Headlines

ಸವೆದ ಸೋಪ್ ಕಸವಲ್ಲ, ಮರುಬಳಕೆ ವಿಧಾನ ತಿಳಿದಿದ್ರೆ ಹಣ ಉಳಿಸ್ಬಹುದು

ಸವೆದ ಸೋಪ್ ಕಸವಲ್ಲ, ಮರುಬಳಕೆ ವಿಧಾನ ತಿಳಿದಿದ್ರೆ ಹಣ ಉಳಿಸ್ಬಹುದು

ಸವೆದ ಸೋಪ್ ಕಸವಲ್ಲ, ಮರುಬಳಕೆ ವಿಧಾನ ತಿಳಿದಿದ್ರೆ ಹಣ ಉಳಿಸ್ಬಹುದು

Leftover Soap Reuse Ideas :‌ ಸೋಪ್ ಸವೆದು ಚಿಕ್ಕದಾದಾಗ ಅದನ್ನು ಬಳಸೋದು ಕಷ್ಟ. ಸಾಮಾನ್ಯವಾಗಿ ಸವೆದ ಸೋಪನ್ನು ನಾವು ಕಸಕ್ಕೆ ಹಾಕ್ತೇವೆ. ಆದ್ರೆ ಡಸ್ಟ್ ಬಿನ್ ಸೇರುವ ಸೋಪನ್ನು ನೀವು ಮರುಬಳಕೆ ಮಾಡ್ಬಹುದು.

ಸೋಪ್ ಸವೆದಾಗ ಕೆಲವರು ಅದನ್ನು ಕಸಕ್ಕೆ ಹಾಕ್ತಾರೆ. ಮತ್ತೆ ಕೆಲವರ ಬಾತ್ ರೂಮಿ ಮೂಲೆಯಲ್ಲಿ ಈ ಸೋಪ್ ಚೂರು ಬಿದ್ದು ಧೂಳಾಗಿರುತ್ತೆ. ಇಂಥ ಸೋಪನ್ನು ನೀವು ಸಣ್ಣಪುಟ್ಟ ಕೆಲ್ಸಕ್ಕೆ ಬಳಸ್ಬಹುದು. ಸವೆದ ಸೋಪ್ ನಿಂದಲೂ ಪ್ರಯೋಜನವಿದೆ.

ಚಳಿಗಾಲ, ಮಳೆಗಾಲದಲ್ಲಿ ಕಪಾಟಿನಲ್ಲಿಟ್ಟ ಬಟ್ಟೆಯಿಂದ ವಾಸನೆ ಬರ್ತಿರುತ್ತೆ. ಮಾರ್ಕೆಟ್ ನಲ್ಲಿ ಸಿಗೋ ಸ್ಪ್ರೇಯನ್ನು ಎಷ್ಟೇ ಬಟ್ಟೆಗೆ ಹಾಕಿದ್ರೂ ಕೆಲವೊಮ್ಮೆ ವಾಸನೆ ಹೋಗೋದಿಲ್ಲ. ಸ್ಪ್ರೇ ಬದಲು ನೀವು ಸವೆದ ಸೋಪನ್ನು ಬಳಸಬಹುದು. ಬಟ್ಟೆ ವಾರ್ಡ್ರೋಬ್ ಅಥವಾ ಶೂ ರ್ಯಾಕ್ ತೇವಾಂಶದಿಂದ ಕೂಡಿದ್ರೆ ಮಸ್ಲಿನ್ ಬಟ್ಟೆಯಲ್ಲಿ ಒಣ ಸೋಪನ್ನು ಹಾಕಿ ವಾರ್ಡ್ರೋಬ್ ನಲ್ಲಿಡಿ.

ಸ್ಟಿಚ್ಚಿಂಗ್ ಅಭ್ಯಾಸ ಇರುವವರು, ಚಾಕ್ ಪೀಸ್ ಬದಲು ಸೋಪ್ ಬಳಸಬಹುದು. ಟೈಲರ್ ಗಳಿಗೆ ಚಾಕ್ ಪೀಸ್ಗಿಂತ ಸೋಪು ಉತ್ತ. ಬಟ್ಟೆ ತೊಳದಾಗ ಚಾಕ್ ಪೀಸ್ ನಂತೆ ಕಲೆ ನಿಲ್ಲೋದಿಲ್ಲ. ಬಟ್ಟೆ ಇದ್ರಿಂದ ಕೊಳಕಾಗೋದಿಲ್ಲ.

ನಿಮ್ಮ ಮನೆಯಲ್ಲಿ ಸವೆದ ಸೋಪ್ ಬಾರ್ ಇದ್ರೆ ಅದನ್ನು ಸಂಗ್ರಹಿಸಿಡಿ. ಅದನ್ನು ಕೀಟನಾಶಕವಾಗಿ ಬಳಕೆ ಮಾಡ್ಬಹುದು. ಗಿಡಗಳಲ್ಲಿ ಕಾಣಿಸಿಕೊಳ್ಳುವ ಕೀಟಗಳನ್ನು ಈ ಸೋಪ್ ನಿಂದ ದೂರ ಓಡಿಸ್ಬಹುದು. ಮೊದಲು ಸೋಪನ್ನು ನೀರಿನಲ್ಲಿ ಕರಗಿಸಿ. ನೀರಿನಲ್ಲಿ ಸೋಪ್ ಕರಗಿದ ಮೇಲೆ ಆ ನೀರನ್ನು ಗಿಡಗಳಿಗೆ ಸಿಂಪಡಿಸಿ. ಇದು ಉತ್ತಮ ಕೀಟನಾಶಕವಾಗಿ ಕೆಲ್ಸ ಮಾಡುತ್ತದೆ. ಆದ್ರೆ ಅತಿ ಹೆಚ್ಚು ಪ್ರಮಾಣದಲ್ಲಿ ಸೋಪ್ ಬಳಸಬಾರದು. ಮಿತಿ ಮೀರಿದ್ರೆ ಗಿಡ ಹಾಳಾಗುವ ಸಾಧ್ಯತೆ ಇರುತ್ತದೆ.

ಮನೆ ಬಾಗಿಲು, ಕಿಟಕಿಯಲ್ಲಿ ಶಬ್ಧ ಬರ್ತಿರುತ್ತದೆ. ಈ ಶಬ್ಧವನ್ನು ತೆಗೆಯುವ ಸಾಮರ್ಥ್ಯ ಸೋಪಿಗಿದೆ. ನೀವು ಶಬ್ಧ ಬರುವ ಬಾಗಿಲಿಗೆ ಈ ಸೋಪನ್ನು ಉಜ್ಜಬೇಕು. ಇದ್ರಿಂದ ಶಬ್ಧ ನಿಲ್ಲುತ್ತದೆ.

ಹಳೆಯ ಜಾಕೆಟ್, ಬ್ಯಾಗ್ ಅಥವಾ ಜೀನ್ಸ್ನ ಜಿಪ್ ಸರಿಯಾಗಿ ಕೆಲ್ಸ ಮಾಡ್ತಿಲ್ಲ ಎಂದಾದ್ರೆ ನೀವು ಸೋಪ್ ಬಾರ್ ಬಳಕೆ ಮಾಡ್ಬಹುದು. ಈ ಸೋಪ್ ಬಾರನ್ನು ಜಿಪ್ ಮೇಲೆ ನಿಧಾನವಾಗಿ ಉಜ್ಜಬೇಕು. ನಂತ್ರ ಜಿಪ್ಪನ್ನು ಮೇಲೆ ಕೆಳಗೆ ಮಾಡ್ಬೇಕು. ಸ್ಟ್ರಕ್ ಆಗಿದ್ದ ಜಿಪ್ ಇದ್ರಿಂದ ಸರಿಯಾಗುತ್ತದೆ. ಸೋಪ್ ಲೂಬ್ರಿಕಂಟ್ ಆಗಿ ಕೆಲ್ಸ ಮಾಡುತ್ತದೆ.

ಶೂ ಹಾಗೂ ಸಾಕ್ಸ್ ನಿಂದ ವಾಸನೆ ಬರ್ತಿರುತ್ತದೆ. ಎಷ್ಟೇ ವಾಶ್‌ ಮಾಡಿದ್ರೂ ವಾಸನೆ ಹೋಗೋದಿಲ್ಲ.  ನೀವು ಈ ವಾಸನೆ ತೆಗೆಯಲು ಸೋಪ್ ಬಳಕೆ ಮಾಡ್ಬಹುದು. ರಾತ್ರಿ ಶೂ ಒಳಗೆ ಅಥವಾ ಸಾಕ್ಸ್ ಒಳಗೆ ಸೋಪ್ ಹಾಕಿಡಿ. ಬೆಳಿಗ್ಗೆ ಅದನ್ನು ತೆಗೆಯಿರಿ.

ಸವೆದ ಸೋಪನ್ನು ನೀವು ಬಾತ್ ರೂಮ್ ಫ್ರೆಶ್ ಆಗಿಡಲು ಬಳಸಬಹುದು. ಒಂದು ಬಟ್ಟಲಿನಲ್ಲಿ ಅಥವಾ ಜಾಲರಿಯಲ್ಲಿ ಸೋಪ್ ಬಾರ್ ಹಾಕಿ, ಬಾತ್ ರೂಮಿನಲ್ಲಿಡಿ. ಬಾತ್ ರೂಮ್ ತೇವಗೊಂಡಾಗ ಸೋಪ್ ನಿಂದ ಸುವಾಸನೆ ಬಿಡುಗಡೆಯಾಗುತ್ತದೆ. ಬಾತ್ ರೂಮ್ ಫ್ರೆಶ್ ಆಗಿರುತ್ತದೆ.

Source link

Leave a Reply

Your email address will not be published. Required fields are marked *