ವಾಸವಾಗಿದೆ. ಆದರೆ ಕಾಪು ಹೊಸ ಮಾರಿಯಮ್ಮ ದೇವಸ್ಥಾನವು ಸೂರ್ಯಕುಮಾರ್ ಯಾದವ್ ಪತ್ನಿಯ ಕುಟುಂಬದ ಆರಾಧ್ಯ ಕ್ಷೇತ್ರವಾಗಿದೆ. ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ದಂಪತಿ ಎರಡು ಬಾರಿ ಕಾಪು ಮಾರಿಗುಡಿಗೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ. 2024ರ ಜುಲೈ 9ರಂದು ಅವರು ಕಾಪು ಮಾರಿಗುಡಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಾಲಯಕ್ಕೆ ಕಂಬವನ್ನು ದಾನವಾಗಿ ನೀಡಿದ್ದರು. ಅದರ ನಂತರ ಕೇವಲ 9 ದಿನಗಳಲ್ಲಿ, ಜುಲೈ 18 ರಂದು ಸೂರ್ಯಕುಮಾರ್ ಯಾದವ್ ಅವರನ್ನು ಭಾರತೀಯ ಟಿ20 ಕ್ರಿಕೆಟ್ ತಂಡದ ನಾಯಕನಾಗಿ ಘೋಷಿಸಲಾಯಿತು.

ಇದನ್ನೂ ಓದಿ: ಟಿ20 ನಿಂದ ಗೆದ್ದು ಇತಿಹಾಸವನ್ನೇ ಬುಡಮೇಲು ಮಾಡಿದ ಟೀಂ ಇಂಡಿಯಾ

ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಚಕರು, ಮುಂದಿನ ದಿನಗಳಲ್ಲಿ ಸೂರ್ಯಕುಮಾರ್ ಭಾರತೀಯ ತಂಡದ ನಾಯಕನಾಗಲೆಂದು ಆಶೀರ್ವದಿಸಿದರು. ದೇವಿಯ ಸನ್ನಿಧಿಯಲ್ಲಿ ಅವರಾಡಿದ್ದ ಮಾತು ಸತ್ಯವಾಗಿತ್ತು. ಆದರೆ ಗೆಲುವಿನ ಬೆನ್ನಲ್ಲೇ ಇದೀಗ ಸೂರ್ಯಕುಮಾರ್ ಯಾದವ್ ದಂಪತಿ ಮತ್ತೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ದೇವಸ್ಥಾನದ ಪ್ರಮುಖರು ಸಂಕಲ್ಪ ಮಾಡಿಕೊಂಡಿದ್ದಾರೆ. ಇದೇ ವೇಳೆ ದೇವಿಗೆ ಬೆಲ್ಲ ಮತ್ತು ಸಕ್ಕರೆಯ ತುಲಾಭಾರ ನಡೆಸುವ ಸಂಕಲ್ಪವನ್ನೂ ಭಕ್ತರು ಮಾಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *